ತೊಗರಿ ಬೆಳೆಯಲ್ಲಿ ಜಿಲ್ಲೆಯ ರೈತರ ವಿಶೇಷ ಸಾಧನೆ: ರಾಜ್ಯ ಮಟ್ಟದ ಕೃಷಿ ಪ್ರಶಸ್ತಿ ಬೆಳೆ ಸ್ಪರ್ಧೆಯಲ್ಲಿ ಮೂರೂ ಸ್ಥಾನ

Special achievement of district farmers in Togari crop: 3rd place in state level agriculture award crop competition

ದಾವಣಗೆರೆ  : ಕೃಷಿ ಇಲಾಖೆಯಲ್ಲಿ 2021-22 ನೇ ಸಾಲಿನ ಕೃಷಿ ಪ್ರಶಸ್ತಿ ಬೆಳೆ ಸ್ಪರ್ಧೆ ಯೋಜನೆಯಡಿ ರಾಜ್ಯದ ಎಲ್ಲಾ ಜಿಲ್ಲೆಗಳ ರೈತರು ಹೆಸರು  ನೊಂದಾಯಿಸಿ ಸ್ಪರ್ಧೆಯಲ್ಲಿ ಭಾಗವಹಿದ್ದರು ಅದರಲ್ಲಿ ಜಿಲ್ಲೆಯಿಂದ 10 ಜನ ರೈತರು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ತೊಗರಿ ಬೆಳೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಚನ್ನಗಿರಿಯ ಮಾದಾಪುರ ಗ್ರಾಮದ ವಿರುಪಾಕ್ಷಪ್ಪ, ದ್ವಿತೀಯ ಸ್ಥಾನ ಚನ್ನಗಿರಿಯ ನೀತಿಗೆರೆ ಗ್ರಾಮದ ವೀರಾಚಾರಿ ಮತ್ತು ತೃತಿಯ ಸ್ಥಾನವನ್ನು ಹರಿಹರದ ರಾಮತೀರ್ಥ ಗ್ರಾಮದ ಸೋಮಪ್ಪ ಎಸ್.ಎನ್ ಇವರು ಪಡೆದಿದ್ದಾರೆ.
ರಾಜ್ಯ ಮಟ್ಟದ ಮುಸುಕಿನ ಜೋಳ ಕೃಷಿ ಪ್ರಶಸ್ತಿ ಬೆಳೆ ಸ್ಪರ್ಧೆ ಯೋಜನೆಯಡಿ ಚನ್ನಗಿರಿ ತಾಲ್ಲೂಕಿನ ಮುದಿಗೆರೆ ಗ್ರಾಮದ  ರೈತರಾದ ರುದ್ರಪ್ಪ, ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದು, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ವಿಜೇತರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!