ದಾವಣಗೆರೆ: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಪ್ರಚಾರದ ಭರಾಟೆ ಹೆಚ್ಚಾಗಿಯೇ ಇದೆ. ಅಭ್ಯರ್ಥಿಗಳು ಬಿಸಿಲಿನಲ್ಲಿ, ಊಟ ಉಪಹಾರ ಲೆಕ್ಕಿಸದೆ ಪ್ರಚಾರದಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ದಾವಣಗೆರೆ ಉತ್ತರ ಕ್ಷೇತ್ರದ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ್ ಸೋಮವಾರ ಮಧ್ಯಾಹ್ನ ಸುಡು ಬಿಸಿನಲ್ಲಿಯೇ ತೆರೆದ ವಾಹನದಲ್ಲಿ ನಿಂತು ಬೆಣ್ಣೆ ದೋಸೆ ಉಪಾಹರ ಸೇವಿಸಿದರು.
ಬೆಳಿಗ್ಗೆಯಿಂದಲೇ ಅಭಿಮಾನಿಗಳು, ಕಾರ್ಯಕರ್ತರ ಜೊತೆ ಪ್ರಚಾರದಲ್ಲಿ ತೊಡಗಿರುವ ಅವರು ನಗರದ ಹೆಚ್.ಕೆ.ಆರ್. ವೃತ್ತದಲ್ಲಿರುವ ಬೆಣ್ಣೆ ದೋಸೆ ಹೋಟೆಲ್‌ನಿಂದ ದೋಸೆ ತರಿಸಿಕೊಂಡರು. ನಂತರ ಒಂದೇ ತಟ್ಟೆಯಲ್ಲಿ ಸ್ನೇಹಿತರ ಜೊತೆ ಅವರು ಉಪಹಾರ ಸೇವಿಸಿದರು.
