PDS RICE: ಪಡಿತರ ಅಕ್ಕಿ ಅಕ್ರಮ ಮಾರಾಟದ ನಿಯಂತ್ರಣಕ್ಕೆ ಬ್ರೇಕ್ ಯಾವಾಗ ಆಹಾರ ಮಂತ್ರಿಗಳೆ..? ಲಾಕ್ ಡೌನ್ ಕಠಿಣ ಕಾನೂನು ಇವರಿಗೆ ಅನ್ವಯಿಸೊದಿಲ್ಲವಾ..?

PDS RICE EXCLUSIVE REPORT – 2

ದಾವಣಗೆರೆ: ಕರ್ನಾಟಕ ಸರ್ಕಾರ ಕೊವಿಡ್ ಲಾಕ್ ಡೌನ್ ಹಿನ್ನೆಲೆ, ರಾಜ್ಯದ ಬಡವರು ಹಸಿವಿನಿಂದ ಬಳಲಬಾರದು ಎಂದು  ಬಡತನ ರೇಖೆಗಿಂತ ಕೆಳಗಿರುವ ಜನತೆಗೆ ಉಚಿತ ಅಕ್ಕಿ ನೀಡುತ್ತಿದೆ. ಕೊವಿಡ್ ಲಾಕ್‌ಡೌನ್ ಪರಿಹಾರವಾಗಿ ಈಚೆಗೆ ಕೇಂದ್ರ ಸರಕಾರವೂ ಸಹ ರಾಜ್ಯದ ಪಾಲಿನ ಜೊತೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ನವಂಬರ್ ವರೆಗೆ ಉಚಿತ ಅಕ್ಕಿ ನೀಡುತ್ತಿದೆ. ಆದರೆ ಈ ಅಕ್ಕಿಯನ್ನು ದಾವಣಗೆರೆ ಜಿಲ್ಲೆಯಲ್ಲಿರುವ ಎಗ್ಗಿಲ್ಲದೆ ಅಕ್ರಮವಾಗಿ ಅಕ್ಕಿಯನ್ನ ಕಾಳಸಂತೆಯಲ್ಲಿ ಮಾರಿಕೊಳ್ಳುತ್ತಿರುವ ಪ್ರಕರಣ ನಡೆಯುತ್ತಿದೆ. ಈ ರೀತಿ ಅಕ್ರಮವಾಗಿ ಅಕ್ಕಿ ಕಳ್ಳದಂಧೆ  ನಡೆಯುತ್ತಿದ್ದರೂ ಜಾಣ ಕುರುಡರಂತೆ ಸುಮ್ಮನಿದ್ದಾರೆ ಅಕ್ರಮ ನಿಯಂತ್ರಿಸುವವರು,

ಗರುಡವಾಯ್ಸ್ ಕಳೆದ ತಿಂಗಳು ಕೂಡ ಈ ಅಕ್ಕಿ ಅಕ್ರಮದ ಬಗ್ಗೆ ಸಾಕ್ಷಿ ಸಮೇತ ವರದಿ ಮಾಡಿತ್ತು, ಹಾಗೂ ಸಂಭಂದಿಸಿದವರ ಗಮನಕ್ಕೆ ಅಕ್ರಮ ಅಕ್ಕಿ ಶೇಕರಣೆ ಮಾಡುವ ಗೊಡೌನ್ ಗಳ ಲೋಕೇಶನ್ ಸಮೇತ ಗಮನಕ್ಕೆ ತಂದಿತ್ತು ಆದ್ರೆ ಆ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳದೆ ಕೈ ಕಟ್ಟಿ  ಕೂತಿದ್ದಾರೆ, ಇದನ್ನೆಲ್ಲಾ ನೋಡಿಕೊಂಡು ಸುಮ್ಮನಿದ್ದಾರೆ ಅಂತಾ ಗೊತ್ತಿಗುತ್ತಿಲ್ಲ. ಅಹಾರ ಮಂತ್ರಿಗಳೆ ಇದನ್ನ ಒಮ್ಮೆ ನೋಡಿ ನಿವಾದರೂ ಕ್ರಮ ಕೈಗೊಳ್ಳಿ.

