ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಎಸ್ ಪಾಟೀಲ್ ಅವರಿಗೆ ಸಾಮಾಜಿಕ ಹೋರಾಟಗಾರರ ಒತ್ತಾಯ

ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಎಸ್ ಪಾಟೀಲ್

ಬೆಂಗಳೂರು : ಪ್ರಜಾ ನ್ಯಾಯವೇದಿಕೆ (ವಿವಿಧ ಸಂಘಟನೆಗಳ ಸಹಭಾಗಿತ್ವ) ದಲ್ಲಿ ಇಂದು ನಿಯೋಗ ಒಂದು ಗೌರವಾನ್ವಿತ ಸ್ಥಾನವಾದ ಲೋಕಾಯುಕ್ತದಲ್ಲಿ ಕುಳಿತಿರುವ ನ್ಯಾಯಮೂರ್ತಿ ಬಿಎಸ್ ಪಾಟೀಲ್ ರವರನ್ನು ಭೇಟಿಯಾಗಿ ರಾಜೀನಾಮೆಗೆ ಒತ್ತಾಯ ಪಡಿಸಿದರು.

ತಾವು ರಾಜೀನಾಮೆ ಕೊಟ್ಟು ಸ್ಥಾನದಿಂದ ಕೆಳಗೆ ಇಳಿಯಬೇಕೆಂಬ ಹಕ್ಕುಒತ್ತಾಯಕ್ಕೆ ಸ್ವಲ್ಪ ವಿಚಲಿತರಾದ ಬಿಎಸ್ ಪಾಟೀಲ್ರವರು ತಮ್ಮ ಮತ್ತು ತಮ್ಮ ಕುಟುಂಬದ ಮೇಲೆ ಬಂದ ಹಲವಾರು ಆರೋಪಗಳನ್ನು ಅಲ್ಲಗೆಳೆದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋ ದಲ್ಲಿರುವ ಧ್ವನಿ ನನ್ನ ಪತ್ನಿ ಶ್ರೀಮತಿ ಶೋಭಾ ಪಾಟೀಲ್ ರವರದ್ದು ಅಲ್ಲ,ನನ್ನ ಮಗ ಸೂರಜ್ ಪಾಟೀಲರದ್ದು ಅಲ್ಲ, ಇದೊಂದು ವ್ಯವಸ್ಥಿತ ಸಂಚು ಮತ್ತು ಪ್ರೊಡಕ್ಷನ್ ಹೌಸಿನಿಂದ ತಯಾರಾದ ಆಡಿಯೋ ಎಂದು ಆಡಿಯೋವನ್ನು ಹರಿಬಿಟ್ಟವರ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸಿದರು.

