“ಬೂತ್ ವಿಜಯ ಅಭಿಯಾನ”ಕ್ಕೆ ಅಭೂತಪೂರ್ವ ಬೆಂಬಲ

ದಾವಣಗೆರೆ :ದಕ್ಷಿಣ ಮಂಡಲದ ವಾರ್ಡ ನಂ 10 ರಲ್ಲಿ ” ಬೂತ್‌ ವಿಜಯ ಅಭಿಯಾನ್ ” ಕಾರ್ಯಕ್ರಮದಲ್ಲಿ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ರಾಕೇಶ್ ಯಶವಂತರಾವ್ ಜಾಧವ್, ಸೇರಿದಂತೆ ವಾರ್ಡಿನ ಪ್ರಮುಖರು ಭಾಗವಹಿಸಿದರು

ನಗರ ಮಂಡಲದ ವ್ಯಾಪ್ತಿಯ ಬೂತ್‌ಗಳಲ್ಲಿ ಸಮಿತಿಯ ಕಾರ್ಯವೈಖರಿ ಪರಿಶೀಲಿಸಲು. ಬೂತ್‌ ತಂಡದ ಸದಸ್ಯರ ಮಾಹಿತಿ ಪಂಚರತ್ನ ಸಮಿತಿ ರಚನೆ, ಪೇಜ್‌ ಪ್ರಮುಖರ ನೇಮಕ, ವಾಟ್ಸ್‌ಪ‌ ಗ್ರೂಪ್‌ಗಳ ರಚನೆ ಮಾಡಲು. ಪಕ್ಷ ಸಂಘಟನೆಗೆ ನೀಡಿದ ಯೋಜನೆಯನ್ನು ಕಾರ್ಯಗಳನ್ನು ಶಕ್ತಿಮೀರಿ ಮಾಡಬೇಕೆಂದು ದಕ್ಷಿಣ ವಿಧಾನ ಸಭಾ ಕ್ಷೇತ್ರದ ವಿಸ್ತಾರಕರಾಗಿ ಆಗಮಿಸಿ ಧನುಷ್ ತಿಳಿಸಿದರು

ಕೇಂದ್ರ, ರಾಜ್ಯ ಸರ್ಕಾರಗಳ ಯೊಜನೆಗಳನ್ನು ಮನೆ ಮನೆಗೂ ತಲುಪಿಸಿ, ಪಕ್ಷ ಬಲವರ್ಧನೆಗೆ ಶ್ರಮಿಸಬೇಕು. ಪಕ್ಷ ಸಂಘಟನೆಯಲ್ಲಿ ಬೂತ್ ಕಮಿಟಿ ಅಧ್ಯಕ್ಷರ ಮತ್ತು ಸದಸ್ಯರ ಪಾತ್ರ ಮಹತ್ವದ್ದಾಗಿರುತ್ತದೆ. ಪಕ್ಷವು ನೀಡಿದ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಯಶವಂತರಾವ್ ಜಾಧವ ತಿಳಿಸಿದರು

ಜನರಿಗಾಗಿ ಸರ್ಕಾರ‌ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಪಿಂಚಣಿ, ವಿಧವಾ ವೇತನ‍ ಸಂದ್ಯಾ ಸುರಕ್ಷ, ಆಯುಷ್ಮಾನ್‌ ಭಾರತ, ಉಜ್ವಲ ಯೋಜನೆ, ಕಿಸಾನ್ ‌ ಸಮ್ಮಾನ ಸೇರಿದಂತೆ ಹಿಂದುಳಿದ ‌ವರ್ಗಗಳ ಏಳಿಗೆಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸವನ್ನು ಬೂತ್ ಮಟ್ಟದ ಕಾರ್ಯಕರ್ತರು ಮಾಡಬೇಕೆಂದು ಬಿಜೆಪಿ ಜಿಲ್ಲಾಉಪಾದ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಮಾತನಾಡಿದರು

ಈ ಸಂದರ್ಭದಲ್ಲಿ ಕೊಳ್ಳೆನಹಳ್ಳಿ ಸತೀಶ್ ಬಿಜೆಪಿ ಮಂಡಲದ ಅಧ್ಯಕ್ಷರಾದ ಆನಂದರಾವ್ ಶಿಂದೇ, ಪ್ರಧಾನ ಕಾರ್ಯದರ್ಶಿ ನಿಲಗುಂದ ರಾಜು, ಮಹಾನಗರ ಪಾಲಿಕೆ ಸದಸ್ಯ ಗೋವಿಂದರಾಜ್, ಮಾಜಿ ಸದಸ್ಯ ಶಿವನಗೌಡ ಟಿ ಪಾಟೀಲ, ಟಿಂಕರ್ ಮಂಜಣ್ಣ, ಕಿಶೋರ್ , ಗುರು ಸೋಗಿ, ಬಾಲರಾಜ್ ಶ್ರೇಷ್ಠಿ,ಶಂಕರಗೌಡ ಬಿರಾದಾರ,ನವೀನ ಕುಮಾರ್ ಎಚ್.ಬಿ, ಮಹಾಂತೇಶ್,ಬೂತ್ ಅಧ್ಯಕ್ಷರುಗಳಾದ ಗಣೇಶ್ ತಾಳದಾರ್,ಶಂಕರ್,ಪ್ರಕಾಶ್ ಜಿ ಕೆ,ಸಂತೋಷ ,ಪರುಶುರಾಮ್ ರೊಖಡೆ,ಯರಿಸ್ವಾಮಿ, ರಾಮಣ್ಣ,ತುಕಾರಾಂ,ಶ್ರೀನಿವಾಸ ಕಾಟೆ,ಮಹಿಳಾ ಮುಖಂಡರುಗಳಾದ ಸುಧಮ್ಮ ಲಿಲಮ್ಮ ವಿವಿಧ ಮೋರ್ಚಾ ಪದಾಧಿಕಾರಿಗಳು, ಪ್ರಮುಖರು, ಪಕ್ಷದ ಬೂತ್ ಕಮಿಟಿಯವರು, ಕಾರ್ಯಕರ್ತರು, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!