ಯುವಕರ ಅಪಹರಿಸಿ ಹಣ ದೋಚುತ್ತಿದ್ದ ಕಾಲ್ ಗರ್ಲ್ಸ್ ಸೇರಿ 8 ಜನರ ಬಂಧನ.!

ಯುವಕರ ಅಪಹರಿಸಿ ಹಣ ದೋಚುತ್ತಿದ್ದ ಕಾಲ್ ಗರ್ಲ್ಸ್ ಸೇರಿ 8 ಜನರ ಬಂಧನ.!

ಬೆಂಗಳೂರು: ವೇಶ್ಯಾವಾಟಿಕೆ ನೆಪದಲ್ಲಿ ಯುವಕರನ್ನು ಸಂಪರ್ಕಿಸಿ, ಹೋಟೆಲ್‌ ಕೊಠಡಿಗಳಿಗೆ ಕರೆಯಿಸಿ, ಕೆಲಸ ಮುಗಿದ ನಂತರ, ಮನೆಗೆ ಡ್ರಾಪ್ ಮಾಡಿಸಿಕೊಳ್ಳುವ ಸೋಗಿನಲ್ಲಿ ಅಪಹರಿ ನಂತರ, ಹಣ ಸುಲಿಗೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ.
ಈ ಜಾಲದಲ್ಲಿದ್ದ ಕಾಲ್‌ಗರ್ಲ್ ಸೇರಿ 8 ಜನರನ್ನು ಬೇಗೂರು ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಾಲದ ಕೃತ್ಯದ ಬಗ್ಗೆ ಬಿ. ಮಂಜುನಾಥ್ (30) ಎಂಬುವರು ದೂರು ನೀಡಿದ್ದರು. ಅದರನ್ವಯ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಹಲವು ಯುವಕರಿಂದ ಆರೋಪಿಗಳು ಹಣ ದೋಚಿರುವ ಮಾಹಿತಿ ಇದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಮಧು ಅಲಿಯಾಸ್ ಪ್ರಿಯಾ, ನವೀನ್, ತಿರುಮಲೇಶ್, ಕೆಂಪರಾಜ್, ಮುಖೇಶ್, ಮಂಜುನಾಥ್, ಭರತ್,  ದಲ್ಪೀರ್ ಸೌದ್ ಅಲಿಯಾಸ್ ದೀಪು ಬಂಧಿತರು. ಇವರಿಂದ ಕಾರು, 3 ದ್ವಿಚಕ್ರ ವಾಹನ, 10 ಮೊಬೈಲ್ ಹಾಗೂ ಚಾಕು ಜಪ್ತಿ ಮಾಡಲಾಗಿದೆ.
ದೂರು ದಾರ ಬಿ. ಮಂಜುನಾಥ್ ಹಾಗೂ ಸ್ನೇಹಿತ ರಜನಿಕಾಂತ್, ವೇಶ್ಯಾ ವಾಟಿಕೆಗಾಗಿ ಕಾಲ್‌ಗರ್ಲ್‌ಗಳನ್ನು ಹುಡುಕಾಡುತ್ತಿದ್ದರು. ರಜನಿಕಾಂತ್ ಸ್ನೇಹಿತನಾಗಿದ್ದ ತಿರುಮಲೇಶ್, ತನಗೆ ಯುವತಿಯೊಬ್ಬರು ಪರಿಚಯ ಇರುವುದಾಗಿ ಹೇಳಿದ್ದ. ಹೆಚ್ಚು ಹಣ ನೀಡಿದರೆ, ಯುವತಿಯನ್ನು ಕಳುಹಿಸು ವುದಾಗಿ ತಿಳಿಸಿದ್ದ. ಅದಕ್ಕೆ ಮಂಜುನಾಥ್ ಹಾಗೂ ರಜನಿಕಾಂತ್ ಒಪ್ಪಿದ್ದರು ಎಂದು ಪೊಲೀಸರು ಹೇಳಿದರು.
