ಪೊಲೀಸ್ ಇಲಾಖೆ ಸಿಬ್ಬಂದಿಗಳ ಪತ್ರಾಂಕಿತ ರಜಾ ಸೌಲಭ್ಯ ಹೆಚ್ಚಳ 7ನೇ ವೇತನ ಆಯೋಗದ ಪರಿಶೀಲನೆಯಲ್ಲಿ: ಜಿ.ಪರಮೇಶ್ವರ್

ಪೊಲೀಸ್ ಇಲಾಖೆ

ಬೆಂಗಳೂರು: ಪೊಲೀಸ್ ಇಲಾಖೆಯ ಪೊಲೀಸ್ ಸಿಬ್ಬಂದಿಗಳಿಗೆ ಪತ್ರಾಂಕಿತ ರಜಾ ದಿನಗಳಲ್ಲಿ ಕಾರ್ಯ ನಿರ್ವಹಿಸುವುದಕ್ಕಾಗಿ ಪ್ರಸ್ತುತ ನೀಡಲಾಗುತ್ತಿರುವ ವಾರ್ಷಿಕ 15 ದಿನಗಳ ಹೆಚ್ಚುವರಿ ವೇತನದ ಸೌಲಭ್ಯವನ್ನು 30 ದಿನಕ್ಕೆ ಹೆಚ್ಚಿಸುವ ವಿಷಯವು 7ನೇ ರಾಜ್ಯ ವೇತನ ಆಯೋಗದ ಪರಿಶೀಲನೆಯಲ್ಲಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಪದವೀಧರರ ಕ್ಷೇತ್ರದ ಸದಸ್ಯ ಅ. ದೇವೇಗೌಡ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಗೃಹ ಸಚಿವರು ಉತ್ತರಿಸಿದ್ದಾರೆ.
ವೇತನ ಆಯೋಗದ ಮುಂದೆ ರಾಜ್ಯ ಸರ್ಕಾರಿ ನೌಕರರ ಸಂಘವು ವೇತನ, ಮನೆ ಬಾಡಿಗೆ, ಪಿಂಚಣಿ, ಭತ್ಯೆ ಪರಿಷ್ಕರಣೆ ಕುರಿತು ಹಲವಾರು ಬೇಡಿಕೆಗಳನ್ನು ಆಯೋಗದ ಮುಂದಿಟ್ಟಿದೆ.
ಇದೇ ವೇಳೆ ಸರ್ಕಾರಿ ನೌಕರರಾಗಿರುವ ಪೊಲೀಸರು ಕೂಡ ರಾಜ್ಯ 7ನೇ ವೇತನ ಆಯೋಗದ ಮುಂದೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಇದಕ್ಕೆ ಗೃಹ ಸಚಿವ ಜಿ. ಪರಮೇಶ್ವರ್ ಉತ್ತರ ನೀಡಿದ್ದಾರೆ.

ಪೊಲೀಸ್ ಇಲಾಖೆ
ಕಾರಾಗೃಹ ಮತ್ತು ಅಗ್ನಿಶಾಮಕ ಇಲಾಖೆಯ ಎಎಸ್‌ಐ ಮತ್ತು ಪಿಎಸ್‌ಐ ಗಳು ವಾರ್ಷಿಕ ಗೆಜೆಟೆಡ್ (ವಾರ್ಷಿಕ ಸರ್ಕಾರಿ ರಜೆಯ) 30 ದಿನಗಳ ವೇತನ ಪಡೆಯುತ್ತಿದ್ದು, ಇದೇ ತರಹ ಪೊಲೀಸ್ ಇಲಾಖೆಯ ಎಎಸ್‌ಐ ಮತ್ತು ಪಿಎಸ್‌ಐಗಳು ವಾರ್ಷಿಕ 15 ದಿನಗಳ ವೇತನವನ್ನು ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಪ್ರಶ್ನೆ ಮಾಡಲಾಗಿದೆ.
ಇದಕ್ಕೆ “ಸರ್ಕಾರದ ಗಮನಕ್ಕೆ ಬಂದಿದೆ” ಎಂದು ಗೃಹ ಸಚಿವರು ಮಾಹಿತಿ ನೀಡಿದ್ದಾರೆ. ಮುಂದುವರಿದು,
ಪೊಲೀಸ್ಇಲಾಖೆಯ ಎಎಸ್‌ಐ ಮತ್ತು ಪಿ.ಎಸ್‌ಐಗಳು ವಾರ್ಷಿಕ ಮತ್ತು ಗೆಜೆಟೆಡ್ (ವಾರ್ಷಿಕ ಸರ್ಕಾರಿ) ರಜೆಯ 15 ದಿನಗಳ ವೇತನವನ್ನು 30 ದಿನಗಳವರೆಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದೆ..? ಎಂದು ಗೃಹ ಸಚಿವರಿಗೆ ಪ್ರರ್ಶನೆ ಕೇಳಲಾಗಿದ್ದು, ಇದಕ್ಕೆ ಸಚಿವ ಜಿ. ಪರಮೇಶ್ವರ್ ಅವರು, ವೇತನದ ಸೌಲಭ್ಯವನ್ನು 30 ದಿನಕ್ಕೆ ಹೆಚ್ಚಿಸುವ ವಿಷಯವು 7ನೇ ರಾಜ್ಯ ವೇತನ ಆಯೋಗದ ಪರಿಶೀಲನೆಯಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!