ದಾವಣಗೆರೆ ಮಹಾನಗರ ಪಾಲಿಕೆಯಿಂದ ಮನೆ ಬಾಗಿಲಿಗೆ ಇ-ಆಸ್ತಿ ಪತ್ರ

ದಾವಣಗೆರೆ: ದಾವಣಗೆರೆಯ ಮಹಾನಗರ ಪಾಲಿಕೆಯ ವತಿಯಿಂದ ಇ-ಆಸ್ತಿ ಅಭಿಯಾನ ವನ್ನು ಶನಿವಾರ ಇಲ್ಲಿನ 16ನೇ ವಾರ್ಡಿನ ವಿನೋಬ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ವಲಯ ಆಯುಕ್ತರಾದ ಕೆ.ನಾಗರಾಜ್ ನೇತೃತ್ವದಲ್ಲಿ ವಾರ್ಡಿನ ಮನೆ ಮನೆಗೆ ತೆರಳಿ ಮನೆ ಮಾಲೀಕರ ಸ್ಥಿರಾಸ್ಥಿ ಗಳ ದಾಖಲೆಗಳನ್ನು ನೀಡಿ ಇ-ಆಸ್ತಿ ತಂತ್ರಾಂಶದಲ್ಲಿ ಅಳವಡಿಸಿ ಇ-ಆಸ್ತಿ ಪತ್ರ ಪಡೆ ಯಬಹುದು ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಇದೇ ಫೆ.13 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ವಿನೋಬ ನಗರದ 3ನೇ ಮುಖ್ಯ ರಸ್ತೆಯಲ್ಲಿರುವ ವಾರ್ಡ್ ಆಫೀಸ್ ನಲ್ಲಿ ಮನೆ ಮಾಲೀಕರಿಗೆ ಸ್ಥಳದಲ್ಲೇ ಇ-ಆಸ್ತಿ ದಾಖಲೆ ನೀಡಲಾಗುವುದು ಎಂದರು.

ಸ್ವತ್ತಿನ ಮಾಲೀಕರು ತಮ್ಮ ಮನೆಗೆ ಸಂಬಂಧಿಸಿದ ಸೂಕ್ತ ದಾಖಲೆಗಳು, ತಮ್ಮ ಫೋಟೋ, ಆಧಾರ್ ಕಾರ್ಡ್,ಮನೆ ಕಂದಾಯ, ನೀರಿನ ಕಂದಾಯ ಪಾವತಿ ರಸೀದಿ, ವಿದ್ಯುತ್ ಮೀಟರ್  ಆರ್.ಆರ್.ನಂಬರ್, ಆಸ್ತಿಗೆ ಸಂಬಂದಿಸಿದ ಇತರೆ ದಾಖಲೆಗಳನ್ನು ತಂದು ನೀಡಿ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳಬಹುದು. ನೊಂದಣಿ ನಂತರ ಸ್ಥಳದಲ್ಲೇ ಇ-ಆಸ್ತಿ ದಾಖಲೆ ಪತ್ರ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪಾಲಿಕೆ ಕಂದಾಯ ಆಯುಕ್ತ ರಾದ ಈರಮ್ಮ, ಕಂದಾಯ ನಿರೀಕ್ಷಕ ರಾದ ಹೊನ್ನಪ್ಪ, ವಿಷಯ ನಿರ್ವಾಹಕ ನಾಗರಾಜ, ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!