ದಾವಣಗೆರೆಗೆ ನೂತನ ಕೊವಿಡ್ ಲಾಕ್ ಡೌನ್ ನಿಯಮ ಜಾರಿ: ಬಸ್ ಸಂಚಾರಕ್ಕೆ ಅವಕಾಶ: ಡಿಸಿ

ದಾವಣಗೆರೆ: ಜಿಲ್ಲೆಯಲ್ಲಿ ಕರೋನಾ ಪಾಸಿಟಿವಿಟಿ ಪ್ರಮಾಣ ಶೇ. 6.37 ಇರುವುದರಿಂದ ಜೂ.21ರ ಬೆಳಿಗ್ಗೆ 6ರಿಂದ ಜುಲೈ 5ರವರೆಗೆ ನಿರ್ಬಂಧಿತ ಲಾಕ್‌ಡೌನ್‌ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶವಿದೆ. ಪ್ರತಿನಿತ್ಯ ರಾತ್ರಿ 7ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ಇರಲಿದ್ದು, ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 5ರವರೆಗೆ ವಾರಾಂತ್ಯದ ಕರ್ಫ್ಯೂ ಇರಲಿದೆ ಎಂದು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮದುವೆ ಮಾಡಲು ಅವಕಾಶವಿದ್ದು, 40 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಊಟದ ವ್ಯವಸ್ಥೆ ನಿರ್ಬಂಧಿಸಲಾಗಿದೆ ಎಂದರು.

ಮದ್ಯ, ಮೀನು, ಮಾಂಸ, ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮದ್ಯ ಮತ್ತು ಹೋಟೆಲ್ ತಿನಿಸುಗಳಿಗೆ ಪಾರ್ಸಲ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಜವಳಿ, ಚಿನ್ನಾಭರಣ, ಪಾತ್ರೆ ಅಂಗಡಿಗೆ ಅವಕಾಶ ನೀಡಿಲ್ಲ.

ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್‌ ಸಂಚಾರಕ್ಕೆ ರಾತ್ರಿ 7 ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಶೇ. 50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ನಿಂತು ಪ್ರಯಾಣಿಸುವುದಕ್ಕೆ ಅನುಮತಿಸಿಲ್ಲ ಎಂದು ಅವರು ತಿಳಿಸಿದರು.

ಎರಡು ತಿಂಗಳಲ್ಲಿ ದಾವಣಗೆರೆ ಕೆ ಎಸ್ ಆರ್‌ ಟಿ ಸಿ ಬಸ್  ಡಿಪೋಗೆ 25 ಕೋಟಿ ನಷ್ಟ, ನಾಳೆಯಿಂದ ಸರ್ಕಾರಿ ಸಾರಿಗೆ ಪ್ರಯಾಣಿಕರ ಅನುಗುಣಕ್ಕೆ ತಕ್ಕಂತೆ ಸಾರಿಗೆ ಸಂಚಾರ.

Leave a Reply

Your email address will not be published. Required fields are marked *

error: Content is protected !!