karnataka rajyotsava; ಕರುನಾಡ ಕನ್ನಡ ಸೇನೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

ದಾವಣಗೆರೆ, ನ.01: ಕರ್ನಾಟಕವೆಂದು ನಾಮಕರಣವಾಗಿ 50 ವರ್ಷದ ಸುವರ್ಣ ಮಹೋತ್ಸವವನ್ನು ರಾಜ್ಯಾದ್ಯಂತ ಆಚರಿಸಲಾಗುತ್ತಿದ್ದು, ಕರುನಾಡ ಕನ್ನಡ ಸೇನೆಯಿಂದ 68ನೇ ಕನ್ನಡ ರಾಜ್ಯೋತ್ಸವವನ್ನು (Karnataka Rajyotsava ) ಆಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಎ.ಕೆ ಫೌಂಡೇಶನ್ ಅಧ್ಯಕ್ಷರಾದ ಕೆ.ಬಿ ಕೊಟ್ರೇಶ್ ರವರು ಮಾತನಾಡಿ, ಕರ್ನಾಟಕವೆಂದು ನಾಮಕರಣವಾಗಿ 50 ವರ್ಷಗಳ ತುಂಬಿದ ದಿನ ಇಂದು ಈ ದಿನ ರಾಜ್ಯಾದ್ಯಂತ ಸುವರ್ಣ ಮಹೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದ ಅವರು ಕನ್ನಡ ನಾಡು ನುಡಿಯ ವಿಷಯಗಳ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡರು.

police; ರಾಷ್ಟ್ರೀಯ ಏಕತಾ ದಿವಸ: ಪೊಲೀಸರಿಂದ ಪಥ ಸಂಚಲನ

ನಂತರ ನಿವೃತ್ತ ಯೋಧರಾದ ಚಾಮರಸ ಮತ್ತು ಮಹೇಂದ್ರ ಅವರು, ಕನ್ನಡ ನಾಡು ನುಡಿಯ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಗೋಪಾಲಗೌಡರು ಸ್ವಾಗತ ಮಾಡಿ ನಿರೂಪಣೆ ಮಾಡಿದರು.

ನಂತರ ಪರಿಸರ ಸಂರಕ್ಷಣೆ ವೇದಿಕೆಯ ಗಿರೀಶ್ ದೇವರಮನಿ, ಪ್ರಸನ್ನ ಬೆಳೆಕೆರೆ, ನಾಗರಾಜ್ ಸುರ್ವೆ, ಏಸುರಾಜ್, ಮಹಿಳಾಧ್ಯಕ್ಷರಾದ ಸುನಂದವರ್ನೆಕರ್, ದೀಪ, ಸಂಗೀತ, ಮಾಧವಿ, ಗೀತಾಂಜಲಿ, ವಿಜಯ್ ಜಾದವ್, ಉಮಾ ಶಂಕರ್, ಎಂ ಜಿ ಶ್ರೀಕಾಂತ್, ಗಿರೀಶ್, ರಮೇಶ್ ಕೆಎನ್, ಪ್ರಕಾಶ್, ಇನ್ನು ಅನೇಕರು ಭಾಗವಹಿಸಿದ್ದರು. ಕೊನೆಯದಾಗಿ ಉಮಾದೇವಿಯವರು ಕವಿವಾಚನ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!