ನೇಪಾಳದ ವಿಮಾನ ಪತನ: ಐವರು ಭಾರತೀಯರು ಸೇರಿ 68 ಸಾವು

ಕಠ್ಮಂಡು: ಪ್ರಯಾಣಿಕ ವಿಮಾನವೊಂದು ಭಾನುವಾರ ಪತನಗೊಂಡಿದ್ದು, 68 ಮಂದಿ ಮೃತಪಟ್ಟಿದ್ದಾರೆ. ಪೂರ್ತಿ ವಿಮಾನ ಬೆಂಕಿ ಹೊತ್ತಿ ಉರಿಯುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ನೇಪಾಳದ ಪೋಖರಾ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದ ವಿಮಾನ ಪತನಗೊಂಡಿದೆ. ವಿಮಾನದಲ್ಲಿ 15 ವಿದೇಶಿ ಪ್ರಯಾಣಿಕರು ಸೇರಿದಂತೆ ಒಟ್ಟು 72 ಮಂದಿ ಇದ್ದರು. ಇವರಲ್ಲಿ ಐವರು ಭಾರತೀಯರು ಸೇರಿದ್ದಾರೆ.

ಯೇತಿ ಏರ್‌ಲೈನ್ಸ್‌ 9N-ANC ATR-72 ವಿಮಾನವು ಕಠ್ಮಂಡು ವಿಮಾನ ನಿಲ್ದಾಣದಿಂದ ಬೆಳಿಗ್ಗೆ 10.33ಕ್ಕೆ ಹೊರಟಿತ್ತು. ಪೋಖರಾದಲ್ಲಿ ಲ್ಯಾಂಡಿಂಗ್‌ ವೇಳೆ  ಹಳೆಯ ವಿಮಾನ ನಿಲ್ದಾಣ ಮತ್ತು ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ಸೇತಿ ನದಿ ದಂಡೆ ಮೇಲೆ ವಿಮಾನ ಪತನಗೊಂಡಿದೆ.
ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕಸಕಿ ಜಿಲ್ಲಾಧಿಕಾರಿ ಟೆಕ್‌ ಬಹಾದ್ದೂರ್‌ ಸ್ಥಳೀಯ ಮಾಧ್ಯಮಗಳಿಗೆ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!