ನಲ್ಮ್ ಯೋಜನೆಯಡಿ ಸ್ವಸಹಾಯ ಸಂಘದವರಿಗೆ ಅಭಿವೃದ್ಧಿ ಕಾರ್ಯಾಗಾರ
ದಾವಣಗೆರೆ: ಮಹಾನಗರ ಪಾಲಿಕೆ, ದೀನ ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ, ಜೀವನೋಪಾಯ ಅಭಿಯಾನ (ಡೇ-ನಲ್ಮ್) ವತಿಯಿಂದ 2022-23ನೇ ಸಾಲಿನ ಡೇ-ನಲ್ಸ್ ಯೋಜನೆಯಡಿ ಸ್ವ-ಸಹಾಯ ಸಂಘಗಳ ಪುಸ್ತಕ ಬರಹಕಾರರಿಗೆ ಒಂದು ದಿನದ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ.
ನಗರದ ರೋಟರಿ ಬಾಲಭವನದಲ್ಲಿ ಮಾ.14ರಂದು ನಡೆದ ಕಾರ್ಯಾಗಾರದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಬಸವನಗೌಡ್ರ, ನಲ್ಮ್ ಕಾರ್ಯಕ್ರಮ ವ್ಯವಸ್ಥಾಪಕರಾದ ಭೋಜರಾಜ್ ಇತರರು ಉಪಸ್ಥಿತರಿದ್ದರು.
ಶ್ರೀಮತಿ ಜ್ಯೋತಿ ಹಾಗೂ ಆರತಿ ಪ್ರಾರ್ಥಿಸಿದರು. ಗದಿಗೇಶ್ ಕೆ.ಸಿರ್ಸಿ ಸ್ವಾಗತಿಸಿದರು. ಎಸ್. ಪ್ರಸನ್ನಕುಮಾರ್ ವಂದಿಸಿದರು.
ಪಾಲಿಕೆ ನಗರ ಬಡತನ ನಿವಾರಣೆ ಕೋಶ ಅಭಿಯಾನ ವ್ಯವಸ್ಥಾಪಕ ವಿರೂಪಾಕ್ಷೌಡ ಕಾರ್ಯಕ್ರಮ ನಿರೂಪಿಸಿದರು.
ನಲ್ಮ್ ಯೋಜನೆಯಡಿ 2022-23ನೇ ಸಾಲಿನಲ್ಲಿ 177 ಸ್ವ ಸಹಾಯ ಸಂಘಗಳನ್ನು ರಚಿಸಿದ್ದು, ಈ ಸಂಘದ ಎಲ್ಲಾ ಪುಸ್ತಕ ಬರಹಗಾರರಿಗೆ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.