ಜುಲೈ ತಿಂಗಳಲ್ಲಿ ರಾಮಕೃಷ್ಣ ಮಿಷನ್‌ನಿಂದ ವಿವಿಧ ಸ್ಪರ್ಧೆ!
ದಾವಣಗೆರೆ: ರಾಮಕೃಷ್ಣ ಮಿಷನ್, ದಾವಣಗೆರೆ., ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಜುಲೈ ತಿಂಗಳಲ್ಲಿ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಿದೆ. ದಾವಣಗೆರೆಯ ರಾಮಕೃಷ್ಣ ಮಿಷನ್ ಬಾಲಕ-ಬಾಲಕಿಯರು, ಯುವಕ-ಯುವತಿಯರಿಗೆ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ವೇಷಭೂಷಣ, ಭಗವದ್ಗೀತಾ ಕಂಠಪಾಠ, ಪ್ರಬಂಧ, ಭಾಷಣ, ಚಿತ್ರಕಲೆ, ರಂಗೋಲಿ, ಸಂಗೀತ, ವಾದ್ಯ ಸಂಗೀತ, ಕಿರುನಾಟಕ, (ವಿವೇಕಾನಂದರ ಜೀವನೋಪದೇಶಾಧಾರಿತ ), ಸ್ವಾಮಿ ವಿವೇಕಾನಂದರ ಜೀವನ, ಉಪದೇಶ ಹಾಗೂ ವಿಶೇಷ ಘಟನೆಗಳ ಕುರಿತು ಲೇಖನ ಸ್ಪರ್ಧೇ ಮತ್ತು ಮಾತನಾಡುವ ಸ್ಪರ್ಧೆ, ಕೇಳಿಸಿಕೊಳ್ಳುವಿಕೆ ಗ್ರಹಿಕಾ ಸಾಮರ್ಥ್ಯ, ನೋಡುವಿಕೆಯ ಗ್ರಹಿಕಾ ಸಾಮರ್ಥ್ಯ ಸ್ಪರ್ಧೆ ಆಯೋಜಿಸಲಾಗಿದ್ದು, ಪ್ರತಿ ಸ್ಪರ್ಧೆಗೆ 30 ರೂ. ಶುಲ್ಕ ನಿಗದಿಗೊಳಿಸಲಾಗಿದೆ.ಸ್ಪರ್ಧೆಗಳಲ್ಲಿ ಭಾಗವಹಿಸಲಿಚ್ಚಿಸುವವರು ರಾಮಕೃಷ್ಣ ಮಿಷನ್ನಿನ ಕಾರ್ಯಾಲಯದಲ್ಲಿ ತಮ್ಮ ಪೂರ್ಣ ಹೆಸರು, ವಿಳಾಸ, ವಿದ್ಯಾರ್ಹತೆ, ಫೋನ್ ನಂಬರ್, ಇ-ಮೇಲ್ ಐಡಿಯನ್ನು ಕೊಟ್ಟು ನೊಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ: 9482102700, 96631858714ಗೆ ಸಂಪರ್ಕಿಸಬಹುದು.
garudavoice21@gmail.com 9740365719