ಪತ್ನಿ ಕೊಂದು, ಪೊಲೀಸರಿಗೆ ಶರಣಾದ ಪತಿ.!

ಶಿವಮೊಗ್ಗ ಶಿವಮೊಗ್ಗ ನಗರದ ನಿರ್ಜನ ಪ್ರದೇಶದಲ್ಲಿ ಪತ್ನಿ ಯನ್ನೇ ಪತಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮಾರಕಾಸ್ತ್ರಗಳಿಂದ ಪತ್ನಿಯ ಹತ್ಯೆಮಾಡಿದ ಪತಿ ನಂತರ ಪೊಲೀಸ್ ಠಾಣೆಗೆ ಆಗಮಿಸಿ, ಪೊಲೀಸರಿಗೆ ಶರಣಾಗಿದ್ದಾನೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಒಂದು ದುರ್ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಶಿವಮೊಗ್ಗದ ನಗರದ ಗಾಡಿಕೊಪ್ಪ ಬಳಿಯ ವಾಸು ಸತ್ಯ ಬಡಾವಣೆಯಲ್ಲಿ ಈ ಘಟನೆ ಜರುಗಿದೆ. ಕೌಸರ್ ಫಿಜಾ ಎಂಬುವವರ ಕೊಲೆಯಾಗಿದೆ.
ಶಿವಮೊಗ್ಗ ತಾಲೂಕಿನ ಆಯನೂರಿನ ಕೌಸರ್ ಫಿಜಾ, ಶಿವಮೊಗ್ಗದ ಟಿಪ್ಪು ನಗರದ ನಿವಾಸಿ ಶೋಯಬ್ ಎಂಬ ವ್ಯಕ್ತಿ ಜೊತೆ ಮದುವೆಯಾಗಿದ್ದರು.ಈ ದಂಪತಿಗಳಿಗೆ ಒಂದು ಮಗು ಸಹ ಇದೆ. ಅದರೆ ಪತಿ ಪತ್ನಿ ನಡುವೆ ಆಗಾಗಿ ಗಲಾಟೆ ಆಗುತ್ತಿತ್ತು,
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಕೊಲೆ ಮಾಡಲಾಗಿದೆ.
ಕೌಸರ್ ಫಿಜಾಳನ್ನು ಕಾರಿನಲ್ಲಿ ಕರೆದುಕೊಂಡು ಬಂದ ಶೋಯಬ್ ನಿರ್ಜನ ಪ್ರದೇಶಕ್ಕೆ ಕರೆತಂದು, ಅಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಪತ್ನಿ ಕೌಸರ್ ಫಿಜಾಳನ್ನು ಹತ್ಯೆ ಮಾಡಿದ ನಂತರ ತುಂಗಾ ನಗರ ಪೊಲೀಸ್ ಠಾಣೆಗೆ ತೆರಳಿ ಪತಿ ಶರಣಾಗಿದ್ದಾನೆ.
ನಂತರ ಘಟನೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದಹೇವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಕೆ ಮುಂದುವರೆಸಿದ್ದಾರೆ.