ನಿರಂತರ ಪ್ರಯತ್ನದಿಂದ ಗೆಲುವು ಸಾಧ್ಯ: ಡಾ. ಅಕ್ಬರ್ ಖಾನ್
ದಾವಣಗೆರೆ : ಜೀವನದಲ್ಲಿ ಪ್ರತಿಬಾರಿ ಗೆಲ್ಲಲು ಸಾಧ್ಯವಿಲ್ಲ, ಸೋಲು-ಗೆಲುವು ಎರಡು ಇರುತ್ತದೆ, ಅದನ್ನ ಸಮಾನವಾಗಿ ಸ್ವೀಕರಿಸಬೇಕೆಂದು ಆಯುರ್ವೇದ ವೈದ್ಯರಾದ ಡಾ. ಅಕ್ಬರ್ ಖಾನ್ ತಿಳಿಸಿದರು. ನಗರದ ಪ್ರತಿಷ್ಠಿತ ಶಾಲೆಗಳಲ್ಲೋಂದಾದ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ನಡೆದ 2023-24 ನೇ ಸಾಲಿನ ಶಾರದ ಪೂಜಾ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯದ ಮಾತುಗಳನ್ನು ಹೇಳಿದರು. ನಮ್ಮ ಬದುಕಿನಲ್ಲಿ ಪ್ರಯತ್ನ-ಪ್ರಮಾದಗಳಿರಬೇಕು, ಸೋಲೆ ಗೆಲುವಿನ ಸೋಪಾನ. ಆದ್ದರಿಂದ ನಾವು ಯಾವಾಗಲು ಪ್ರಯತ್ನ ಮಾಡುವುದನ್ನು ನಿಲ್ಲಿಸಬಾರದು ಎಂದರು. ದೇವರ ಅನುಗ್ರಹ ಹಾಗೂ ಪ್ರಯತ್ನದಿಂದ ಯಶಸ್ಸನ್ನು ಪಡೆಯಬಹುದು ಎಂದರು. ಇದೇವೇಳೆ ಆರೋಗ್ಯದ ಕುರಿತು ಮಾತನಾಡಿದ ಉತ್ತಮ ಆರೋಗ್ಯಕ್ಕಾಗಿ ಧನ್ವಂತರಿ ಮಂತ್ರವನ್ನು ರೂಢಿಸಿಕೊಳ್ಳಿ ಹಾಗೂ ಶಾಂತತೆಯನ್ನು ಬೆಳಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತಾಧಿಕಾರಿ ಹರೀಶ್ ಬಾಬು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಪ್ರಭಾವತಿ ಎನ್. ಮುಖ್ಯೋಪಾಧ್ಯಾಯರಾದ ಮಾಲಾ ಪಿ. ಗಾಯತ್ರಿ ಹೆಚ್. ಕೆ. ಪ್ರಕಾಶ್ ಎಂ.ಆರ್. ಹಾಗೂ ಭೋದಕ, ಭೋದಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.