ಆರೋಪಿ ಮಧು ಜೊತೆ ಸಂಪರ್ಕದಲ್ಲಿದ್ದ ತಿರುಮಲೇಶ್, ಹಲವು ಬಾರಿ ಭೇಟಿಯಾಗಿ ಖಾಸಗಿ ಕ್ಷಣ ಕಳೆದಿದ್ದ. ವೇಶ್ಯಾವಾಟಿಕೆ ನೆಪದಲ್ಲಿ ಸ್ನೇಹಿತರ ಬಳಿ ಹೋದರೆ, ಅವರಿಬ್ಬರಿಂದ ಹಣ ದೋಚಬಹುದೆಂದು ಯುವತಿಗೆ ತಿಳಿಸಿದ್ದ. ಅದರಂತೆ ಯುವತಿ, ಕಾಲ್‌ಗರ್ಲ್‌ ಎಂದು ಹೇಳಿಕೊಂಡು ಮಂಜುನಾಥ್  ಹಾಗೂ ರಜನಿಕಾಂತ್‌ ಬಳಿ ಹೋಗಲು ಒಪ್ಪಿದ್ದರು
ಮಧು ಅವರನ್ನು ತಮ್ಮ ಬಳಿ ಕರೆಸಿದ್ದ ಆರೋಪಿಗಳು, ಓಯೋ ಆಪ್‌ ಮೂಲಕ ಕಾಯ್ದಿರಿಸಿದ್ದ ಮಡಿವಾಳದ ಹೋಟೆಲೊಂದರ ಕೊಠಡಿಗೆ ಫೆ. 17 ರಂದು ಕರೆದೊಯ್ದಿದ್ದರು. ತಮ್ಮ ಕೆಲಸ ಮುಗಿಸಿ ತಡರಾತ್ರಿ ಹೋಟೆಲ್‌ನಿಂದ ಹೊರಬಂದಿದ್ದ ದೂರುದಾರ ಹಾಗೂ ಸ್ನೇಹಿತ, ಆರೋಪಿ ಮಧು ಜೊತೆ ಕಾರಿನಲ್ಲಿ ಹೊರಟಿದ್ದರು.
ಬೇಗೂರು ದೇವರಚಿಕ್ಕನ ಹಳ್ಳಿ ಬಳಿ ಬೈಕ್‌ನಲ್ಲಿ ಬಂದಿದ್ದ ಇತರೆ ಆರೋಪಿಗಳು, ಕಾರು ಅಡ್ಡಗಟ್ಟಿದ್ದರು. ಚಾಕು ತೋರಿಸಿ ಬೆದರಿಸಿದ್ದರು’ ಎಂದು ತಿಳಿಸಿದರು.
ಆರೋಪಿಗಳನ್ನು ಕಂಡು ಗಾಬರಿ ಗೊಂಡಿದ್ದ ದೂರುದಾರ, ಕಾರಿನಿಂದ ಇಳಿದು ತಪ್ಪಿಸಿಕೊಂಡಿದ್ದರು. ಸ್ನೇಹಿತ ರಜನಿಕಾಂತ್ ಹಾಗೂ ಮಧು ಅವರನ್ನು ಆರೋಪಿಗಳು ಅಪಹರಿಸಿಕೊಂಡು ಹೋಗಿದ್ದರು. ಠಾಣೆಗೆ ಬಂದಿದ್ದ ದೂರುದಾರ, ಘಟನೆ ಬಗ್ಗೆ ದೂರು ನೀಡಿದ್ದರು. ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದರು. ವಿಚಾರಣೆ ನಡೆಸಿದಾಗ, ಯುವತಿಯೂ ಪ್ರಕರಣದ ಆರೋಪಿ ಎಂಬುದು ತಿಳಿಯಿ ಎಂದು ಪೊಲೀಸರು ವಿವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!