ಸವಣೂರಿನ ಹಿರೇಮುಗದೂರ ಗ್ರಾಮದ ಸಾಲಿದುರಗಮ್ಮ ಮಾತಂಗೆಮ್ಮ ದೇವತೆಗಳ ಜಾತ್ರಾ ಮಹೋತ್ಸವ

IMG-20211226-WA0003

ಸವಣೂರ : ತಾಲ್ಲೂಕಿನ ಹಿರೇಮುಗದೂರ ಗ್ರಾಮದ ಶ್ರೀ ಸಾಲಿದುರಗಮ್ಮ ಹಾಗೂ ಮಾತಂಗೆಮ್ಮ ದೇವತೆಗಳ ಜಾತ್ರಾ ಮಹೋತ್ಸವ ಜನವರಿ 3 ರಿಂದ 7 ರ ವರಿಗೆ ಕೋವಿಡ್ ನಿಯಮದಡಿ ಜರುಗಲಿದೆ ಎಂದು ಗ್ರಾಪಂ ಉಪಾಧ್ಯಕ್ಷರಾದ ಮರಿಯಪ್ಪ ನಡುವಿನಮನಿ ಹೇಳಿದರು.

ತಾಲ್ಲೂಕಿನ ಹಿರೇಮುಗದೂರ ಗ್ರಾಮದ ಶ್ರೀ ಸಾಲಿದುರಗಮ್ಮ ಹಾಗೂ ಮಾತಂಗೆಮ್ಮ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಕರಪತ್ರಗಳನ್ನು ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿ ಮೂರು ವರ್ಷಗಳಿಗೊಮ್ಮೆ ಶ್ರೀ ಸಾಲಿದುರಗಮ್ಮ ಹಾಗೂ ಮಾತಂಗೆಮ್ಮ ದೇವತೆಗಳ ಜಾತ್ರೆ ಮಾಡುವ ಸಂಪ್ರದಾಯವಿದೆ.ದಿ,3 ರ ಸೋಮವಾರ ಬೆಳಿಗ್ಗೆ 6 ಘಂಟೆಗೆ ಬಡಿಗೇರ ಮನೆಯಿಂದ ಕುಂಭ ಮೇಳದೊಂದಿಗೆ ಶ್ರೀದೇವಿಯನ್ನು ದೇವಸ್ಥಾನಕ್ಕೆ ಬರಮಾಡಿಕೊಳ್ಳುವುದು.ಸಾಹಿಂಕಾಲ 5 ಗಂಟೆಯಿಂದ ದುರ್ಗಾಹೋಮ ಹಾಗೂ ನವಗ್ರಹಶಾಂತಿ ಪೂಜೆ. ದಿ.4 ರ ಮಂಗಳವಾರ ಬೆಳಿಗ್ಗೆ 5:30 ಕ್ಕೆ ರುದ್ರಾಭಿಷೇಕ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಹಾಗೂ ಉಡಿತುಂಬುವುದು. ಮಧ್ಯಾಹ್ನ 12:30 ಘಂಟೆಗೆ ಧರ್ಮ ಸಭೆ ನಂತರ ಮಹಾಪ್ರಸಾದ.ಸಾಯಂಕಾಲ 6:30 ರಿಂದ ಪ್ರಮುಖ ಬೀದಿಗಳಲ್ಲಿ ಶ್ರೀದೇವಿಯ ಸಂಚಾರ.ದಿ.5 ರ ಬುಧವಾರ ಬೆಳಿಗ್ಗೆ ನೈವೇದ್ಯ ಕೊಡುವುದು.ಸಾಹಿಂಕಾಲ 6:30 ಕ್ಕೆ ರುದ್ರಾಭಿಷೇಕ ಮಹಾಪೂಜೆ. ದಿ.6 ಗುರುವಾರ ಬೆಳಿಗ್ಗೆ 6:30 ರಿಂದ ರುದ್ರಾಭಿಷೇಕ ಮತ್ತು ಮಹಾಪೂಜೆ. ಸಂಜೆ ವಿಶೇಷ ಮನರಂಜನಾ ಕಾರ್ಯಕ್ರಮ. ದಿ.7 ರ ಶುಕ್ರವಾರ ಬೆಳಿಗ್ಗೆ 6:30 ರಿಂದ ರುದ್ರಾಭಿಷೇಕ ಮತ್ತು ಉಡಿತುಂಬವ ಕಾರ್ಯಕ್ರಮ ಮತ್ತು ಮಹಾಮಂಗಲ ಕಾರ್ಯಕ್ರಮಗಳು ಜರುಗುವವು. ಶಕ್ತಿ ದೇವತೆಗಳ ಆರ್ಶಿವಾದ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರ ಮೇಲೆ ಇರಲಿ. ಹಲವಾರು ಧಾರ್ಮಿಕ ವಿಧಿ ವಿಧಾನಗಳ ಮೂಲಕ ದೇವತೆಗಳಿಗೆ ಪೂಜೆ ಸಲ್ಲಿಸುವ ಕಾರ್ಯ ಜರುಗಲಿವೆ.ಜಾತ್ರಾ ಕಾರ್ಯಕ್ರಮಗಳಲ್ಲಿ ಕೋವಿಡ್ ಹಾಗೂ ಆರೋಗ್ಯ ಜಾಗೃತಿಗೆ ವಿಶೇಷ ಕಾಳಜಿವಹಿಸಲಾಗುವುದು . ಈ ಜಾತ್ರಾ ಮಹೋತ್ಸವಕ್ಕೆ ಊರಿನ,ಸುತ್ತಮುತ್ತಲಿನ ಗ್ರಾಮಗಳ ಹಾಗೂ ನಾಡಿನ ನಾಗರಿಕರು ಆಗಮಿಸಿ ಮತ್ತು ಜಾತ್ರಾ ಮಹೋತ್ಸವಕ್ಕೆ ಎಲ್ಲರ ಸಹಕಾರ,ಸಹಾಯ ಸದಾ ಇರಲಿ ಎಂದು ಗ್ರಾಪಂ ಉಪಾಧ್ಯಕ್ಷ ಮರಿಯಪ್ಪ ನಡುವಿನಮನಿ ಭಕ್ತಾದಿಗಳಲ್ಲಿ ವಿನಂತಿಸಿಕೊಂಡರು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ನಿಂಗಪ್ಪ ಎಂ ಆರೇರ. ಊರಿನ ಮುಖಂಡರಾದ ಮಲ್ಲಪ್ಪ ಹೊಸಮನಿ.ಮಹಾದೇವಪ್ಪ ನಡುವಿನಮನಿ.ಪರಶುರಾಮ ಹರ್ಲಾಪುರ. ಕೃಷ್ಣಪ್ಪ ಬಾರ್ಕಿ. ಸುರೇಶ ಬರದೂರ. ಈರಭದ್ರಪ್ಪ ಹಾದಿಮನಿ.ಫಕ್ಕಿರೇಶ ಕಾಳಿ.ಬಸವರಾಜ ಕಾಳೆ.ಅಶೋಕ ಅಳ್ಳಳ್ಳಿ ಸೇರಿದಂತೆ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಹಾಗೂ ಊರಿನ ಮುಖಂಡರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!