ವೀರಶೈವ ಲಿಂಗಾಯಿತ ಅರ್ಚಕರ, ಪುರೋಹಿತರ ಅಗಮಿಕರ 5ನೇ ವರ್ಷದ ರಾಷ್ಟ್ರೀಯ ಕಾರ್ಯಾಗಾರ

ಹೊನ್ನಾಳಿ : ಬೆಂಗಳೂರು ಮಹಾಲಕ್ಷ್ಮೀ ಗುರುಕುಲ, ವೈದಿಕ ಚಾರಿಟಬಲ್ ಟ್ರಸ್ಟ್, ಬೆಂಗಳೂರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಇವರುಗಳ ಸಹಯೋಗದಲ್ಲಿ ವೀರಶೈವ ಲಿಂಗಾಯಿತ ಅರ್ಚಕರ, ಪುರೋಹಿತರ ಹಾಗೂ ಅಗಮಿಕರ ಐದನೇ ವರ್ಷದ ರಾಷ್ಟ್ರೀಯ ಕಾರ್ಯಾಗಾರವನ್ನು ಬೆಂಗಳೂರು ವಿಜಯ ನಗರದ ಶ್ರೀ ಸುಜ್ಞಾನ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜುಲೈ 2, 3 ಮತ್ತು 4 ರವರೆಗೆ ನಡೆಯಲಿದೆ ಎಂದು ಮಹಾಲಕ್ಷ್ಮೀ ಗುರುಕುಲ, ವೈದಿಕ ಚಾರಿಟಬಲ್ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಡಾ.ಕೆ.ಎನ್. ರಾಜಕುಮಾರ್ ಶಾಸ್ತ್ರೀ  ತಿಳಿಸಿದರು.

ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಬೆಂಗಳೂರು ನಗರದಲ್ಲಿ ವೀರಶೈವ ಲಿಂಗಾಯಿತ ಅರ್ಚಕ, ಪುರೋಹಿತರ ಶಾಸ್ತ್ರೋಕ್ತ , ಆಗಮೋಕ್ತ ವೈದಿಕತ್ವದ ಬೆಳವಣಿಗೆಗಾಗಿ ಮಹಾಲಕ್ಷ್ಮೀ ಗುರುಕುಲ, ವೈದಿಕ ಚಾರಿಟಬಲ್ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಡಾ.ಕೆ.ಎನ್. ರಾಜಕುಮಾರ್ ಶಾಸ್ತ್ರೀಗಳ ನೇತೃತ್ವದಲ್ಲಿ ಕಳೆದ ಐದು ವರ್ಷಗಳಿಂದ ರಾಷ್ಟ್ರ ಮಟ್ಟದ ವಿಶೇಷ ಕಾರ್ಯಾಗಾರವನ್ನು ಆಯೋಜನೆ ಮಾಡುತ್ತಿದ್ದು ಕಳೆದ ಜನವರಿ 8,9 ಮತ್ತು 10 ರವರೆಗೆ ಆಯೋಜನೆಯನ್ನು ಮಾಡಲಾಗಿದ್ದ ಕಾರ್ಯಕ್ರಮವನ್ನು ಕರೋನಾದಿಂದಾಗಿ ಮುಂದೂಡಲಾಗಿತ್ತು. ಇದೀಗ ಜುಲೈ 2, 3 ಮತ್ತು 4 ಐದನೇ ವರ್ಷದ ಶಿಲಾ ಪ್ರತಿಷ್ಠಾಪನಾ (ಮೂರ್ತಿ ಪ್ರತಿಷ್ಠಾಪನಾ) ವಿಷಯದ ರಾಷ್ಟ್ರೀಯ ತರಬೇತಿಯ ಕಾರ್ಯಾಗಾರವನ್ನು ವಿವಿಧ ಮಠಾಧೀಶರು, ಸರಕಾರಿ ಸಂಸ್ಕೃತ ಕಾಲೇಜಿನ ಕುಲಪತಿಗಳು, ನಿವೃತ್ತ ಪ್ರಾಧ್ಯಾಪಕರು ಪ್ರಸಿದ್ದ ವಿದ್ವಾನ್ ವಿದ್ವಾಂಸರುಗಳು ಹಾಗೂ ಸಚಿವರು ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.

ಮೂರು ದಿನಗಳ ಕಾಲ ನಡೆಯುವ ರಾಷ್ಟç ಮಟ್ಟದ ವಿಶೇಷ ಕಾರ್ಯಾಗಾರದಲ್ಲಿ ವೀರಶೈವಾಗಮ ವಿಧಿ ಪ್ರಕಾರವಾಗಿ ನೂತನ ಶಿಲಾ ಪ್ರತಿಷ್ಠಾಪನಾ (ಮೂರ್ತಿ ಪ್ರತಿಷ್ಠಾಪನಾ) ವಿಷಯ ಕುರಿತು ಹಾಗೂ ಪ್ರತಿಯೊಂದು ಪೂಜಾ ಕಾರ್ಯಕ್ರಮವನ್ನು ಶಾಸ್ತ್ರೋಕ್ತವಾಗಿ ಪೂಜಾ ಕೈಂಕರ್ಯಗಳ ಬಗ್ಗೆ ತರಬೇತಿಯನ್ನು ವೈದಿಕ ಚಾರಿಟಬಲ್ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಡಾ.ಕೆ.ಎನ್. ರಾಜಕುಮಾರ್ ಶಾಸ್ತ್ರೀಗಳ ನೇತೃತ್ವದಲ್ಲಿ ನೀಡಲಾಗುತ್ತಿದ್ದು ರಾಜ್ಯ ಸೇರಿದಂತೆ ಆಂದ್ರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳ 80 ಜನ ಪುರೋಹಿತರನ್ನು ಗುರುತಿಸಿ ರಾಷ್ಟ್ರೀಯ ವೈದಿಕ ಶಿರೋಮಣಿ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಹೇಳಿದರು.

ಹೊನ್ನಾಳಿ ಹೊಳೆಮಠದ ರಾಷ್ಟ್ರೀಯ ವೈದಿಕ ಶಿರೋಮಣಿ ಪ್ರಶಸ್ತಿ: ಹಲವು ವರ್ಷಗಳಿಂದ ಜ್ಯೋತಿಷ್ಯ ಶಾಸ್ತ, ಶಾಸ್ತ್ರೋಕ್ತವಾಗಿ ಪೂಜಾ ಕೈಂಕರ್ಯಗಳ ಸೇವೆಯನ್ನು ಹಾಗೂ ನ್ಯಾಮತಿ ತಾಲೂಕಿನ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವ ಹೊನ್ನಾಳಿ ನಗರದ ಹೊಳೆಮಠದ ಮುರಿಗೆಯ್ಯನವರ ಸುಪುತ್ರ ಎಂ.ಎಸ್. ಶಾಸ್ತ್ರೀ ಹೊಳೆಮಠ್ ಇವರನ್ನು ರಾಷ್ಟ್ರೀಯ ವೈದಿಕ ಶಿರೋಮಣಿ ಪ್ರಶಸಿಯನ್ನು ನೀಡಿ ಗೌರವಿಸಲಾಗುತ್ತದೆ ಎಂದರು. ಪತ್ರಿಕಾಗೊಷ್ಟಿಯಲ್ಲಿ ರೇಣುಕಾಯ್ಯಶಾಸ್ತಿ ಹೊಳೆಮಠ ಇದ್ದರು.

 

 

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!