ಅಪರಾಧದಾವಣಗೆರೆರಾಜ್ಯ / ಕರ್ನಾಟಕ

PSI: ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಪಾನಮತ್ತ ಮಹಿಳೆ.!

Share
Share

ದಾವಣಗೆರೆ: (PSI) ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಪಾನಮತ್ತ ಮಹಿಳೆಯೊಬ್ಬಳು ಹಲ್ಲೆ ನಡೆಸಿ, ಅಸಭ್ಯವಾಗಿ ವರ್ತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆಘಾತಕಾರಿ ಘಟನೆ ದಾವಣಗೆರೆಯ ಶಾಮನೂರು ರಸ್ತೆಯ ಬಿಂದಾಸ್ ಬಾರ್ ಮುಂಭಾಗದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಹಿಳೆಯ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

​ಘಟನೆಯ ವಿವರ:

​ದಾವಣಗೆರೆ ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ-2 ಆಗಿರುವ ಶ್ರೀಮತಿ ಶಕುಂತಲಾ (48) ಅವರು ಜೂನ್ 21ರಂದು ರಾತ್ರಿ ಎನ್‌ಆರ್‌ಒ (NRO) ಗಸ್ತು ಕರ್ತವ್ಯದಲ್ಲಿದ್ದರು. ರಾತ್ರಿ ಸುಮಾರು 11:45ರ ವೇಳೆಗೆ ಶಾಮನೂರು ಚೆಕ್ ಪೋಸ್ಟ್‌ಗೆ ಭೇಟಿ ನೀಡಿದಾಗ, ಅಲ್ಲಿನ ಸಿಬ್ಬಂದಿ ಬಿಂದಾಸ್ ಬಾರ್ ಮುಂಭಾಗದಲ್ಲಿ ಕಪ್ಪು ಬಣ್ಣದ ಥಾರ್ ಕಾರಿನಲ್ಲಿ ಮಹಿಳೆಯೊಬ್ಬಳು ಗಲಾಟೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

​ಮಾಹಿತಿ ಪಡೆದು ಪಿಎಸ್‌ಐ ಶಕುಂತಲಾ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದಾಗ, ಕಾರಿನಲ್ಲಿದ್ದ ಮಹಿಳೆ ಮದ್ಯಸೇವಿಸಿರುವುದು ಕಂಡುಬಂದಿದೆ. ಆಕೆಯ ಪತಿ ಕೂಡ ಜೊತೆಯಲ್ಲಿದ್ದು, ಆಕೆಯನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದರು. ಪಿಎಸ್‌ಐ ಅವರು ಮಹಿಳೆಯ ಹೆಸರನ್ನು ಕೇಳಿದಾಗ, ಆಕೆ ತನ್ನ ಹೆಸರು ‘ಪ್ರೀತಿ’ ಎಂದು ಹೇಳಿ, ಪೊಲೀಸರ ವಿರುದ್ಧವೇ ಏಕವಚನದಲ್ಲಿ ಅಸಭ್ಯ ಪದಗಳಿಂದ ನಿಂದಿಸಲು ಆರಂಭಿಸಿದ್ದಾಳೆ.

​ತಪಾಸಣೆಗೆ ಹೋದಾಗ ಹಲ್ಲೆ:

