ಎಸ್.ಎಸ್. ಕೇರ್ ಟ್ರಸ್ಟ್ ಮೂಲಕ ಬಡವರಿಗೆ ಆರೋಗ್ಯ ಭಾಗ್ಯ ಕಲ್ಪಿಸುತ್ತಿರುವ ಶ್ರೀಮತಿ ಪ್ರಭಾ ಎಸ್.ಎಸ್. ಮಲ್ಲಿಕಾರ್ಜುನ್.
ದಾವಣಗೆರೆ: ಸಮಾಜದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಬಹಳ ಮುಖ್ಯ, ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವೆಚ್ಚವನ್ನು ಬರಿಸುವುದು ಶ್ರೀ ಸಾಮಾನ್ಯನಿಗೆ ಕಷ್ಟಕರವಾಗಿದ್ದು, ಒಂದು ಸರ್ಕಾರ ಮಾಡಲು ಕಷ್ಟಪಡುವಂತಹ ಉಚಿತ ಆರೋಗ್ಯ ವ್ಯವಸ್ಥೆಯಂತಹ ಯೋಜನೆಯನ್ನು, ಒಂದು ಟ್ರಸ್ಟ್ ಮೂಲಕ ಮಾಡಿ ಚಿಕಿತ್ಸೆಯ ಅವಶ್ಯವಿರುವ ಪ್ರತಿಯೊಬ್ಬ ಶ್ರೀ ಸಾಮಾನ್ಯನಿಗೆ ಆರೋಗ್ಯ ಮಾಹಿತಿ, ಉಚಿತ ಚಿಕಿತ್ಸೆ ನೀಡುವ ಮೂಲಕ ಬಡವರ ಪಾಲಿನ ತಾಯಿ, ಸಹೋದರಿಯಾಗಿರುವ ಶ್ರೀಮತಿ ಪ್ರಭಾ ಎಸ್.ಎಸ್ ಮಲ್ಲಿಕಾರ್ಜುನ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ಗರ್ಭಿಣಿ ಸ್ತ್ರೀಯರಿಂದ ಹಿಡಿದು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ, ಸ್ತನ ಕ್ಯಾನ್ಸರ್, ಕಣ್ಣಿನ ಚಿಕಿತ್ಸೆ, ಡಯಾಲಿಸಿಸ್ ಹಾಗೂ ಇನ್ನಿತರ ಶಸ್ತ್ರ ಚಿಕಿತ್ಸೆಯ ಅವಶ್ಯವಿರುವ ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮೂಲಕ ಹೈಟೆಕ್ ಚಿಕಿತ್ಸೆಯನ್ನು ಉಚಿತವಾಗಿ ನೀಡುವ ಇವರ ಗುಣ ಅಭಿನಂದನಾರ್ಹ.
ವೈದ್ಯರಾಗಲಿ, ಸಂಘಟಕರಾಗಲಿ ನೀಡುವ ಪ್ರತಿಯೊಬ್ಬರ ಸಲಹೆಯನ್ನು ಶಾಂತ ಚಿತ್ತರಾಗಿ ಅಲಿಸುವ ಇವರು, ಅವರ ಸಲಹೆಗಳನ್ನು ಅಳೆದು ತೂಗಿ ಅಂತಿಮವಾಗಿ ಪ್ರತಿಯೊಬ್ಬರಿಗೂ ಅನುಕೂಲವಾಗುವ ರೀತಿಯಲ್ಲಿ ತೆಗೆದುಕೊಳ್ಳು ಇವರ ತೀರ್ಮಾನಗಳು ಬಡವರ ಸ್ನೇಹಿ ತೀರ್ಮಾನಗಳು.
ಗ್ರಾಮಾಂತರ ಪ್ರದೇಶಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸುವ ಮೂಲಕ ಪ್ರತಿಯೊಬ್ಬರಿಗೂ ಆರೋಗ್ಯದ ಸಮಸ್ಯೆಯ ಮುನ್ನೆಚ್ಚರಿಕೆ, ತಿಳುವಳಿಕೆ ಹಾಗೂ ಚಿಕಿತ್ಸೆಯ ಅವಶ್ಯವಿರುವ ರೋಗಿಗಳಿಗೆ ತಮ್ಮದೇ ಟ್ರಸ್ಟ್ ಮೂಲಕ ಉಚಿತವಾಗಿ ಗುಣಮಟ್ಟದ ಚಿಕಿತ್ಸೆ ನೀಡುವುದು, ಇವರಿಗೆ ಸಾರ್ವಜನಿಕರ ಆರೋಗ್ಯದ ಬಗ್ಗೆ ಇರುವ ಕಾಳಜಿಗೆ ಸಾಕ್ಷಿ.
ಉಚಿತ ಆರೋಗ್ಯ ಶಿಬಿರಗಳಲ್ಲಿ ಡಯಾಲಿಸಿಸ್ ರೋಗಿಗಳ ಸಂಖ್ಯೆ ಹೆಚ್ಚಾದಾಗ, ರೋಗಿಗಳಿಗೆ ಉಚಿತ ಡಯಾಲಿಸಿಸ್ ನೀಡಲು ತಮ್ಮಲ್ಲಿರುವ ಇರುವ ಡಯಾಲಿಸಿಸ್ ಯೂನಿಟ್ ಗಳು ಕಡಿಮೆ ಇರುವ ಮಾಹಿತಿ ಬಂದ ತಕ್ಷಣ, ತಕ್ಷಣವೇ ಮಾರ್ಗದರ್ಶಕರಾದ ಡಾ. ಶಾಮನೂರು ಶಿವಶಂಕರಪ್ಪನವರು ಹಾಗೂ ಎಸ್.ಎಸ್ ಮಲ್ಲಿಕಾರ್ಜುನ್ ರವರ ಜೊತೆ ಚರ್ಚಿಸಿ ಡಯಾಲಿಸಿಸ್ ಯೂನಿಟ್ ಗಳ ಸಂಖ್ಯೆ ಹೆಚ್ಚಾಗಿದ್ದು ಇವರಿಗೆ ರೋಗಿಗಳ ಬಗ್ಗೆ ಇರುವ ಕಾಳಜಿ ತೋರಿಸುತ್ತದೆ.
ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಇಷ್ಟೊಂದು ಕಾಳಜಿ ವಹಿಸುವ ತಮಗೆ, ಆ ದೇವರು ಇನ್ನೂ ಹೆಚ್ಚಿನ ಆರೋಗ್ಯ ನೀಡಲಿ ಎಂದು ತಮ್ಮಿಂದ ಆರೋಗ್ಯ ಭಾಗ್ಯ ಪಡೆದ ಎಲ್ಲರ ಪರವಾಗಿ ಧನ್ಯವಾದ ತಿಳಿಸುತ್ತಾ, ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯಗಳು ಕೋರುವ.