ಎಸ್ ಎಸ್ ಕೇರ್ ಟ್ರಸ್ಟ್ ವತಿಯಿಂದ ವಿಶ್ವ ಮೂತ್ರಪಿಂಡ ದಿನಾಚರಣೆ 2023 .
ದಾವಣಗೆರೆ :ಮಾರ್ಚ್ 9ರಂದು ವಿಶ್ವ ಮೂತ್ರಪಿಂಡ ದಿನಾಚರಣೆ ಅಂಗವಾಗಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ರವರೆಗೆ ಬಾಪೂಜಿ ಆಸ್ಪತ್ರೆಯ ರೂಮ್ ನಂಬರ್ 17ರಲ್ಲಿ ಎಸ್ ಎಸ್ ಕೇರ್ ಟ್ರಸ್ಟ್ ವತಿಯಿಂದ ಉಚಿತ ಮೂತ್ರಪಿಂಡ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಆಪ್ತ ಸಮಾಲೋಚನೆ, ರಕ್ತದ ಸಕ್ಕರೆ ಪರೀಕ್ಷೆ, ರಕ್ತದ ಒತ್ತಡ ಪರೀಕ್ಷೆ, ಮೂತ್ರ ಪರೀಕ್ಷೆ, ಮೂತ್ರಪಿಂಡ (ಕಿಡ್ನಿ) ಪರೀಕ್ಷೆ ಉಚಿತವಾಗಿ ಮಾಡಲಾಗುವುದು.
ನೀವು ಮಧುಮೇಹ, ತೀವ್ರ ರಕ್ತದೊತ್ತಡ, ಹೃದಯ ರೋಗ, ಮೂತ್ರಪಿಂಡ ವೈಫಲ್ಯದ ಕೌಟುಂಬಿಕ ಹಿನ್ನೆಲೆ ಇದ್ದರೆ ನೀವು ಮೂತ್ರಪಿಂಡ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದ್ದು ಈ ಒಂದು ಶಿಬಿರದ ಪ್ರಯೋಜನವನ್ನು ಪಡೆಯಬಹುದಾಗಿದೆ.