ದಾವಣಗೆರೆ: ಇತ್ತೀಚೆಗೆ ಅಡಿಕೆ ಸಿಪ್ಪೆಯನ್ನು ರಸ್ತೆ ಬದಿಯಲ್ಲಿ ಸುರಿದು ಬೆಂಕಿ ಹಚ್ಚುವ ಕೆಲಸ ಹೆಚ್ಚಾಗಿ ನಡೆಯುತ್ತಿದ್ದು, ಬೆಂಕಿಯ ಹೊಗೆ ರಸ್ತೆ ಪೂರ್ತಿ ವ್ಯಾಪಿಸಿ, ರಸ್ತೆಯಲ್ಲಿ ವಾಹನ ಸವಾರರಿಗೆ ಎದುರಿನವರು ಕಾಣದೆ ಅಪಘಾತಗಳೂ ಹೆಚ್ಚಾಗುತ್ತಿವೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ತೇಜಸ್ವಿ ಪಟೇಲ್ ಹೇಳಿದ್ದಾರೆ.
ನಮ್ಮ ಹೊಲದಲ್ಲಿ ಅಡಿಕೆ ಸಿಪ್ಪೆ ಹಾಕಿದರೆ ತೊಂದೆರಯಾಗುತ್ತದೆ ಎಂದು ರಸ್ತೆ ಬದಿ ಹಾಕಿ ಬೆಂಕಿ ಹಚ್ಚುವುದು ಸರಿಯಲ್ಲ. ಅಡಿಕೆ ಬೆಳೆಯಿಂದ ಸಾಕಷ್ಟು ಲಾಭ ಮಾಡಿಕೊಳ್ಳುವ ಜನರು, ಸಿಪ್ಪೆಯನ್ನೂ ಸಮರ್ಪಕವಾಗಿ ನಿರ್ವಹಣೆ ಮಾಡುವ ಬಗ್ಗೆಯೂ ಚಿಂತಿಸಬೇಕಿದೆ ಎಂದವಹು ಹೇಳಿದ್ದಾರೆ.
ರಸ್ತೆ ಬದಿಯಲ್ಲಿ ಹಾಕಿ ಬೆಂಕಿ ಇಟ್ಟಾಕ್ಷಣ ಸಿಪ್ಪೆಯ ಸಮಸ್ಯೆಗೆ ಪರಿಹಾರ ಕಲ್ಪಿಸಿದಂತಾಗುವುದಿಲ್ಲ. ಸಿಪ್ಪೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಬಗ್ಗೆ ಸಂಶೋಧನೆಗಳಾಗಬೇಕಿದೆ ಎಂದ ಅವರು, ದಯಮಾಡಿ ರಸ್ತೆ ಬದಿಯಲ್ಲಿ ಹಾಕಿ ಸುಡುವ ನಡವಳಿಕೆಯನ್ನು ಇಲ್ಲಿಗೇ ನಿಲ್ಲಿಸಬೇಕು ಎಂದು ವಿನಂತಿಸಿದ್ದಾರೆ.
ಸಿಪ್ಪೆಗೆ ಬೆಂಕಿ ಹಚ್ಚಿದ ಹೊಗೆಯಿಂದ ರಸ್ತೆ ಕಾಣದೆ ಎದುರು ಗಡೆ ಯಿಂದ ಬಂದ ಲಾರಿಯೊಂದು ಚಲಿಸುತಿದ್ದ ಕಾರ್ ಮುಂಭಾಗಕ್ಕೆ ಡಿಕ್ಕಿ ಪಡಿಸಿ ನಿಲ್ಲಿಸದೆ ಪರಾರಿಯಾಗಿದೆ. ಅದೃಷ್ಟ ವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದವರು ಹೇಳಿದ್ದಾರೆ.