ಸಾಮಾಜಿಕ ಹೋರಾಟಗಾರರ ನಿಯೋಗವು ತಮ್ಮ ಮೇಲೆ ಮತ್ತು ತಮ್ಮ ಕುಟುಂಬದ ಮೇಲೆ ಬಂದ ಗುರುತರ ಆರೋಪದಿಂದ ಮುಕ್ತರಾಗುವವರೆಗೆ ತಾವು ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕೆಳಗೆ ಇಳಿಯಬೇಕೆಂದು ಒತ್ತಾಯಿಸಿದರು. ಈ ಹಿಂದೆ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಿದ ನ್ಯಾಯಮೂರ್ತಿ ಭಾಸ್ಕರ್ ರಾವ್ ಮತ್ತು ಅವರ ಕುಟುಂಬದವರ ಭ್ರಷ್ಟಾಚಾರವನ್ನು ನೆನಪಿಗೆ ತಂದು ಅವರನ್ನು ಕೆಳಗಿಳಿಸುವ ಹೋರಾಟ ನಾವೇ ಮಾಡಿದ್ದೇವೆ. ನೀವು ಅದಕ್ಕಿಂತ ಮೊದಲೇ ರಾಜೀನಾಮೆ ಕೊಟ್ಟು ಹೋಗಿ ಇದೇ ರೀತಿ ಈ ಹಿಂದಿನ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಿದ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರ ಮೇಲೆ ಆರೋಪಗಳು ಬಂದಾಗ ಅವರು ರಾಜೀನಾಮೆ ಕೊಟ್ಟು ಕೆಳಗಿಳಿದರು ಇದೇ ಪ್ರಕಾರ ತಾವು ರಾಜೀನಾಮೆ ಕೊಟ್ಟು ಲೋಕಾಯುಕ್ತ ಸಂಸ್ಥೆಯ ಘನತೆ ಗೌರವವನ್ನು ಕಾಪಾಡಬೇಕು ಎಂಬ ಗಟ್ಟಿ ಧ್ವನಿ ನಿಯೋಗದಲ್ಲಿತ್ತು. ಹೋರಾಟಗಾರರು ಹಲವಾರು ಪ್ರಶ್ನೆಗಳನ್ನು ಅವರ ಮುಂದೆ ಇಟ್ಟಾಗ ವಿಚಲಿತರಾದಂತೆ ಕಂಡ ಬಿ ಎಸ್ ಪಾಟೀಲ್ ರವರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಪ್ರಯತ್ನವನ್ನು ನಿಯೋಗದ ಮುಂದೆ ಹೇಳುತ್ತಲೇ ಇದ್ದರು. ಯಾವುದಕ್ಕೂ ಜಗ್ಗದ ಬಗ್ಗದ ಹೋರಾಟಗಾರರು ತಾವು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಲೇಬೇಕೆಂಬ ಹಕ್ಕು ಅನ್ನು ಅವರ ಮುಂದೆ ಇಟ್ಟಿದ್ದರು. ಅದಕ್ಕೆ ಸ್ಪಂದಿಸಿದ ಬಿಎಸ್ ಪಾಟೀಲ್ ಅವರು ಎಲ್ಲರ ಮೇಲು ಆರೋಪಗಳು ಬರುತ್ತವೆ ಈ ರೀತಿ ಆರೋಪ ಮಾಡುತ್ತಾ ಹೋದರೆ ಈ ಕುರ್ಚಿಯಲ್ಲಿ ಯಾರು ಉಳಿಯುವುದಿಲ್ಲ ಆರೋಪ ಬಂದಿದೆ ಎಂದು ಮಾತ್ರಕ್ಕೆ ನಾನು ಹಗ್ಗ ತೆಗೆದುಕೊಂಡು ಹೋಗಬೇಕಾ ಎಂದು ಮರು ಪ್ರಶ್ನೆ ಹಾಕಿದ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರರು ಒಂದು ಕ್ಷಣ ಚಕಿತರಾದ್ದರು. ಬೇರೆ ಬೇರೆ ವಿಷಯಗಳನ್ನು ಚರ್ಚಿಸುವ ಮೂಲಕ ವಿಷಯ ಅಂತರವನ್ನು ಮಾಡಲು ಪ್ರಯತ್ನಿಸಿದ ಬಿಎಸ್ ಪಾಟೀಲ್ ಅವರಿಗೆ ಪುನಃ ಪುನಃ ತಮ್ಮ ನೈತಿಕತೆ ಮತ್ತು ತಮ್ಮ ಕುಟುಂಬದ ಮೇಲೆ ಬಂದ ಆರೋಪವನ್ನು ಹೋರಾಟಗಾರರು ಪ್ರಶ್ನಿಸುತ್ತಲೇ ಇದ್ದರು.
ಲೋಕಾಯುಕ್ತ ಕಚೇರಿಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ಏರ್ಪಡಿಸಿರುವುದನ್ನು ಪ್ರಶ್ನಿಸಿದ ಹೋರಾಟಗಾರರು ನಾವು ಮನವಿ ಕೊಡಲು ಬಂದಾಗ ನಮ್ಮನ್ನು ತಡೆಯುವ ಪ್ರಯತ್ನಪೂಲಿಸಿರಿಂದ ನಡೆದಿರುವುದು ಮತ್ತು ಇಡೀ ಲೋಕಾಯುಕ್ತ ಕಚೇರಿಯ ಸುತ್ತ ಪೊಲೀಸ ಸರ್ಪಗಾವಲು ಹಾಕಿರುವುದನ್ನು ಹೋರಾಟಗಾರರು ಒಕ್ಕರಲ್ಲಿನಿಂದ ಖಂಡಿಸಿದರು. HMV

Leave a Reply

Your email address will not be published. Required fields are marked *

error: Content is protected !!