ರಾಜ್ಯ ಮಟ್ಟದ ಉಚಿತ ಚಲನಚಿತ್ರ ಗೀತೆ ಸ್ಪರ್ಧೆ: ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ಆಯೋಜನೆ

ದಾವಣಗೆರೆ : ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ರಾಜ್ಯ ಮಟ್ಟದ ಉಚಿತ ಚಲನಚಿತ್ರ ಗೀತೆ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ತಿಳಿಸಿದ್ದಾರೆ.
ಸ್ಪರ್ಧಿಗಳು ಕರೋಕೆ, ಟ್ರಾಕ್‌ನಲ್ಲಿ ತಮ್ಮ ಮೊಬೈಲ್‌ನಲ್ಲಿ ಪಲ್ಲವಿ, ಚರಣದೊಂದಿಗೆ ಎರಡು ನಿಮಿಷದ ವಿಡಿಯೋ ಚಿತ್ರೀಕರಿಸಿ ಆಗಸ್ಟ್ 1 ರ ಸಂಜೆ 5 ಗಂಟೆಯೊಳಗೆ 7338143236 ಈ ವ್ಯಾಟ್ಸಪ್ ನಂಬರ್ ಕಳಿಸಬೇಕು. ಹಾಡಿನ ವಿಡಿಯೋ ಜೊತೆಯಲ್ಲಿ ಸ್ಪರ್ಧಿಗಳು ಪ್ರತ್ಯೇಕವಾಗಿ ಕನ್ನಡದಲಲಿ ತಮ್ಮ ಪೂರ್ಣ ಪ್ರಮಾಣದ ಹೆಸರು, ವಿಳಾಸ , ತಾಲ್ಲೂಕು, ಜಿಲ್ಲೆ ವಯಸ್ಸು ಹಾಗೂ ವ್ಯಾಟ್ಸಪ್ ನಂಬರ್ ಕಳಿಸಬೇಕು ಎಂದು ತೀರ್ಪುಗಾರರಲ್ಲಿ ಒಬ್ಬರಾದ ರಾಜ್ಯ ಪ್ರಶಸ್ತಿ ಪುರಸ್ಕೃತ ಯುವ ಗಾಯಕಿ ರಕ್ಷಾ ಕೆ.ಆರ್. ತಿಳಿಸಿದ್ದಾರೆ.
ವಯಸ್ಸಿಗೆ ಅನುಗುಣವಾಗಿಎರಡು ವಿಭಾಗಗಳಾಗಿ ವಿಂಗಡಿಸಿದ್ದು 5 ವರ್ಷದಿಂದ 15 ವರ್ಷ ಮಕ್ಕಳ ಕಿರಿಯರ ವಿಭಾಗ, 16 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಹಿರಿಯರ ವಿಭಾಗ. ಕನ್ನಡ ಚಲನಚಿತ್ರ ಗೀತೆ ಮಾತ್ರ ಹಾಡಬೇಕು. ಒಬ್ಬರಿಗೆ ಒಂದೇ ಹಾಡಿಗೆ ಅವಕಾಶ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ಬಿ.ಲೋಕೇಶ್ ತಿಳಿಸಿದ್ದಾರೆ.
ಕರೋನಾದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೂಲೆಗುಂಪಾದ ಹಿರಿಯ-ಕಿರಿಯ ಗಾಯನ ಪ್ರತಿಭೆಗಳಿಗೆ ಮುಕ್ತವಾದ ಅವಕಾಶ ಕಲ್ಪಿಸಿ. ಅವರುಗಳ ಪ್ರತಿಭೆ ಅನಾವರಣಗೊಳ್ಳುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾದ ಈ ಸ್ಪರ್ಧೆಯ ಯಾವುದೇ ಕಾರ್ಯಕ್ರಮವಾಗಲಿ, ಬಹುಮಾನ ವಿತರಣಾ ಸಮಾರಂಭವಿರುವುದಿಲ್ಲ. ಸ್ಪರ್ಧೆಯ ನಂತರ ಬಹುಮಾನ ವಿಜೇತರಿಗೆ ಮಾತ್ರ ಫಲಿತಾಂಶ, ಪ್ರಮಾಣಪತ್ರ ಸ್ಪರ್ಧಿಗಳು ಕೊಟ್ಟ ವ್ಯಾಟ್ಸಪ್ ನಂಬರಿಗೆ ಕಳಿಸಲಾಗುವುದು ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9901122728 ಈ ಮೊಬೈಲ್‌ಗೆ ಸಂಪರ್ಕಿಸಬಹುದಾಗಿದೆ.