ಉಚಿತ ಹೃದಯ ತಪಾಸಣಾ ಶಿಬಿರ
ದಾವಣಗೆರೆ :ಮಿಲ್ಲತ್ ವಿದ್ಯಾ ಮತ್ತು ಕಲ್ಯಾಣ ಸಂಸ್ಥೆ ವತಿಯಿಂದ ನಾಳೆ ಬಾಷಾ ನಗರದ ಮಿಲ್ಲತ್ ಕ್ಯಾಂಪಸ್ ನಲ್ಲಿ ಬೆಳಿಗ್ಗೆ 10ರಿಂದ ಮಧ್ಯಹ್ನ 2 ಘಂಟೆಯವರೆಗೆ ಸಾರ್ವಜನಿಕರಿಗಾಗಿ ಎಸ್ಸೆಸ್ ನಾರಾಯಣ ಹಾರ್ಟ್ ಸೆಂಟರ್ ದಾವಣಗೆರೆ ಇವರ ಸಹಯೋಗದೊಂದಿಗೆಉಚಿತ ಹೃದಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದ ಉದ್ಘಾಟನೆಯನ್ನು ಮಿಲ್ಲತ್ ಸಮೂಹ ಸಂಸ್ಥೆಗಳ , ಗೌರವ ಕಾರ್ಯದರ್ಶಿಗಳಾದ ಸೈಯದ್ ಸೈಫುಲ್ಲಾ ಸಾಬ್ ಹಾಗೂ ಎಸ್ಸೆಸ್ ನಾರಾಯಣ ಆಸ್ಪತ್ರೆಯ ವೈದ್ಯಾಧಿಕಾರಿ ಗುರುರಾಜ್ ರವರು ನೆರವೇರಿಸಲಿದ್ದಾರೆ. ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.