​ಮಹಜರು ಸ್ಥಳಕ್ಕೆ ಹೆಚ್ಚುವರಿ ಸಂಚಾರ ಪೊಲೀಸ್ ಸಿಬ್ಬಂದಿ ಆಗಮಿಸಿ ಮಹಿಳೆಯನ್ನು ಸಮಾಧಾನಪಡಿಸಲು ಯತ್ನಿಸಿದರೂ ಆಕೆ ಸಾರ್ವಜನಿಕರ ಹಾಗೂ ಪೊಲೀಸರ ವಿರುದ್ಧ ಕೂಗಾಡುವುದನ್ನು ಮುಂದುವರಿಸಿದ್ದಾಳೆ. ಈ ವೇಳೆ ಪಿಎಸ್‌ಐ ಶಕುಂತಲಾ ಅವರು ತಮ್ಮ ಬಳಿ ಇದ್ದ ‘ಡ್ರಂಕ್ ಅಂಡ್ ಡ್ರೈವ್’ ತಪಾಸಣಾ ಯಂತ್ರದಿಂದ ಮಹಿಳೆಯನ್ನು ಪರೀಕ್ಷಿಸಲು ಮುಂದಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಪ್ರೀತಿ, “ನನ್ನನ್ನು ಚೆಕ್ ಮಾಡಲು ನೀನು ಯಾರು?” ಎಂದು ಕೂಗಾಡಿ, ಪಿಎಸ್‌ಐ ಕೈಯಲ್ಲಿದ್ದ ತಪಾಸಣಾ ಯಂತ್ರವನ್ನು ಕೆಳಗೆ ತಳ್ಳಿ, ಪಿಎಸ್‌ಐ ಅವರ ಹೊಟ್ಟೆಗೆ ಬಲಗಾಲಿನಿಂದ ಜೋರಾಗಿ ಒದ್ದಿದ್ದಾಳೆ.

​ಹಲ್ಲೆಯಿಂದಾಗಿ ಜೀಪಿನ ಪಕ್ಕಕ್ಕೆ ಸರಿದು ಸುಧಾರಿಸಿಕೊಂಡ ಪಿಎಸ್‌ಐ ಅವರನ್ನು ಸಾರ್ವಜನಿಕರು ಮತ್ತು ಸಿಬ್ಬಂದಿ ಜೀಪಿನಲ್ಲಿ ಕೂರಿಸಿದ್ದಾರೆ. ಈ ಗೊಂದಲದ ನಡುವೆ ಆರೋಪಿ ಮಹಿಳೆ ಮದ್ಯಪಾನ ತಪಾಸಣೆಗೆ ಒಳಪಡದೆ, ಸ್ಥಳದಿಂದ ಬೇರೊಂದು ಕಾರಿನಲ್ಲಿ ಪರಾರಿಯಾಗಿದ್ದಾಳೆ.

​ಪೊಲೀಸರ ಕ್ರಮ:

​ಘಟನೆಯ ನಂತರ ಆರೋಪಿಗಳು ಬಿಟ್ಟು ಹೋಗಿದ್ದ KA 02 MU 2444 ನೋಂದಣಿ ಸಂಖ್ಯೆಯ ಕಪ್ಪು ಬಣ್ಣದ ಥಾರ್ ಕಾರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ತಂದಿರಿಸಿದ್ದಾರೆ. ನಂತರ ಅರೋಪಿ ಮಹಿಳೆ ಅದೇ ದಿನ ರಾತ್ರಿ ಜಾಮೀನು ಪಡೆದುಕೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

ಹಲ್ಲೆಗೊಳಗಾದ ಪಿಎಸ್‌ಐ ಶಕುಂತಲಾ ಅವರು ದಾವಣಗೆರೆಯ ಸಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕರ್ತವ್ಯ ಮುಗಿಸಿ ವಿಶ್ರಾಂತಿ ಪಡೆದ ನಂತರ ಪಿಎಸ್‌ಐ ಅವರು ಜೂನ್ 22ರ ಮಧ್ಯಾಹ್ನ ವಿದ್ಯಾನಗರ ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಪ್ರೀತಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 121(1), 132, ಮತ್ತು 352 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ದಾವಣಗೆರೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸಿರುವುದಿಲ್ಲ.

Share

Leave a comment

Leave a Reply

Your email address will not be published. Required fields are marked *

Don't Miss

ದಾವಣಗೆರೆ

Agriculture: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ರೈತರಿಗೆ ಕೃಷಿ ಉಪಕರಣ ವಿತರಣೆ

ದಾವಣಗೆರೆ: (Agriculture ) ಕರ್ನಾಟಕ ರಾಜ್ಯ ಮನರೇಗಾ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ ಪ್ರಾದೇಶಿಕ ಕಚೇರಿ ವತಿಯಿಂದ ಇಲ್ಲಿನ ನಗರದ ರೋಟರಿ...

