ಸಮರ್ಥ್ ಶಾಮನೂರು ಬೇತೂರ್ ನಲ್ಲಿ ಮನೆ ಮನೆಗೆ ತೆರಳಿ ತಂದೆ ಪರ ಮತಯಾಚನೆ.
ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇತೂರ್ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಎಸ್ ಮಲ್ಲಿಕಾರ್ಜುನ್ ರವರ ಪರವಾಗಿ ಅವರ ಪುತ್ರ ಸಮರ್ಥ ಶಾಮನೂರ್ ಇಂದು ಬೆಳಗ್ಗೆ 8 ಗಂಟೆಯಿಂದ ಮನೆ ಮನೆಗೆ ತೆರಳಿ ಮತ ಯೋಚನೆ ಮಾಡುತ್ತಿದ್ದಾರೆ.
ಯುವಕರು, ಮಹಿಳೆಯರು ಹಾಗೂ ಹಿರಿಯರನ್ನು ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ರವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ತೃಪ್ತಿ ಇದೆಯೇ? ಎಂದು ಕೇಳಿ, ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮತಗಳ ನೀಡುವ ಮೂಲಕ ಆಶೀರ್ವದಿಸಲು ಕೋರಿದರು.
ಪ್ರಚಾರ ಸಮಯದಲ್ಲಿ ಮೊದಲ ಬಾರಿ ಮತದಾನ ಮಾಡುವ ಯುವತಿ ಒಬ್ಬರನ್ನು ಮಾತನಾಡಿಸಿದ, ಸಮರ್ಥ ಶಾಮನೂರ್ ಮೊದಲ ಮತ ಜೀವನದಲ್ಲಿ ಶ್ರೇಷ್ಠವಾದದ್ದು ಅಗ್ಗಿದು, ಇದು ಗೂಗಲ್ ಯುಗ ನೀವು ಯಾರ ಮಾತನ್ನು ಕೇಳದೆ, ಗೂಗಲ್ ನಲ್ಲಿ ಸರ್ಚ್ ಮಾಡಿ ನಮ್ಮ ತಂದೆ ಕ್ಷೇತ್ರಕ್ಕೆ ದೂರದೃಷ್ಟಿಯ, ಉತ್ತಮ ಗುಣಮಟ್ಟದ ಯೋಜನೆಗಳನ್ನು ಮಾಡಿದ್ದಾರೆ… ಅನಿಸಿದರೆ ಅವರಿಗೆ ನೀವು ಮತದಾನ ಮಾಡಿ ನಿಮ್ಮ ಸ್ನೇಹಿತರಿಗೂ ಹೇಳಿ ಮತದಾನ ಮಾಡಿಸಿ ಎಂದದ್ದು ವಿಶೇಷವಾಗಿತ್ತು.