ನೀತಿ ಸಂಹಿತೆ ಉಲ್ಲಂಘನೆ, ಅಬಕಾರಿ ಇಲಾಖೆಯಿಂದ 1.95 ಕೋಟಿ ಮೌಲ್ಯದ ಪದಾರ್ಥಗಳ ವಶ

ನೀತಿ ಸಂಹಿತೆ ಉಲ್ಲಂಘನೆ, ಅಬಕಾರಿ ಇಲಾಖೆಯಿಂದ 1.95 ಕೋಟಿ ಮೌಲ್ಯದ ಪದಾರ್ಥಗಳ ವಶ

ದಾವಣಗೆರೆ : ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಮಾರ್ಚ್ 29 ರಿಂದ ಏ.15 ರ ವರೆಗೆ ರೂ.1.95 ಕೋಟಿ ಮೌಲ್ಯದ ಮದ್ಯ, ಮಾದಕ ವಸ್ತುಗಳು ಸೇರಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಆಯುಕ್ತರಾದ ಅಶ್ವಿನಿ ಬಿ.ಎಂ ಇವರು ತಿಳಿಸಿದ್ದಾರೆ.

ನೀತಿ ಸಂಹಿತೆ ಉಲ್ಲಂಘನೆ, ಅಬಕಾರಿ ಇಲಾಖೆಯಿಂದ 1.95 ಕೋಟಿ ಮೌಲ್ಯದ ಪದಾರ್ಥಗಳ ವಶ

ಈ ಅವಧಿಯಲ್ಲಿ 350 ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಅದರಲ್ಲಿ 48 ಘೋರ, 41 ಬಿ.ಎಲ್.ಸಿ, 15ಎ 260, ಎನ್.ಡಿ.ಪಿ.ಎಸ್.1 ಪ್ರಕರಣಗಳು ಸೇರಿವೆ. ಈ ಎಲ್ಲಾ ಪ್ರಕರಣಗಳಿಂದ 13821.705 ಮದ್ಯ, 559.200 ಲೀ ಬಿಯರ್, 3.209 ಕೆ.ಜಿ. ಮಾದಕ ವಸ್ತುಗಳು, 35 ದ್ವಿ ಚಕ್ರ ವಾಹನ, 2 ಲಘು ವಾಹನ, 1 ಭಾರಿ ವಾಹನ ಲಾರಿ ವಶಪಡಿಸಿಕೊಳ್ಳಲಾಗಿದೆ. ವಾಹನ ಸೇರಿದಂತೆ ಮದ್ಯ, ಮಾದಕ ವಸ್ತುಗಳು ಸೇರಿ ರೂ.1,95,40,732 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನೀತಿ ಸಂಹಿತೆ ಉಲ್ಲಂಘನೆ, ಅಬಕಾರಿ ಇಲಾಖೆಯಿಂದ 1.95 ಕೋಟಿ ಮೌಲ್ಯದ ಪದಾರ್ಥಗಳ ವಶ

Leave a Reply

Your email address will not be published. Required fields are marked *

error: Content is protected !!