ಕಾಳಸಂತೆಯಲ್ಲಿ ಪಡಿತರ ತಡೆಗೆ ಸರ್ಕಾರ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಕೆ.ರಾಮೇಶ್ವರಪ್ಪ ನೇತೃತ್ವದ ತನಿಖಾ ತಂಡವನ್ನ ರಚನೆ ಮಾಡಿದೆ, ಇ ತಂಡದಲ್ಲಿ ಪ್ರತಿ ಜಿಲ್ಲೆಯ ಉಪ ನಿಯಂತ್ರಕ,ಜಂಟಿ ನಿರ್ದೇಶಕ, ತಹಶೀಲ್ದಾರ್, ಸಹಾಯಕ ನಿರ್ದೇಶಕ,ಆಹಾರ ಶಿರಸ್ತೇದಾರ್, ಆಹಾರ ನಿರೀಕ್ಷಕರು ತಂಡದ ಸದಸ್ಯರಿರುತ್ತಾರೆ. ಪಡಿತರ ವಸ್ತುಗಳ ಅಕ್ರಮ ದಾಸ್ತಾನು, ಅವ್ಯವಹಾರ, ಮತ್ತು ಕಾಳಸಂತೆಯಲ್ಲಿ ವಹಿವಾಟು ನಡೆಯುವುದನ್ನ ತಡೆಗಟ್ಟುವುದು ಇದರ ಮುಖ್ಯ ಉದ್ದೇಶವಾಗಿದೆ. ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ವಾಗುವುದನ್ನ ಆಹಾರ ಸಚಿವ ಉಮೇಶ ಕತ್ತಿ ಈ ದಳವನ್ನ ಇಲಾಖೆಯ ಆಯುಕ್ತರ ಮೂಲಕ ರಚನೆ ಮಾಡಲಾಗಿದೆ.

 

ಪ್ರತಿ ತಿಂಗಳು ಬಡವರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಉಚಿತವಾಗಿ ಅಕ್ಕಿ ಸೇರಿದಂತೆ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ. ದಾವಣಗೆರೆ ಜಿಲ್ಲೆಯ ಹಲವಡೆ ಈ ಅಕ್ಕಿಯನ್ನು ಫಲಾನುಭವಿಗಳ ಮನೆ ಬಾಗಿಲಿನಿಂದಲೇ ನೇರವಾಗಿ ಖರೀದಿಸಲು ಕೆಲವೊಂದು ತಂಡಗಳು ಸಕ್ರಿಯವಾಗಿದ್ದು, ಪ್ರತಿ ತಿಂಗಳು ಪಡಿತರ ವಿತರಣೆಯಾಗುತ್ತಿದ್ದಂತೆ ಪ್ರತಿ ದಿನ ಈ ತಂಡದವರು ಗಲ್ಲಿಗಲ್ಲಿಗಳಲ್ಲಿ ಸಂಚರಿಸಿ ಅಕ್ಕಿ ಖರೀದಿಸಿ ಲೋಡ್‌ಗಟ್ಟಲೇ ತೆಗೆದುಕೊಂಡು ಹೋಗುತ್ತಿದ್ದಾರೆ.

 

ಬಡವರು, ಕೂಲಿ ಕಾರ್ಮಿಕರು, ಹಿಂದುಳಿದ ವರ್ಗ ಹಾಗೂ ಅಲ್ಪ ಸಂಖ್ಯಾತರು ವಾಸ ಮಾಡುವ ಪ್ರದೇಶಗಳು ಈ ದಂಧೆಕೋರರ ಟಾರ್ಗೆಟ್‌ ಆಗಿದೆ. ಈ ದಂಧೆ ಲಾಕ್ ಡೌನ್ ವೇಳೆಯಲ್ಲಿ ಯಾರ ಮೂಲಾಜಿಲ್ಲದೇ ಬಹಿರಂಗವಾಗಿ ನಡೆಯುತ್ತಿರುವುದು ವಿಪರ್ಯಾಸ. ಯಾರಾದರೂ ಅವಶ್ಯಕ ವಸ್ಥುಗಳನ್ನ ತರಲು ಪೇಟೆಗೆ ಬಂದರೆ ಇನ್ನಿಲ್ಲದಂತೆ ಸರ್ಕಸ್ ಮಾಡಿ ದಂಡ ವಿಧಿಸುವವರಿಂದ ತಪ್ಪಿಸಿಕೊಂಡು ಹೋಗಬೇಕು, ಆದ್ರೆ ಈ ಅನ್ನಭಾಗ್ಯ ಅಕ್ಕಿಯನ್ನ ಬಿಂದಾಸ್ ಆಗಿ ತೆಗೆದುಕೊಂಡು ಹೋಗುತ್ತಿದ್ದರು, ಕಾಳಸಂತೆಯಲ್ಲಿ ಅನ್ನಬಾಗ್ಯ ಯೋಜನೆಯ ಅಕ್ಕಿ ಮಾರಾಟವಾಗದಂತೆ ತಡೆಯುವ ವರ್ಗ, ಮೌನಕ್ಕೆ ಶರಣಾಗಿರುವುದು ಯಾವ ಉದ್ದೇಶಕ್ಕೆ ಅಂತಾ ಗೊತ್ತಿಲ್ಲ.

