ಚಿತ್ರದುರ್ಗ ಲೋಕಾಯುಕ್ತ ಬಲೆಗೆ ಪಿಡಿಒ-ಕಂಪ್ಯೂಟರ್ ಆಪರೇಟರ್
ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಜಾನಕಲ್ ಗ್ರಾಮ ಪಂಚಾ ಯಿತಿಯ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ಕಂಪ್ಯೂಟರ್ ಆಪರೇಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪಿಡಿಒ ಕೆ. ಶ್ರೀನಿವಾಸ್ ಹಾಗೂ ಕಂಪ್ಯೂಟರ್ ಆಪರೇಟರ್ ಟಿ. ಚನ್ನಬಸಪ್ಪ ಅವರುಗಳು ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿ ಕೆಲಸ ಮಾಡಿದ್ದ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಕುಟುಂಬಕ್ಕೆ ಕೂಲಿ ನೀಡಲು ಲಂಚಕ್ಕೆ ಬೇಡಿಕೆ ಇರಿಸಿ ಹಣ ಪಡೆಯುತ್ತಿದ್ದವೇಳೆ ಲೋಕಾಯುಕ್ತರು ಬಲೆ ಬೀಸಿದ್ದಾರೆ.
ನರೇಗಾ ಅಡಿ ನಡೆದ ಕಾಮ ಗಾರಿ ಯಲ್ಲಿ ಭೀಮಪ್ಪ ಅವರ ಕುಟುಂಬದ ಸದಸ್ಯರು ಕೆಲಸ ಮಾಡಿದ್ದರು. ಕೂಲಿಯ ಹಣದಲ್ಲಿ ಅರ್ಧ ಬಿಡುಗಡೆ ಮಾಡಿದ ಶ್ರೀನಿವಾಸ್, ಉಳಿದ ಮೊತ್ತ ಬಿಡುಗಡೆ ಮಾಡಲು ಲಂಚ ನೀಡುವಂತೆ ಪೀಡಿಸುತ್ತಿ ದ್ದರು. ಮೂಡ್ಲಭೋವಿಹಟ್ಟಿಯ ಸರ್ಕಾರಿ ಶಾಲೆಯ ಕಾಂಪೌಂಡ್ ನಿರ್ಮಾಣದ ಕಾಮಗಾರಿಯ ವಿಚಾರದಲ್ಲೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಭೀಮಪ್ಪ ಅವರು ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಜಾನಕಲ್ ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ಭೀಮಪ್ಪ ಅವರಿಂದ ಗುರುವಾರ ರಾತ್ರಿ 4 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಲಂಚದ ರೂಪದಲ್ಲಿ ಪಡೆದ ಹಣವನ್ನು ಜಪ್ತಿ ಮಾಡಲಾಗಿದೆ.