ಬೆಂಗಳೂರು: ಚುನಾವಣೆ ವೇಳೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ತಾವು ಬಿಲ್ ಕಟ್ಟುವುದಿಲ್ಲ, ಯಾರೂ ಕಟ್ಟ ಬಾರದು ಎಂದು ಹೇಳಿದ್ದಾರೆ. ಆ ಪ್ರಕಾರವೇ ನಡೆದುಕೊಳ್ಳಬೇಕು. ಒಂದು ವೇಳೆ ವಿದ್ಯುತ್ ಸಂಪರ್ಕ ಕಡಿತ ಮಾಡಲು ಬಂದರೆ ನಾವು ಹೋಗಿ ತಡೆಯುತ್ತವೆ. ಧೈರ್ಯ ವಿದ್ದರೆ ತಡೆಯಲಿ ನೋಡೋಣ ಎಂದು ಅವರು ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ಶಾಸಕ ಆರ್.ಅಶೋಕ್ ಸವಾಲು ಹಾಕಿದ್ದಾರೆ.
ವಿದ್ಯುತ್ ಶುಲ್ಕ ಪಾವತಿ ಮಾಡದವರ ಸಂಪರ್ಕ ಕಡಿತ ಮಾಡಲು ಹೋದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಬಿಜೆಪಿ ಶಾಸಕ ಆರ್.ಅಶೋಕ ಎಚ್ಚರಿಕೆ ನೀಡಿದರು.
ಎಲ್ಲ ಜಾತಿ, ಮತ ಎಂಬ ತಾರತಮ್ಯ ವಿಲ್ಲದೆ ಅನುಷ್ಠಾನ ಮಾಡುವುದಾಗಿ ಹೇಳಿದ್ದಾರೆ. ೨೦೦ ಯುನಿಟ್ ಗಳಷ್ಟು ವಿದ್ಯುತ್ ಉಚಿತ ವಾಗಿ ನೀಡಬೇಕು. ಅದರ ಮೇಲೆ ಒಂದು ಯುನಿಟ್ ಹೆಚ್ಚಾದರೂ ಕಟ್ಟಿಸಿಕೊಳ್ಳಲಿ. ಇದಕ್ಕೆ ಸರ್ಕಾರ ಬದ್ಧವಾಗಿರಬೇಕು ಎಂದರು.
ಪಕ್ಷದ ಸೋಲಿನ ಕುರಿತು ಅವಲೋಕನಕ್ಕಾಗಿ ಆರು ತಂಡಗಳಲ್ಲಿ ಪ್ರವಾಸ ಮಾಡುತ್ತೇವೆ. ಗ್ಯಾರಂಟಿ ಜಾರಿಯಲ್ಲಿ ಲೋಪವಾದರೆ ಅದೇ ಸಂದರ್ಭದಲ್ಲಿ ಹೋರಾಟ ಮಾಡುತ್ತೇವೆ ಎಂದರು.
ಉಚಿತ ವಿದ್ಯುತ್ ಅಲ್ಲದೆ, ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ನಿರುದ್ಯೋಗಿಗಳಿಗೆ ತಿಂಗಳ ಭತ್ಯೆ, ಗೃಹಿಣಿಯರಿಗೆ ತಿಂಗಳ ಭತ್ಯೆಯನ್ನೂ ನೀಡಬೇಕು. ಇದು ಎಲ್ಲ ಸಮುದಾಯದವರಿಗೂ ನೀಡಬೇಕು. ಇದರಲ್ಲಿ ಷರತ್ತುಗಳನ್ನು ಹಾಕಬಾರದು ಎಂದು ಅಶೋಕ ಹೇಳಿದರು.
