Railway Station RH Name: ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ರಾಜನಹಳ್ಳಿ ಹನುಮಂತಪ್ಪನವರ ಹೆಸರು ನಾಮಕರಣಕ್ಕೆ ಆಗ್ರಹಿಸಿ ಪ್ರತಿಭಟನೆ

ದಾವಣಗೆರೆ :ದಾವಣಗೆರೆಯ ರೈಲ್ವೆ ನಿಲ್ದಾಣ ಮುಂಭಾಗ ಸಮಾನ ಮನಸ್ಕರ ಕನ್ನಡಪರ ಹೋರಾಟಗಾರರು ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ರಾಜನಹಳ್ಳಿ ಹನುಮಂತಪ್ಪನವರ ಹೆಸರು ನಾಮಕರಣಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ದಾವಣಗೆರೆ ನಗರವು ಚಿಕ್ಕಪಟ್ಟಣ ಇದ್ದ ಸಂದರ್ಭದಲ್ಲಿ ಕೈಗಾರಿಕಾ ನಗರವನ್ನಾಗಿ ಸರ್ವಾಂಗೀಣ ಅಭಿವೃದ್ದಿಗೆ ರಾಜನಹಳ್ಳಿ ಕುಟುಂಬ ಅವಿರತ ಶ್ರಮ ಪಟ್ಟಿದೆ ದಾವಣಗೆರೆಗೆ ರಾಜನಹಳ್ಳಿ ಹನುಮಂತಪ್ಪ ಕೊಡುಗೆ ಬಹುದೊಡ್ಡದಾಗಿದ್ದು ಆಸ್ಪತ್ರೆ, ಧರ್ಮಶಾಲೆಗಳಿಗೆ ಇವರ ಕೊಡುಗೈ ಅಪಾರವಾಗಿದ್ದು ಈ ಹಿನ್ನಲೆ ನಗರದ ನವೀಕೃತ ರೈಲ್ವೆ ನಿಲ್ದಾಣಕ್ಕೆ “ಧರ್ಮ ಪ್ರವರ್ತಕ ರಾಜನಹಳ್ಳಿ ಹನುಮಂತಪ್ಪ ನವರ” ಹೆಸರನ್ನು ನಮಕರಣ ಮಾಡಬೇಕೆಂದು ಸಮಾನ ಮನಸ್ಕರ ಕನ್ನಡಪರ ಹೋರಾಟಗಾರರು ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.


ಪ್ರತಿಭಟನೆಯ ನೇತೃತ್ವವನ್ನು ಕನ್ನಡ ಪರ ಹೋರಾಟಗಾರ ನಾಗೇಂದ್ರ ಬಂಡೀಕರ್ ನೇತೃತದಲ್ಲಿ ಪ್ರತಿಭಟಿಸಲಾಯಿತು.ಈ ಸಂದರ್ಭದಲ್ಲಿ ಜೈ ಕರ್ನಾಟಕ ವೇದಿಕೆಯ ಟಿ. ಮಂಜುನಾಥ್ ಗೌಡ, ದೊರೆಸ್ವಾಮಿ ಎಲ್, ಟಿ.ಅಜ್ಜೇಶ್,ಸಚಿನ್, ಭಾಷಾ, ರಾಜೇಂದ್ರ ಬಂಗೇರ, ಫಕ್ರುದ್ದೀನ್, ಮೋಹನ್ ಕುಮಾರ್, ಮಮತಾ ಟಿ, ಆನಂದ್,ಇನ್ನಿತರಿದ್ದರು.

Leave a Reply

Your email address will not be published. Required fields are marked *

error: Content is protected !!