police; ರಾಷ್ಟ್ರೀಯ ಏಕತಾ ದಿವಸ: ಪೊಲೀಸರಿಂದ ಪಥ ಸಂಚಲನ
ದಾವಣಗೆರೆ, ಅ.31: ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ರಾಷ್ಟ್ರೀಯ ಏಕತಾ ದಿವಸ -2023ರ ಅಂಗವಾಗಿ ಇಂದು ನಗರದಲ್ಲಿ ಪೊಲೀಸ್ (Police) ಪಥ ಸಂಚಲನ ನಡೆಸಲಾಯಿತು.
ಪಥಸಂಚಲನವು ನಗರದ ಜಯದೇವ ವೃತ್ತದಿಂದ ಆರಂಭವಾಗಿ ಪಿ ಬಿ ರಸ್ತೆ ಮೂಲಕ ಸಾಗಿ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಮುಕ್ತಾಯವಾಯಿತು. ನಂತರ ಕವಾಯತು ಮೈದಾನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ ಸಂತೋಷ್ ರವರು ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೂ ರಾಷ್ಟ್ರೀಯ ಏಕತಾ ದಿವಸ ಹಿನ್ನೆಲೆ ಪ್ರತಿಜ್ಞಾ ವಿಧಿ ಬೋಧಿಸಿದರು.
zameer ahmed; ಸಿಎಂ ಸೀಟ್ ಖಾಲಿ ಇಲ್ಲ, ಇನ್ನು 5 ವರ್ಷ ಸಿದ್ದುನೇ ಸಿಎಂ: ಸಚಿವ ಜಮೀರ್ ಅಹಮದ್
ಪಥಸಂಚಲನ ಹಾಗೂ ಪ್ರತಿಜ್ಞಾ ವಿಧಿ ಸ್ವೀಕರಿಸುವ ಸಂದರ್ಭದಲ್ಲಿ ಡಿವೈಎಸ್ಪಿರವರುಗಳಾದ ಮಲ್ಲೇಶ್ ದೊಡ್ಮನಿ, ಬಿ ನಾಗಪ್ಪ, ಪಿ ಬಿ ಪ್ರಕಾಶ್, ಪೊಲೀಸ್ ನಿರೀಕ್ಷಕರು ಸೇರಿದಂತೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.