ನಿವೇಶನ ಬೇಡಿಕೆ ಸಮೀಕ್ಷೆಯ ಅರ್ಜಿ ಪಡೆಯಲು ನೂಕುನುಗ್ಗಲು: ಕರೋನಾ ಮೂರನೇ ಅಲೆ ಆಹ್ವಾನಿಸಿದಂತಾಗಿದೆ ದುಡಾ ಕಚೇರಿ

ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಅಕ್ಷರಶಃ ಜಾತ್ರೆಯಂತಾಗಿದ್ದು, ಕರೋನಾ ಮೂರನೇ ಅಲೆಗೆ ಆಹ್ವಾನಿಸಿದೆ!
ದೂಡಾದಿಂದ ನಿವೇಶನಗಳ ಬೇಡಿಕೆ ಸಮೀಕ್ಷೆಗೆ ಕರೆಯಲಾಗಿರುವ ನಿವೇಶನಕ್ಕೆ ಅರ್ಜಿ ಹಾಕಲು ಜನರು ಸಾಗರೊಪಾದಿಯಾಗಿ ಹರಿದುಬರುತ್ತಿದ್ದು, ಜನರು ಯಾವುದೇ ಕೊವೀಡ್ ನಿಯಮ ಪಾಲಿಸದೇ ಒಬ್ಬರ ಮೇಲೊಬ್ಬರು ಬಿದ್ದು ಅರ್ಜಿ ಪಡೆಯಲು ಮುಂದಾಗುತ್ತಿದ್ದಾರೆ.
ಆ.8 ರಂದು ದೂಡಾ ನಿವೇಶನಗಳ ಬೇಡಿಕೆ ಸಮೀಕ್ಷೆಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಿದ್ದು, ಜನರು ನಿವೇಶನ ಪಡೆಯಲು ಅರ್ಜಿ ಹಾಕಲು ದೂಡಾ ಕಚೇರಿಗೆ ದಾಂಗುಡಿ ಇಡುತ್ತಿದ್ದಾರೆ. ಸರದಿ ಸಾಲು ಬೆಳಿಗ್ಗೆಯಿಂದ ಸಂಜೆಯಾದರೂ ಕಡಿಮೆ ಆಗುವ ಲಕ್ಷಣೆಗಳೇ ಇರದಂತೆ ಜನರು ಸಾಗರದಂತೆ ಹರಿದು ಬರುತ್ತಲೇ ಇದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ.
ಜನರು ಬ್ಯಾಂಕ್ ಗೆ ಡಿಡಿ ಕಟ್ಟಿ ಅರ್ಜಿ ಪಡೆಯಲು ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಬ್ಯಾಂಕ್ ಆಫ್ ಬರೋಡಾ ಶಾಖೆಯನ್ನು ದೂಡಾದಲ್ಲಿಯೇ ತೆರೆದು ಜನರಿಗೆ ಅನುಕೂಲ ಮಾಡಿಕೊಟ್ಟಿದೆ.
ಜನರಿಗೆ ಕರೋನಾದ ಮೂರನೇ ಅಲೆಯ ಬಗ್ಗೆ ಜಾಗೃತಿಯೇ ಇಲ್ಲ. ಕಚೇರಿ ಆವರಣದಲ್ಲಿ ಜಾತ್ರೆಯಂತೆ ತುಂಬಿಕೊಳ್ಳುತ್ತಿದ್ದಾರೆ.
ನಿವೇಶನ ಬೇಡಿಕೆ ಸಮೀಕ್ಷೆಗೆ ಅರ್ಜಿ ಕರೆದಿರುವ ದೂಡಾ ಈ ತರಹದ ನೂಕುನುಗ್ಗಲು ಉಂಟಾಗದಂತೆ ಮುಂಜಾಗ್ರತಾ ಕ್ರಮವನ್ನು ಮೊದಲೇ ವಹಿಸಬೇಕಿತ್ತು ಎನ್ನುವುದು ತಜ್ಞರ ವಾದ.