ಶಾಮನೂರು ಶಿವಶಂಕರಪ್ಪನವರಿಗೆ ಬುದ್ಧಿ ಭ್ರಮಣೆ ಎನ್ನುವ ಸಿದ್ದೇಶ್ವರ ಹೇಳಿಕೆ ದುರಹಂಕಾರದ ಪರಮಾವದಿ – ಕೆ.ಎಲ್.ಹರೀಶ್ ಬಸಾಪುರ.

ಶಾಮನೂರು ಶಿವಶಂಕರಪ್ಪನವರಿಗೆ ಬುದ್ಧಿ ಭ್ರಮಣೆ ಎನ್ನುವ ಸಿದ್ದೇಶ್ವರ ಹೇಳಿಕೆ

ದಾವಣಗೆರೆ :ಲೋಕಸಭಾ ಸದಸ್ಯರಾದ ಜಿ.ಎಂ ಸಿದ್ದೇಶ್ವರ ರವರು ಹಿರಿಯ ರಾಜಕಾರಣಿ, ಶಾಸಕರು, ಮಾಜಿ ಸಚಿವರು ಡಾ. ಶಾಮನೂರ್ ಶಿವಶಂಕರಪ್ಪ ನವರಿಗೆ ಬುದ್ಧಿ ಭ್ರಮಣೆಯಾಗಿದೆ ಎನ್ನುವ ಹೇಳಿಕೆ ನೀಡಿದ್ದು, ಇದು ಜಿ.ಎಂ ಸಿದ್ದೇಶ್ವರವರ ದುರಹಂಕಾರದ ಪರಮಾವದಿಯ ಹೇಳಿಕೆಯಾಗಿದೆ.

ಮಾಧ್ಯಮ ಮಿತ್ರರು ಪತ್ರಿಕಾಗೋಷ್ಠಿಯ ಸಮಯದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರನ ಮೇಲೆ ನಡೆದ ಲೋಕಾಯುಕ್ತ ದಾಳಿಯ ಬಗ್ಗೆ ಪ್ರಶ್ನಿಸಿ, ಈ ದಾಳಿಯ ಹಿಂದೆ ಡಿ.ಕೆ ಶಿವಕುಮಾರ್ ಕೈವಾಡ ಇದೆ ಎನ್ನಲಾಗುತ್ತಿದೆ ಎಂದಾಗ, ಅದಕ್ಕೆ ಪ್ರತಿಕ್ರಿಯಿಸಿದ ಡಾ. ಶಾಮನೂರು ಶಿವಶಂಕರಪ್ಪನವರು ನಮ್ಮವರು ಜಿ.ಎಂ ಸಿದ್ದೇಶ್ವರ್ ಕೈವಾಡವಿದೆ ಎನ್ನುತ್ತಿದ್ದಾರೆ ಎಂದು ಹೇಳಿದ್ದು, ಇದನ್ನು ಸರಿಯಾಗಿ ಅರ್ಥೈಸಿಕೊಳ್ಳದ ಸಂಸದರು, ವಯಸ್ಸಿನ ಗೌರವೂ ಇಲ್ಲದೆ ಎಸ್.ಎಸ್ ರವರಿಗೆ ಬುದ್ಧಿಭ್ರಮಣೆಯಾಗಿದೆ ಎನ್ನುವ ಮೂಲಕ, ತಮಗೆ ಹಿರಿಯರ ಬಗ್ಗೆ ಇರುವ ಗೌರವವನ್ನು ಸಮಾಜಕ್ಕೆ ತೋರಿಸಿದ್ದಾರೆ.

ಇನ್ನಾದರೂ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ವಿರೋಧ ಪಕ್ಷ ನಾಯಕರುಗಳ ಹೇಳಿಕೆಗಳನ್ನು ಸರಿಯಾಗಿ ಕೇಳಿಸಿಕೊಂಡು ಪ್ರತಿಕ್ರಿಯೆ ನೀಡಬೇಕಾಗಿ ಸಂಸದರಲ್ಲಿ ಆಗ್ರಹಿಸುತ್ತಾ,

ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ತಮ್ಮ ಬಳಿ ಬಂದಾಗ ಬಳಸುವ ಪದಗಳನ್ನು, ಹಿರಿಯ ರಾಜಕಾರಣಿಗಳಿಗೆ ಬಳಸದೆ ಗೌರವಿತವಾಗಿ ನಡೆದುಕೊಳ್ಳಬೇಕಾಗಿ ಗೌರವ ಪೂರ್ವಕವಾಗಿ ಕೇಳಿಕೊಳ್ಳುತ್ತೇನೆ.

Leave a Reply

Your email address will not be published. Required fields are marked *

error: Content is protected !!