 

ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ತಂಡೋಪ ತಂಡವಾಗಿ ತುಂಬಾ ವ್ಯವಸ್ಥೆಯಿಂದ ಕಾರ್ಯ ನಿರ್ವಹಿಸುತ್ತಿವೆ, ಪ್ರಮುಖವಾಗಿ ದಾವಣಗೆರೆ ನಗರದ ಆಜಾದ್ ನಗರ ಪೊಲಿಸ್ ಠಾಣಾ ವ್ಯಾಪ್ತಿ, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹರಿಹರ, ಮಲೆಬೆನ್ನೂರು,ಹೊನ್ನಾಳಿ,ಸಂತೆಬೆನ್ನೂರು,ಕೆರೆಬಿಳಚಿ, ಚನ್ನಗಿರಿ,ಜಗಳೂರು ಹೀಗೆ ಅನೇಕ ಕಡೆ ಅಕ್ಕಿ ದಂಧೆಕೊರರ ಗೊಡೌನ್ ಗಳಿವೆ, ಇವರೆಲ್ಲಾ ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಅಕ್ಕಿಯನ್ನ ಖರೀದಿ ಮಾಡಿಕೊಂಡು ಬಂದು ಯಾರಿಗೂ ಕಾಣದಂತಹ ಗೊಡೌನ್ ನಲ್ಲಿ ಶೇಖರಣೆ ಮಾಡಿ 50 ಕೆಜಿ ಚೀಲದಲ್ಲಿ ತುಂಬಿಸಿಕೊಳ್ಳುತ್ತಾರೆ, ನಂತರ 16 ರಿಂದ 17 ಟನ್ ಅಕ್ಕಿಯ ಮೂಟೆಗಳನ್ನ ಕ್ಯಾಂಟರ್ ಲಾರಿಗಳಲ್ಲಿ ಲೋಡ್ ಮಾಡಿ ಕಳಿಸುತ್ತಾರೆ. ಈ ವಾಹನಗಳ ಲೆಕ್ಕವನ್ನ ಕೇಳಿದ್ರೆ ಶಾಕ್ ಆಗುತ್ತೆ. ಪ್ರತಿ ನಿತ್ಯ ನೂರಾರು ಟನ್ ಅಕ್ಕಿಲೋಡ್ ಜಿಲ್ಲೆಯಿಂದ ಹೊರ ರಾಜ್ಯಕ್ಕೆ ರವಾನೆಯಾಗುತ್ತದೆ.

