ದಾವಣಗೆರೆ :ಕೇಂದ್ರೀಯ ಸಶಸ್ತ್ರ ತುಕಡಿ (Rapid Action Force) ಇಂದು ನಗರದ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ, ಆ ಠಾಣೆಯ ವ್ಯಾಪ್ತಿಯಲ್ಲಿ ಅಧ್ಯಯನ ಮಾಡಿತು. ನಂತರ ನಗರದ ಅಕ್ತರ್ ರಾಜಾ ವೃತ್ತದಿಂದ ಬಾಷಾ ನಗರ, ಅಜಾದ್ ನಗರ, ಹಳೆ ಬೇತೂರ್ ರಸ್ತೆ, ದುಗ್ಗಮ್ಮ ದೇವಸ್ಥಾನ, ಹೊಂಡದ ವೃತ್ತ ವರೆಗೆ ಪಥ ಸಂಚಲನ ನಡೆಸಿತು.
ಪಥ ಸಂಚಲನದಲ್ಲಿ ಶ್ರೀಮತಿ ನಾಗರಾಜಮ್, ಅಜಾದ್ ನಗರ ಪೊಲೀಸ್ ನಿರೀಕ್ಷಕರಾದ ಇಮ್ರಾನ್ ಬೇಗ್, ಪಿ.ಎಸ್.ಐ ಕಾಂತರಾಜ್, ಶಿವಕುಮಾರ್, ಜಯಪ್ರಕಾಶ್ ಇದ್ದರು.
