ಅಪರಾಧದಾವಣಗೆರೆ

Pds Rice: ಹೊನ್ನಾಳಿಯಲ್ಲಿ ಬೃಹತ್ ಪಡಿತರ ಅಕ್ಕಿ ಕಾಳಸಂತೆ ದಂಧೆ ಪತ್ತೆ: ಅಧಿಕಾರಿಗಳನ್ನು ನೋಡಿ ಲಾರಿ ಬಿಟ್ಟು ಓಡಿಹೋದ ಚಾಲಕ!

Share
Share

ದಾವಣಗೆರೆ, ಹೊನ್ನಾಳಿ:(PDS rice) ಬಡವರಿಗೆ ವಿತರಿಸಬೇಕಿದ್ದ ಸರ್ಕಾರಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಬೃಹತ್ ದಂಧೆಯನ್ನು ಆಹಾರ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಹೊನ್ನಾಳಿ-ನ್ಯಾಮತಿ ಮುಖ್ಯ ರಸ್ತೆಯ ಕೋರ್ಟ್ ಕ್ರಾಸ್ ಬಳಿ ಪತ್ತೆ ಹಚ್ಚಿದ್ದಾರೆ.

ವಶಪಡಿಸಿಕೊಂಡ ಸ್ವತ್ತುಗಳ ವಿವರ
ಜಪ್ತಿಯಾದ ಅಕ್ಕಿ: ಸಾರ್ವಜನಿಕ ವಿತರಣಾ ವ್ಯವಸ್ಥೆಗೆ (PDS) ಸೇರಿದ ಸುಮಾರು 67.17 ಕ್ವಿಂಟಾಲ್ (131 ಚೀಲಗಳು) ಪಡಿತರ ಅಕ್ಕಿ.

ಅಂದಾಜು ಮೌಲ್ಯ: ಜಪ್ತಿಯಾದ ಅಕ್ಕಿಯ ಮೌಲ್ಯ ₹1,54,491 ಹಾಗೂ ಸಾಗಾಟಕ್ಕೆ ಬಳಸಿದ್ದ ಟಾಟಾ ಕ್ಯಾಂಟರ್ ಗೂಡ್ಸ್ ಲಾರಿಯ (KA-17-D-5901) ಮೌಲ್ಯ ಸುಮಾರು ₹10,00,000.

ಆರೋಪಿ:ಹೊನ್ನಾಳಿ ಟೌನ್ ನಿವಾಸಿ, ಲಾರಿ ಚಾಲಕ ನಿರಂಜನ್ (ಸದ್ಯ ತಲೆಮರೆಸಿಕೊಂಡಿದ್ದಾನೆ).

ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು: ಹೊನ್ನಾಳಿ ತಾಲೂಕು ಕಚೇರಿಯ ಆಹಾರ ನಿರೀಕ್ಷಕರಾದ ಆತ್ರೇಯ ಪುರಾಣಿಕ್ ಎಸ್.ಆರ್., ಆಹಾರ ಶಿರಸ್ತೇದಾರ್ ಸಂಜಯ್ ಬಾಗೇವಾಡಿ ಹಾಗೂ ಹೊನ್ನಾಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಗುರುಶಾಂತಯ್ಯ ಮತ್ತು ಸಿಬ್ಬಂದಿ.

ಕಾರ್ಯಾಚರಣೆ ನಡೆದಿದ್ದು ಹೇಗೆ?
ಹೊನ್ನಾಳಿ ಹ್ಯಾಂಡ್ ಪೋಸ್ಟ್ ಕಡೆಯಿಂದ ಹೊನ್ನಾಳಿ ಪಟ್ಟಣದ ಕಡೆಗೆ ಹಳದಿ ಬಣ್ಣದ ನಂಬರ್ ಪ್ಲೇಟ್ ಉಳ್ಳ ಟಾಟಾ ಕ್ಯಾಂಟರ್ ಲಾರಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕ ಆತ್ರೇಯ ಪುರಾಣಿಕ್ ಮತ್ತು ಆಹಾರ ಶಿರಸ್ತೇದಾರ್ ಸಂಜಯ್ ಬಾಗೇವಾಡಿ ಅವರು ಕೋರ್ಟ್ ಕ್ರಾಸ್ ಬಳಿ ಕಾಯುತ್ತಿದ್ದರು.ಸಂಜೆ 6:30 ರ ಸುಮಾರಿಗೆ ಬಂದ ಲಾರಿಯನ್ನು ತಡೆದು ಪರಿಶೀಲಿಸಿದಾಗ, ತಾಡಪಾಲು ಮುಚ್ಚಿದ್ದ ಲಾರಿಯಲ್ಲಿ 131 ಬಿಳಿ ಪ್ಲಾಸ್ಟಿಕ್ ಚೀಲಗಳಲ್ಲಿ ಪಡಿತರ ಅಕ್ಕಿ ಇರುವುದು ಕಂಡುಬಂದಿದೆ. ಚಾಲಕ ನಿರಂಜನ್‌ನನ್ನು ವಿಚಾರಿಸಿದಾಗ, ಹಳ್ಳಿ ಹಳ್ಳಿಗಳಲ್ಲಿ ಸಾರ್ವಜನಿಕರಿಂದ ಅಕ್ಕಿ ಸಂಗ್ರಹಿಸಿ ಹೆಚ್ಚಿನ ಲಾಭಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡಲು ಯಾವುದೇ ಪರವಾನಗಿ ಇಲ್ಲದೆ ಒಯ್ಯುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ.

