ದಾವಣಗೆರೆ: ವಾಲ್ಮೀಕಿ ಜಾತ್ರೆಯಲ್ಲಿ ನಡೆದ ಸುದೀಪ್ ಫ್ಯಾನ್ಸ್ ಗಲಾಟೆ ಪ್ರಕರಣಕ್ಕೆ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿ ಟ್ವೀಟರ್ ಮೂಲಕ ಮಾಹಿತಿ ನೀಡಿದ್ದಾರೆ ಕಿಚ್ಚ ಸುದೀಪ್.
ನನಗೆ ಕಾರ್ಯಕ್ರಮಕ್ಕೆ ಆಯೋಜಕರಿಂದ ಆಹ್ವಾನವೇ ಇರಲಿಲ್ಲ. ಅದರ ಬಗ್ಗೆ ಮಾಹಿತಿಯೂ ಇರಲಿಲ್ಲ. ಹೀಗಾಗಿ ನಾನು ವಾಲ್ಮೀಕಿ ಜಾತ್ರೆಗೆ ಬರಲಿಲ್ಲ. ಒಪ್ಪಿಕೊಂಡ ಯಾವುದೆ ಕಾರ್ಯಕ್ರಮವನ್ನ ನಾನು ಮಿಸ್ ಮಾಡಿದವನಲ್ಲ ಎಂದಿರುವ ಸುದೀಪ್ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿಲ್ಲ ಎಂದು ಟ್ವಿಟ್ಟರ್ ಮೂಲಕ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.
ಅಭಿಮಾನಿಗಳಿಗೆ ಮತ್ತು ಜನರಿಗೆ ಪ್ರಸನ್ನಾನಂದ ಶ್ರೀ ಸುಳ್ಳು ಹೇಳಿದ್ರಾ..? ಎಂಬ ಪ್ರಶ್ನೆಯನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳು ವ್ಯಕ್ತಪಡಿಸಿ ಅಸ್ವಾಭಾವಿಕ ಪದಗಳನ್ನ ಬಳಸುತ್ತಿದ್ದಾರೆ.
ಜಾತ್ರೆಗೆ ಸುದೀಪ್ ಬರುತ್ತಾರೆ ಎಂದು ಆಹ್ವಾನ ಪತ್ರಿಕೆಯಲ್ಲಿ ಹಾಕಲಾಗಿತ್ತು, ಅಲ್ಲದೇ, ನಿನ್ನೆ ಕಾರ್ಯಕ್ರಮದಲ್ಲಿಯೂ ಸಂಜೆ ಸುದೀಪ್ ಬರುತ್ತಾರೆ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಹೇಳುತ್ತಿದ್ದರು. ಅಲ್ಲಸೆ ಸಿದ್ದರಾಮಯ್ಯ ಮಾತನಾಡುವಾಗ ವಾಲ್ಮೀಕಿ ಸ್ವಾಮೀಜಿಯವರು ಭಕ್ತರಿಗೆ ಹಾಗೂ ಕಿಚ್ಚ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದರು. ನೀವು ಹೀಗೆ ಗಲಾಟೆ ಮಾಡಿದ್ರೆ ಸುದೀಪ್ ಗೆ ಫೋನ್ ಮಾಡಿ ಬರೋದು ಬೇಡ ಅಂತಾ ಹೇಳ್ತೀನಿ ಅಂದಿದ್ರು. ಇದರಿಂದ ಸಿದ್ದರಾಮಯ್ಯ ಕೂಡ ಕೊಂಚ ಬೇಜಾರು ಮಾಡಿಕೊಂಡು ತಮ್ಮ ಭಾಷಣವನ್ನು ಮೂಗಿಸಿದ್ದ ಪ್ರಸಂಗ ನಡೆಯಿತಾದರೂ ಅಭಿಮಾನಿಗಳ ಕೇಕೆ ಅಬ್ಬರ ನಿಲ್ಲುತ್ತಿರಲಿಲ್ಲ.
ಸಿಎಂ ವೇದಿಕೆಯಿಂದ ತೇರಳಿದ ಸ್ವಲ್ಪ ಹೊತ್ತಿಗೆ ಅಭಿಮಾನಿಗಳು ಚೇರ್ ಗಳನ್ನು ತೂರಾಟ ಮಾಡಲು ಶುರು ಮಾಡಿದ್ರು. ಗಲಾಟೆ ತಾರಕಕ್ಕೇರುವುದನ್ನ ನೋಡಿ ಪೋಲಿಸ್ ಲಘು ಲಾಠಿ ಪ್ರಹಾರ ಮಾಡಿದ್ರು.
ಗಲಾಟೆ ವೇಳೆಯೂ ಸ್ವಾಮೀಜಿಗಳು ವೇದಿಕೆಗೆ ಆಗಮಿಸಿ ಸುದೀಪ್ ಏರ್ ಶೋ ಇದ್ದಿದ್ದರಿಂದ ಹೆಲಿಕಾಪ್ಟರ್ ಸಿಗದೆ ಬರಲಿಲ್ಲ. ಮುಂದಿನ ವರ್ಷ ಬಂದೆ ಬರುತ್ತಾರೆ ಎಂದು ಅಭಿಮಾನಿಗಳನ್ನ ಸಮಾಧಾನ ಮಾಡಿದರು.
ಗಲಾಟೆ ವಿಷಯ ತಿಳಿದು ಟ್ವೀಟ್ ಮೂಲಕ ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ. ಕಿಚ್ಚ ಸುದೀಪ್ ಬೇಸರ ವ್ಯಕ್ತ ಪಡಿಸಿದ ನಂತರ ಮಠದಿಂದ ಕೂಡ ಸುದೀಪ್ ಮಬೆಗೆ ಹೋಗಿ ಅವರ ತಂದೆಗೆ ನಾವು ಆಹ್ವಾ ನೀಡಿ ಬಂದಿದ್ದೆವೆ ಎಂಬ ಫೋಟೊ ಹಾಗೂ ಮಾಹಿತಿಯ ಟ್ವೀಟರ್ ಕೂಡ ಮಾಡಿದ್ದಾರೆ. ಇದಕ್ಕೆ ಕೆಲವರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ಆದ್ರೆ ಅಭಿಮಾನಿಗಳು ವಾಲ್ಮೀಕಿ ಸ್ವಾಮೀಜಿ ವಿರುದ್ದ ವಿವಿಧ ರೀತಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಮಾತನಾಡುತ್ತಿರುವುದು ಸೋಜಿಗದ ವಿಷಯವಾಗಿದೆ.
Sir ನೀವು ಬರುವುದಿಲ್ಲ ಅಂತ ತಿಳಿದ ಮೇಲೆ ನಡೆದ ಘಟನೆ. ತುಂಬಾ ಬೇಸರದಿಂದ ಅಭಿಮಾನಿಗಳು ಹಿಂತಿರುಗಿದರು. pic.twitter.com/1pg8J9lYvv
— girish k (@girishk06606444) February 9, 2023
https://chat.whatsapp.com/KKoKihnFdmWGVs3kl4BVty
