ವಿವೇಕಿಗಳಾಗಿ ಬಾಳಿ ವಿದ್ಯಾರ್ಥಿಗಳಿಗೆ ಶಶಿಧರ್ ಕಿವಿಮಾತು

ದಾವಣಗೆರೆ: ಪ್ರಜ್ಞೆ, ವಿವೇಕ ಹಾಗೂ ವಿವೇಚನೆಯಿಂದ ಜೀವನ ರೂಪಿಸಿಕೊಳ್ಳಿ. ಆಗ ಯಶಸ್ಸು ತಂತಾನೇ ಹಿಂಬಾಲಿಸುತ್ತದೆ. ಬದುಕು ಉಜ್ವಲವಾಗುತ್ತದೆ ಎಂದು ಮುಖ್ಯೋಪಾಧ್ಯಾಯ ಎಸ್ ಶಶಿಧರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಲೇಬೆನ್ನೂರು ಜಿಗಳಿ ರಸ್ತೆಯಲ್ಲಿರುವ ಒಡೆಯರ ಬಸವಾಪುರದ ಪಟೇಲ್ ಬಸಪ್ಪ ಎಜುಕೇಶನ್ ಅಸೋಸಿಯೇಶನ್ ನ ರಾಜ ರಾಜೇಶ್ವರಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ದಿನಾಂಕ : 12.1.2023 ರ ಬೆಳಗ್ಗೆ 10 ಗಂಟೆಗೆ ವಿವೇಕಾನಂದ ಜಯಂತಿ ಸ್ಮರಣಾರ್ಥ ಆಯೋಜಿಸಲಾಗಿದ್ದ ” ಯುವ ದಿನೋತ್ಸವ ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಓದಿ ವಿದ್ಯಾವಂತರಾಗುವ ಜೊತೆ ಸತ್ಪ್ರಜೆಗಳಾಗಿ ಬಾಳುವುದೇ ನಿಜವಾದ ಶಿಕ್ಷಣ. ವಿವೇಕಾನಂದರು ಇಂತಹ ಶಿಕ್ಷಣದ ಮಹತ್ವವನ್ನು ದೇಶ ವಿದೇಶಗಳಲ್ಲಿ ಸಾರಿದ್ದರು. ಅವರ ನುಡಿಗಳು ಎಂದಿಗೂ ಪ್ರಸ್ತುತ ಎಂದು ಸ್ಮರಿಸಿದರು.
ಬಡವರ, ಅಸಹಾಯಕರ , ಅನಕ್ಷರಸ್ಥರ ಸೇವೆಯಲ್ಲಿ ತೊಡಗುವುದು
ಹಾಗೂ ಸತ್ ಜ್ಞಾನ, ಸದ್ಭಾವನೆಯ ಪ್ರಸರಣ ಕಾರ್ಯದಲ್ಲಿ ತೊಡಗಿ ಇತರರನ್ನು
ಸುಜ್ಞಾನಿಗಳನ್ನಾಗಿಸುವುದೇ ಬಹುದೊಡ್ಡ ಸತ್ಕಾರ್ಯ ಎಂದು ಶಶಿಧರ್ ನುಡಿದರು.

ಸಂಸ್ಥೆಯ ಕಾರ್ಯದರ್ಶಿ ಶಿವಾನಂದಪ್ಪ ಜಿ.ಬಿ, ಪ್ರಾಂಶುಪಾಲರಾದ ಸುಜಾತ ಶಿವಾನಂದಪ್ಪ, ಶಿಕ್ಷಕ ಆಸೀಫುಲ್ಲಾ, ಶಿಕ್ಷಕಿಯರಾದ ಕವಿತಾ ಕೊಮಾರನಹಳ್ಳಿ, ಪ್ರತಿಭಾ ಜಗದೀಶ್ , ಶಾಂತಾ, ಭಾಗ್ಯ ರೇಣುಕಾ ಪ್ರಸನ್ನ, ಅನುಷಾ, ಚಂದನ, ಜಯಲಕ್ಷ್ಮೀ, ಸಂಗೀತ , ಸಂಸ್ಥೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!