ಅಲೆಮಾರಿ ಜನಾಂಗ ಹಕ್ಕಿಪಿಕ್ಕಿ ಕ್ಯಾಂಪ್‍ನಲ್ಲಿ ಮತದಾನ ಹೆಚ್ಚಿಸಲು ಕ್ರಮ; ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

ಅಲೆಮಾರಿ ಜನಾಂಗ ಹಕ್ಕಿಪಿಕ್ಕಿ ಕ್ಯಾಂಪ್ನಲ್ಲಿ ಮತದಾನ ಹೆಚ್ಚಿಸಲು ಕ್ರಮ; ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

ದಾವಣಗೆರೆ :ದಿನಾಂಕ:15-04-2023 ರಂದು ದಾವಣಗೆರೆ ಜಿಲ್ಲೆಯ ಅಸ್ತಾಪನಹಳ್ಳಿ ಮತ್ತು ಗೋಪನಾಳು ಗ್ರಾಮದಲ್ಲಿ ಅಲೆಮಾರಿ ಜನಾಂಗ ಹಕ್ಕಿಪಿಕ್ಕಿ ಜನರು ವಾಸ ಮಾಡುತ್ತಿದ್ದು ಇವರೂ ಸಹ ಮತದಾನ ಮಾಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.

ಜಿಲ್ಲಾಡಳಿ ಮತ್ತು ಸ್ವೀಪ್ ಸಮಿತಿಯಿಂದ ಅಸ್ತಾಪನಹಳ್ಳಿ ಮತ್ತು ಗೋಪನಾಳು ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಎರಡು ಗ್ರಾಮಗಳು ಬುಡಕಟ್ಟು ಜನಾಂಗಕ್ಕೆ ಸೇರಿದ ಹಕ್ಕಿ ಪಿಕ್ಕಿ ಜನಾಂಗದವರು ಹೆಚ್ಚು ವಾಸಿಸುತ್ತಿದ್ದಾರೆ. ಇವರ ಮುಖ್ಯ ಕಸುಬು ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಊರೂರು ಸುತ್ತುತ್ತಾರೆ. ಈ ನಿಟ್ಟಿನಲ್ಲಿ ಜನಾಂಗಕ್ಕೆ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಮತದಾನ ದಿನದಂದು ಎಲ್ಲರೂ ಮತದಾನ ಮಾಡುವಂತೆ ಪ್ರೇರೆಪಿಸಲಾಯಿತು.

ಅಲೆಮಾರಿ ಜನಾಂಗ ಹಕ್ಕಿಪಿಕ್ಕಿ ಕ್ಯಾಂಪ್‍ನಲ್ಲಿ ಮತದಾನ ಹೆಚ್ಚಿಸಲು ಕ್ರಮ; ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

ಮತದಾನ ನಮ್ಮ ಹಕ್ಕು, ತಪ್ಪದೇ ಮತ ಚಲಾಯಿಸಿ. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಮತದಾನ ಮಾಡಲು ತಿಳಿಸಿ ಗ್ರಾಮದ ವಾಸಿಗಳು ಬೇರೆ ಕಡೆ ಇದ್ದಲ್ಲಿ ಮತದಾನದ ದಿನ ಮೇ 10 ರಂದು ತಪ್ಪದೇ ಗ್ರಾಮಕ್ಕೆ ಬಂದು ಮತದಾನ ಮಾಡಲು ತಿಳಿಸುವಂತೆ ಗ್ರಾಮಸ್ಥರಿಗೆ ವಿನಂತಿಸಿದರು.

ಜಿಲ್ಲಾ ಪೊಲೀಸ್   ಸಿ.ಬಿ.ರಿಷ್ಯಂತ್ ಮಾತನಾಡಿ ಗ್ರಾಮದಲ್ಲಿ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ಟೋಲ್ ಫ್ರೀ ಸಂಖ್ಯೆ 112 ಗೆ ಕರೆ ಮಾಡಲು ಈ. ಕರೆ ಮಾಡಿದ ವ್ಯಕ್ತಿಯ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದರು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಹಿಟ್ನಾಳ್ ಮಾತನಾಡಿ 2018 ರ ವಿಧಾನಸಭಾ ಚುನಾವಣೆಯಲ್ಲಿ ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ80 ರಷ್ಟು ಸರಾಸರಿ ಮತದಾನವಾಗಿತ್ತು. ಈ ವಿಧಾನಸಭಾ ಕ್ಷೇತ್ರದ ಸರಾಸರಿಗಿಂತ ಕಡಿಮೆ ಮತದಾನವಾಗಿದ್ದು ಅಸ್ತಾಪನಹಳ್ಳಿಯಲ್ಲಿ ಶೇ 68.41 ಮತ್ತು ಗೋಪನಾಳು ಗ್ರಾಮದಲ್ಲಿ ಶೇ 70.07 ಕಡಿಮೆ ಮತದಾನವಾಗಿತ್ತು.

2023 ರ ವಿಧಾನಸಭಾ ಚುನಾವಣೆಯಲ್ಲಿ ಶೇ 100%ರಷ್ಟು ಮತದಾನ ಮಾಡಲು ತಿಳಿಸಿದ ಅವರು   ಯಾವುದೇ ಆಮಿಷ ಹಣ, ಮದ್ಯ ಹಾಗೂ ಇತರೆ ಆಸೆಗಳಿಗೆ ಒಳಗಾಗದೇ ಮುಕ್ತ, ನ್ಯಾಯಸಮ್ಮತ  ಮತ್ತು ಶಾಂತಿಯುತ ಮತದಾನ ಮಾಡಲು ತಿಳಿಸಿದರು.

18 ವರ್ಷ ತುಂಬಿದ ಯುವಕ, ಯುವತಿಯರಿಗೆ ಹೂಸ ಮತದಾನ ಚೀಟಿಯನ್ನು ವಿತರಿಸಿ ಬೀದಿ ನಾಟಕದ ಮೂಲಕ ವಿಶೇಷ ಜಾಗೃತಿ ಕಾರ್ಯಕ್ರಮಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಜಿ.ಪಂ.ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!