ಜಗಳೂರು ಮಾಜಿ ಶಾಸಕ ಹೆಚ್.ಪಿ ರಾಜೇಶ್ ಆರೋಗ್ಯಕ್ಕಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಜಗಳೂರು: ಕೊರೋನಾ ಎರಡನೆ ಅಲೆಯಲ್ಲಿ ಸೋಂಕು ತಗುಲಿ ಬೆಂಗಳೂರಿನ ಮಣಿಪಾಲ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರ  ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಅತಿ ಶೀಘ್ರವಾಗಿ ಗುಣಮುಖರಾಗಿ ಬರಲಿ ಎಂದು ಜಗಳೂರು ಬ್ಲಾಕ್ ಕಾಂಗ್ರೆಸ್ ಮುಖಂಡರು ಹಾಗು ಕಾರ್ಯಕರ್ತರು ತಾಲ್ಲೂಕಿನ ಐತಿಹಾಸಿಕ ಕ್ಷೇತ್ರ ಕೊಣಚಗಲ್ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ ಕ್ಷೇತ್ರದ ಮಾಜಿ ಶಾಸಕರು ಹಾಗು ನಮ್ಮೆಲ್ಲರ ನಾಯಕರು ಹೆಚ್.ಪಿ.ರಾಜೇಶ್ ಅವರು ಸತತ ಎರಡೆ ಅಲೆ ಕೊರೊನಾ ಸೋಂಕು ಅವನ್ನ ಕಾಡಿದೆ ಕ್ಷೇತ್ರದ ಸುತ್ತಾಟ ಹಾಗು ಸಾರ್ವಜನಿಕರ ಕಾರ್ತಕರ್ತರ ಬೇಟಿ ಸಂದರ್ಭದಲ್ಲಿ ಸಾಮಾನ್ಯವಾಗಿ ಸೋಂಕು ತಗುಲಿದೆ ಮಣಿಪಾಲ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡಿತ್ತಿದ್ದಾರೆ ಆದ್ದರಿಂದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಆತಂಕ ಪಡುವ ಅಗತ್ಯವಿಲ್ಲ ಸಾಮೂಹಿಕ ನಾಯಕತ್ವದಲ್ಲಿ ಮತ್ತು ಮಾಜಿ ಶಾಸಕರ ನೇತೃತ್ವ ಮಾರ್ಗದರ್ಶನದಲ್ಲಿ ಜನಸಾಮಾನ್ಯರಿಗೆ ನೆರವಾಗುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳೊಣ ಎಂದರು.

ಹಿರಿಯ ಕಾಂಗ್ರೆಸ್ ಮುಖಂಡ ಬಿಳಿಚೋಡು ಎಲ್.ಬಿ.ಬೈರೇಶ್ , ಕಾಂಗ್ರೆಸ್ ಮುಖಂಡರಾದ ಬಸವಾಪುರ ರವಿಚಂದ್ರ . ಗಿರೀಶ್ ಒಡೆಯರ್  ವೀರಣ್ಣಗೌಡ್ರು.ಗೋಡೆ ಪ್ರಕಾಶ್.ಬಿ.ಲೋಕೇಶ್  ಮಾಳಮ್ಮನಹಳ್ಳಿ ವೆಂಕಟೇಶ್. ಪಿ.ರೇವಣ್ಣ , ಡಿ.ಟಿ.ಕೆಂಚಮ್ಮ .ಸಾವಿತ್ರಮ್ಮ ಹಲವರು ಇದ್ದರು.

Leave a Reply

Your email address will not be published. Required fields are marked *

error: Content is protected !!