ಬೆಸ್ತ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೆ ಪ್ರಾಮಾಣಿಕ ಪ್ರಯತ್ನ – ಕೇಂದ್ರ ಸಚಿವ ಎ ನಾರಾಯಣಸ್ವಾಮಿ

ಚಿತ್ರದುರ್ಗ: ಬೆಸ್ತ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ವಿಷಯಕ್ಕೆ ನಾನು ನಿಮ್ಮ ಜೊತೆಗಿದ್ದು, ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ನುಡಿದರು.

ಗಂಗಾ ಪರಮೇಶ್ವರಿ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತಾಡಿದ ಅವರು ಯಾವ ಅಂಶಗಳನ್ನು ಸೇರಿಸಿ ಕಳುಹಿಸಬೇಕು ಎಂಬುವುದನ್ನು ಮನದಟ್ಟು ಮಾಡಿಕೊಂಡು ಕುಲಶಾಸ್ತ್ರೀಯ ಅಧ್ಯಯನದ ವರದಿಯಲ್ಲಿ ಕಳುಹಿಸಕೊಡಬೇಕು ಎಂದು ತಿಳಿಸಿದರು.

ಮಾದಿಗರ ಒಳಮೀಸಲಾತಿ ಕೊಡಬೇಕು ಎಂಬ ಹೋರಾಟಕ್ಕೆ 35 ವರ್ಷಗಳು, ನಿಮ್ಮ ಹೋರಾಟ 26 ವರ್ಷಗಳಾಗಿವೆ. ನಿಮ್ಮ ಕಡತ ದೆಹಲಿಗೆ ಹೋದಾಗ ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದರು. ಆಗ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಷಯದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ನಡೆಯುವ ವಾದ ವಿವಾದಗಳನ್ನು ಗಮನಿಸುತ್ತಿದ್ದೆ ನನಗೆ ಬದ್ದತೆ ಇತ್ತು. ನನಗೆ ಈ ಸಮಾಜಕ್ಕೆ ಹೇಗಾದರೂ ನ್ಯಾಯ ಕೊಡಿಸಬೇಕು ಎಂದು ನನ್ನ ಮನಸಿನಲ್ಲಿದೆ. ರಾಯಚೂರು ಗುಲ್ಬರ್ಗಾ ದಿಂದ ಬಂದು ಜನರು ಮೀಸಲಾತಿಗಾಗಿ ಭಿಕ್ಷೆ ಬೇಡುತ್ತಾರೆ. ಆರ್ಟಿಕಲ್ 64 ರಲ್ಲಿ ವಿಶೇಷ ಸೌಲತ್ತನ್ನು ಕೊಡಬೇಕು ಎಂದಿದೆ. ಅದರಂತೆ ಸೇರ್ಪಡೆಯನ್ನು ನಾವು ಪಡೆಯಲು ಮುಂದಾಗಬೇಕು ಎಂದರು.

ಬೆಸ್ತರ ಸಮುದಾಯಕ್ಕೆ ಸರ್ಕಾರದಿಂದ ಎಕರೆಗಳಷ್ಟು ಜಾಗವನ್ನು ಮಂಜೂರು ಮಾಡಿಸುತ್ತೇವೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಹೇಳಿದರು. ಅವರು ಚಿತ್ರದುರ್ಗದಲ್ಲಿ ನೆಡೆದ ಗಂಗಾಂಬಿಕ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತಾಡಿದರು.

ನೀವು ಭೂಮಿಯನ್ನು ಗುರುತಿಸಿಕೊಂಡು ಬಂದರೆ ನಾವು ಸರ್ಕಾರದಿಂದ ಕೊಡಿಸಲಾಗುತ್ತದೆ. ಹಿಂದೆಯೂ ನಾವು ಸಮಾಜಕ್ಕೆ ಹಲವು ಸೌಲಭ್ಯಗಳನ್ನು ಕೊಡಿಸುದ್ದು, ಮುಂದೆಯೂ ಕೊಡಿಸುತ್ತೇವೆ. ಸಮಾಜವು ಶಿಕ್ಷಣ ಸಂಘಟನೆ ಹೋರಾಟ ಇವುಗಳನ್ನು ಮಾಡಬೇಕು. ಮೊದಲು ಶಿಕ್ಷಣ ಪಡೆಯಬೇಕು. ಅಂಬೇಡ್ಕ‌ರ್ ಶಿಕ್ಷಣ ಪಡೆಯಿರಿ ಎಂದು ಎಸ್ಸಿ ಸಮುದಾಯಗಳಿಗೆ ಮಾತ್ರ ಹೇಳಲಿಲ್ಲ, ಸೌಲಭ್ಯ ವಂಚಿತ ಸಮುದಾಯಗಳು ಯಾರೇ ಇದ್ದರು ಅವರು ಶಿಕ್ಷಣ ಪಡೆಯಬೇಕು ಎಂದು ಹೇಳಿದ್ದರೆಂದರು. ಹೋರಾಟ ಮಾಡದೆ ಯಾವ ಬೇಡಿಕೆಗಳು ಈಡೇರುವುದಿಲ್ಲ. ಯಾವ ಸರ್ಕಾರಗಳು ಗಮನಿಸುವುದಿಲ್ಲ.ಇದರಿಂದ ನೀವು ಸಂಘಟಿತರಾಗಿ ಹೋರಾಟ ಮಾಡಬೇಕಿದೆ.ನಾನು ಸಮಾಜ ಕಲ್ಯಾಣ ಮಂತ್ರಿಯಾದಾಗ ಈ ಸಮಾಜಕ್ಕೆ ಸಾಕಷ್ಟು ಸೌಲಭ್ಯಗಳನ್ನು ಕೊಟ್ಟಿದ್ದೇನೆ. ಆಗಿನ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಅವರು ಕೂಡ ಸಮಾಜಕ್ಕೆ ಹಲವು ಕೆಲಸಗಳನ್ನು ಮಾಡಿಕೊಟ್ಟಿದ್ದರು. ಈಗಲು ಮಾಡುತ್ತೇವೆ. ಮುಂದೆಯೂ ಮಾಡಲು ತಯಾರಿದ್ದೇವೆ ಎಂದರು.

