ಪಿ.ಆರ್. ತಿಪ್ಪೇಸ್ವಾಮಿ ಕಲಾಸಂಭ್ರಮ, ಪಿಆರ್‌ಟಿ ಕಲಾಪ್ರಶಸ್ತಿ ಪ್ರದಾನ ಏ.18ಕ್ಕೆ

ಪಿ.ಆರ್. ತಿಪ್ಪೇಸ್ವಾಮಿ ಕಲಾಸಂಭ್ರಮ, ಪಿಆರ್‌ಟಿ ಕಲಾಪ್ರಶಸ್ತಿ ಪ್ರದಾನ ಏ.18ಕ್ಕೆ

ದಾವಣಗೆರೆ: ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಶ್ವವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಏ.18ರಂದು ಪಿ.ಆರ್. ತಿಪ್ಪೇಸ್ವಾಮಿ ಕಲಾಸಂಭ್ರಮ-2023ರ ಮತ್ತು ಪಿ.ಆರ್‌ಟಿ ಕಲಾಪ್ರಶಸ್ತಿ ಪ್ರದಾನ, ಚಿತ್ರಕಲಾ ಪ್ರದರ್ಶನ, ವಿಚಾರ ಸಂಕಿರಣ ಕಾರ್ಯಕ್ರಮವನ್ನು ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 10:30ಕ್ಕೆ ಜರುಗಲಿರುವ ಪಿ.ಆರ್. ತಿಪ್ಪೇಸ್ವಾಮಿ ಕಲಾಸಂಭ್ರಮ ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಾಹಿತಿ ಮಲ್ಲಿಕಾರ್ಜುನ್ ಕಡಕೋಳ ನೆರವೇರಿಸಲಿದ್ದು, ದಾವಿವಿ ಕುಲಸಚಿವೆ ಬಿ.ಬಿ. ಸರೋಜ ಚಿತ್ರಕಲಾ ಪ್ರದರ್ಶನ ಉದ್ಘಾಟಿಸುವರು. ದೃಶ್ಯಕಲಾ ಮಹಾವಿದ್ಯಾಲಯದ ಸಂಯೋಜನಾಧಿಕಾರಿ ಡಾ. ಸತೀಶ್‌ಕುಮಾರ್ ಪಿ. ವಲ್ಲೇಪುರೆ ಪಿಆರ್‌ಟಿ ಭಾವಚಿತ್ರ ಅನಾವರಣಗೊಳಿಸುವರು.

ಮುಖ್ಯಅತಿಥಿಗಳಾಗಿ ಇರಿಯ ಕಲಾವಿದ ನಾ. ರೇವಣಸಿದ್ದಪ್ಪ, ರಂಗಕರ್ಮಿ ಚಿಂದೋಡಿ ಚಂದ್ರಧರ್, ಚಿತ್ರಕಲಾ ಪರಿಷತ್ ಅಧ್ಯಕ್ಷ ಸದಾನಂದ ಹೆಗಡೆ ಮತ್ತಿತರರು ಪಾಲ್ಗೊಳ್ಳುವರು. ಮಧ್ಯಾಹ್ನ 2 ಗಂಟೆಗೆ ನಡೆಯುವ ವಿಚಾರ ಸಂಕಿರಣ ಮತ್ತು ಸಂವಾದದ ಅಧ್ಯಕ್ಷತೆಯನ್ನು ಜನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ವಹಿಸಲಿದ್ದಾರೆಹಿರಿಯ ಕಲಾವಿದ, ಡಾ. ಎಸ್.ಸಿ. ಪಾಟೀಲ್, ಜನಪದ ತಜ್ಞ ಡಾ. ಮಲ್ಲಿಕಾರ್ಜುನ್ ಕಲಮರಹಳ್ಳಿ ಮತ್ತಿತರರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ ಸಾನಿಧ್ಯದಲ್ಲಿ ಅಂದು ಸಂಜೆ 4:30ಕ್ಕೆ ನಡೆಯುವ ಪಿಆರ್‌ಟಿ ಕಲಾಪ್ರಶಸ್ತಿ ಸಮಾರಂಭವನ್ನು ದಾವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ್ ಉದ್ಘಾಟಿಸಲಿದ್ದಾರೆ. ಪಿಆರ್‌ಟಿ ಚಿತ್ರಕಲಾ ಪ್ರಶಸ್ತಿಗೆ ಹಿರಿಯ ಚಿತ್ರಕಲಾವಿದ ಅಶೋಕ ವಿ. ಬಂಡಾರೆ ಮತ್ತು ಪಿಆರ್‌ಟಿ ಜನಪದ ಕಲಾಪ್ರಶಸ್ತಿಗೆ ಹಿರಿಯ ಜಾನಪದ ಕಲಾವಿದೆ ರಾಧಾಬಾಯಿ ಮಾರುತಿ ಮಾದಾರ ಭಾಜನರಾಗಿದ್ದು ಇವರಿಗೆ ಹಿರಿಯ ಕಲಾವಿದ ಚಿ.ಸು. ಕೃಷ್ಣಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ ವಹಿಸಲಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!