ಒಂದು ಮೂಲದ ಪ್ರಕಾರ ಕಡಿಮೆ ಬೆಲೆಗೆ ಅಕ್ಕಿ ಖರೀದಿಸಿ, ಅವುಗಳನ್ನು ವ್ಯವಸ್ಥಿತವಾಗಿ ಪ್ಯಾಕೆಟ್‌ ಮಾಡಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಾರೆ. ಗಲ್ಲಿ ಗಲ್ಲಿಗಳಲ್ಲಿ ಅಕ್ಕಿ ಖರೀದಿಗೆ ಬರುವವರು ಕೆಜಿಗೆ 10 ರೂ ದಿಂದ 12 ರೂವರೆಗೆ ಖರೀದಿಸುವ ದಂಧೆಕೋರರು ಸ್ಥಿತಿವಂತ, ಕಬಂಧ ಬಾಹುವುಳ್ಳ ಗುಂಪುನವರಿಗೆ 15- 17 ರೂಪಾಯಿವರೆಗೆ ಮಾರಾಟ ಮಾಡ್ತಾರೆ. ಇವರುಗಳು ಪ್ರತಿ ನಿತ್ಯ ಒಂದರಿಂದ ಎರಡು ಕ್ಯಾಂಟರ್ ಲಾರಿಗಳಲ್ಲಿ ತಮ್ಮ ಅಧಿಕೃತ ಟ್ರೇಡಿಂಗ್ ಕಂಪನಿ ಹೆಸರಿನಲ್ಲಿ ಯಾರಿಗೂ ಅನುಮಾನ ಬರದಂತೆ ಬಿಲ್ ತಯಾರಿಸಿ ಪ್ರಮುಖವಾಗಿ ಕೇರಳ ರಾಜ್ಯಕ್ಕೆ ಕಳುಹಿಸಿ ಅಲ್ಲಿ 25 ರೂಪಾಯಿಂದ 30 ರೂಪಾಯಿಗೆ ಪಾಲೀಷ್ ಮಾಡಿಸಿ ಮರು ಮಾರಾಟ ಮಾಡುತ್ತಾರಂತೆ, ಕೆರಳದಲ್ಲಿ ಈ ಅಕ್ಕಿಯನ್ನ ಪಾಲಿಶ್ ಮಾಡಿ 35 ರೂಪಾಯಿಂದ 40 ರೂಪಾಯಿಗೆ ಮಾರುಕಟ್ಟೆಯಲ್ಲಿ ದೊಡ್ಡ ಮೊತ್ತಕ್ಕೆ ಮಾರಾಟವಾಗುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿರುವುದಂತು ಸತ್ಯ.

ಒಟ್ಟಾರೆ ದಾವಣಗೆರೆ ಜಿಲ್ಲೆಯಲ್ಲಿ ಅಕ್ಕಿ ದಂಧೆಕೋರರು ಅಕ್ರಮವಾಗಿ ಅನ್ನಭಾಗ್ಯ ಅಕ್ಕಿಯಯನ್ನ ಕಾಳಸಂತೆಯಲ್ಲಿ ಮಾರಾಟ ನಡೆಯುತ್ತಿದೆ. ಇಂತಹ ದಂಧೆಯಲ್ಲಿ ಕೆಲವು ಭ್ರಷ್ಟ ಅಧಿಕಾರಿಗಳು ಕೈ ಜೋಡಿಸಿರುವುದು ಕಂಡುಬರುತ್ತೆ. ಇದೇಲ್ಲಾ ಸಂಬಂಧಿಸಿದವರ ಗಮನಕ್ಕೆ ಬಂದಿದ್ದರೂ, ವ್ಯವಸ್ಥೆಯಲ್ಲಿ ಪಳಗಿರುವವರ ಮರ್ಮದಾಟಕ್ಕೆ ಏನೂ ಮಾಡೋಕೆ ಆಗೊದಿಲ್ಲವಂತೆ. ಆದರೂ ಮನಸ್ಸು ಮಾಡಿದ್ರೆ ಏನು ಬೇಕಾದರೂ ಮಾಡಬಹುದು ಎಂಬ ಗಾದೆ ನಿಜವಾ ಅಥವಾ ಸುಳ್ಳಾ..?

ಇದೀಗ ದಾವಣಗೆರೆಗೆ ಖಡಕ್ ಎಸ್ ಪಿ ಕೂಡ ಬಂದಿದ್ದಾರೆ, ಆದರೂ ಇವರಿಗೂ ಕೂಡ ಹೇದರದೆ ತಮ್ಮ ದಂಧೆ ಮುಂದಿವರಿಸಿದ್ದಾರೆ ಎಂದರೆ ಇವರು ಎಷ್ಟು ಪ್ರಭಾವಿ ಇದ್ದಾರೆ ಅಂತಾ ಗೊತ್ತಾಗುತ್ತೆ. ಇನ್ನಾದರೂ ನೂತನ ಎಸ್ ಪಿ ಈ ಅಕ್ಕಿ ದಂಧೆಗೆ ಕಡಿವಾಣ ಹಾಕ್ತಾರಾ ಎಂದು ಕಾದು ನೋಡಬೇಕಿದೆ‌.

Leave a Reply

Your email address will not be published. Required fields are marked *

error: Content is protected !!