ದಾವಣಗೆರೆರಾಜ್ಯ / ಕರ್ನಾಟಕ

Transfer:ದಾವಣಗೆರೆಯ ದಕ್ಷ ಅಧಿಕಾರಿ ಗಾಯತ್ರಿ ವರ್ಗಾವಣೆ: ಈ ಹಿಂದೆ ಕಾಂಗ್ರೆಸ್ ಮುಖಂಡನ ಪುತ್ರರ ಬಂಧಿಸಿ ಸುದ್ದಿಯಾಗಿದ್ದ ಇನ್ಸ್‌ಪೆಕ್ಟರ್

ದಾವಣಗೆರೆ: (Transfer) ಕರ್ನಾಟಕ ಪೊಲೀಸ್ ಇಲಾಖೆಯ ಇತ್ತೀಚಿನ ವರ್ಗಾವಣೆ ಆದೇಶದನ್ವಯ, ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗಾಯತ್ರಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಇವರನ್ನು ಬಳ್ಳಾರಿ ಜಿಲ್ಲೆಯ...

Related Articles
ದಾವಣಗೆರೆ

Gandhi Jayanthi: ಗಾಂಧೀಜಿಯವರ ತತ್ವ-ಆದರ್ಶಗಳು ಇಂದಿನ ಸಮಾಜಕ್ಕೆ ದಾರಿದೀಪ: ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ  

ದಾವಣಗೆರೆ:(Gandhi Jayanthi) ನಮ್ಮ ಭಾಷೆ ಮತ್ತು ತಾಯಿನಾಡು ನಮಗೆ ಎಷ್ಟು ಮುಖ್ಯವೋ, ಗಾಂಧೀಜಿಯವರು ಕೂಡ ಭಾರತದ...

ಜಿಲ್ಲೆಗಳುರಾಜ್ಯ / ಕರ್ನಾಟಕ

SP: ಚಿತ್ರದುರ್ಗದ ನೂತನ ಎಸ್ಪಿಯಾಗಿ ಕುಶಾಲ್ ಚೌಕ್ಸೆ ನೇಮಕ

ಬೆಂಗಳೂರು:(SP) ಕರ್ನಾಟಕ ಸರ್ಕಾರವು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ್ದು, ಬೆಂಗಳೂರಿನ ಆಡಳಿತ ವಿಭಾಗದ ಡಿಸಿಪಿಯಾಗಿದ್ದ (DCP...

ಅಪರಾಧದಾವಣಗೆರೆ

Robbery: ದಾವಣಗೆರೆಯಲ್ಲಿ ವ್ಯಾಪಾರಿ ಅಪಹರಿಸಿ 10 ಲಕ್ಷಕ್ಕೆ ಬೇಡಿಕೆ: ಕೃತ್ಯ ಎಸಗಿ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು

ದಾವಣಗೆರೆ: (Robbery)  ದಾವಣಗೆರೆಯಲ್ಲಿ ಬಟ್ಟೆ ವ್ಯಾಪಾರಿಯೊಬ್ಬರನ್ನು ಹಣಕಾಸಿನ ಮಾತುಕತೆ ನೆಪದಲ್ಲಿ ಕರೆದೊಯ್ದು, ಕೊಠಡಿಯೊಂದರಲ್ಲಿ ಬಂಧಿಸಿ 10...

ದಾವಣಗೆರೆರಾಜ್ಯ / ಕರ್ನಾಟಕ

IGP: ದಾವಣಗೆರೆ ಪೂರ್ವ ವಲಯ ಐಜಿಪಿಯಾಗಿ ಎನ್. ಸತೀಶ್ ಕುಮಾರ್ ವರ್ಗಾವಣೆ

ದಾವಣಗೆರೆ: (IGP) ಕರ್ನಾಟಕ ಸರ್ಕಾರವು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಂಡಿದ್ದು, ಹಿರಿಯ ಐಪಿಎಸ್ ಅಧಿಕಾರಿ...