 

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜಗದ್ಗುರು ಪರಮ ಪೂಜ್ಯ ಶ್ರೀ ಶಂತಾಭಿಷ್ಮ ಚೌಡಯ್ಯ ಮಹಾಸ್ವಾಮಿಗಳು ಪೀಠಾದ್ಯಕ್ಷರು. ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ನವರ ಗುರು ಪೀಠ ಸುಕ್ಷೇತ್ರ ನರಸೀಪುರ ಹಾವೇರಿ ಜಿಲ್ಲೆ.ಶ್ರೀ ನಾರಾಯಣಸ್ವಾಮಿ, ಮಾನ್ಯ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರು ಭಾರತ ಸರ್ಕಾರ ಹಾಗೂ ಸಂಸದರು ಚಿತ್ರದುರ್ಗ, ಶ್ರೀ ಮಂಕಾಳ ವೈದ್ಯ ಮಾನ್ಯ ಮೀನುಗಾರಿಕೆ ಮತ್ತು ಬಂದರು ಸಚಿವರು ಕರ್ನಾಟಕ ಸರ್ಕಾರ. ಶ್ರೀ ಹೆಚ್ ಆಂಜನೇಯ ಮಾನ್ಯ ಮಾಜಿ ಸಚಿವರು ಕರ್ನಾಟಕ ಸರ್ಕಾರ ಚಿತ್ರದುರ್ಗ.ಶ್ರೀ ಎನ್ ರವಿಕುಮಾರ್ ಮಾನ್ಯ ವಿಧಾನ ಪರಿಷತ್ ಸದಸ್ಯರು. ಶ್ರೀ ಮೌಲಾಲಿ ರಾಜ್ಯಾಧ್ಯಕ್ಷರು ಕರ್ನಾಟಕ ಗಂಗಾಮತಸ್ಥರ ಸಂಘ ಬೆಂಗಳೂರು. ಶ್ರೀ ಹೆಚ್. ಡಿ ರಂಗಯ್ಯ ಅಧ್ಯಕ್ಷರು ಜಿಲ್ಲಾ ಗಂಗಾಂಭಿಕ ಬೆಸ್ತರ ಸಂಘ ಚಿತ್ರದುರ್ಗ ಹಾಗೂ ಪದಾಧಿಕಾರಿಗಳು ಜಿಲ್ಲಾ ಕುಲ ಬಾಂಧವರು.

ಶ್ರೀ ವೀರೇಂದ್ರ ಪಪ್ಪಿ ಮಾನ್ಯ ಶಾಸಕರು ಚಿತ್ರದುರ್ಗ.ಶ್ರೀ ಕೆ ಎಸ್. ನವೀನ್ ಮಾನ್ಯ ವಿಧಾನ ಪರಿಷತ್ ಸದಸ್ಯರು ಚಿತ್ರದುರ್ಗ. ಶ್ರೀ ಬೀ ಏನ್ ಚಂದ್ರಪ್ಪ ಮಾನ್ಯ ಮಾಜಿ ಸಂಸದರು ಚಿತ್ರದುರ್ಗ, ಕುಮಾರಿ ಭಾವನಾ ರಾಮಣ್ಣ ಚಲನಚಿತ್ರ ನಟಿ ಬೆಂಗಳೂರು ಇವರೆಲ್ಲರೂ ಉಪಸ್ಥಿತಿಯಿದ್ದರು.

Leave a Reply

Your email address will not be published. Required fields are marked *

error: Content is protected !!