ಸ್ಥಳದಲ್ಲೇ ಲಾರಿ ಬಿಟ್ಟು ಕಾಲ್ಕಿತ್ತ ಚಾಲಕ
ಸಂಜೆ 7:00 ಗಂಟೆಗೆ ಹೊನ್ನಾಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ತಲುಪುತ್ತಿದ್ದಂತೆಯೇ, ಚಾಲಕ ನಿರಂಜನ್ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿದ್ದಾನೆ.

ವಶಪಡಿಸಿಕೊಂಡ ಅಕ್ಕಿಯನ್ನು ತೂಕ ಮಾಡಿಸಿ, ಸುರಕ್ಷತೆಯ ದೃಷ್ಟಿಯಿಂದ ಹೊನ್ನಾಳಿ APMC ಯಲ್ಲಿರುವ KFCSC ಸಗಟು ಮಳಿಗೆಯ ಗೋದಾಮಿನಲ್ಲಿ ತಾತ್ಕಾಲಿಕವಾಗಿ ಇರಿಸಲಾಗಿದೆ. ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ‘ಅಗತ್ಯ ವಸ್ತುಗಳ ಕಾಯ್ದೆ 1955’ ರ (Essential Commodities Act) ಕಲಂ 3, 6(A), 7 ರ ಅಡಿಯಲ್ಲಿ ಪ್ರಕರಣ (ಗುನ್ನೆ ನಂ. 224/2026) ದಾಖಲಾಗಿದ್ದು, ಪೋಲಿಸರು ಲಾರಿಯನ್ನು ಜಪ್ತಿ ಮಾಡಿ, ತಲೆಮರೆಸಿಕೊಂಡಿರುವ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ದಾವಣಗೆರೆ

Agriculture: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ರೈತರಿಗೆ ಕೃಷಿ ಉಪಕರಣ ವಿತರಣೆ

ದಾವಣಗೆರೆ: (Agriculture ) ಕರ್ನಾಟಕ ರಾಜ್ಯ ಮನರೇಗಾ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ ಪ್ರಾದೇಶಿಕ ಕಚೇರಿ ವತಿಯಿಂದ ಇಲ್ಲಿನ ನಗರದ ರೋಟರಿ...

ದಾವಣಗೆರೆರಾಜ್ಯ / ಕರ್ನಾಟಕ

Transfer:ದಾವಣಗೆರೆಯ ದಕ್ಷ ಅಧಿಕಾರಿ ಗಾಯತ್ರಿ ವರ್ಗಾವಣೆ: ಈ ಹಿಂದೆ ಕಾಂಗ್ರೆಸ್ ಮುಖಂಡನ ಪುತ್ರರ ಬಂಧಿಸಿ ಸುದ್ದಿಯಾಗಿದ್ದ ಇನ್ಸ್‌ಪೆಕ್ಟರ್

ದಾವಣಗೆರೆ: (Transfer) ಕರ್ನಾಟಕ ಪೊಲೀಸ್ ಇಲಾಖೆಯ ಇತ್ತೀಚಿನ ವರ್ಗಾವಣೆ ಆದೇಶದನ್ವಯ, ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗಾಯತ್ರಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಇವರನ್ನು ಬಳ್ಳಾರಿ ಜಿಲ್ಲೆಯ...

Related Articles
ದಾವಣಗೆರೆ

Gandhi Jayanthi: ಗಾಂಧೀಜಿಯವರ ತತ್ವ-ಆದರ್ಶಗಳು ಇಂದಿನ ಸಮಾಜಕ್ಕೆ ದಾರಿದೀಪ: ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ  

ದಾವಣಗೆರೆ:(Gandhi Jayanthi) ನಮ್ಮ ಭಾಷೆ ಮತ್ತು ತಾಯಿನಾಡು ನಮಗೆ ಎಷ್ಟು ಮುಖ್ಯವೋ, ಗಾಂಧೀಜಿಯವರು ಕೂಡ ಭಾರತದ...

ಅಪರಾಧದಾವಣಗೆರೆ

Robbery: ದಾವಣಗೆರೆಯಲ್ಲಿ ವ್ಯಾಪಾರಿ ಅಪಹರಿಸಿ 10 ಲಕ್ಷಕ್ಕೆ ಬೇಡಿಕೆ: ಕೃತ್ಯ ಎಸಗಿ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು

ದಾವಣಗೆರೆ: (Robbery)  ದಾವಣಗೆರೆಯಲ್ಲಿ ಬಟ್ಟೆ ವ್ಯಾಪಾರಿಯೊಬ್ಬರನ್ನು ಹಣಕಾಸಿನ ಮಾತುಕತೆ ನೆಪದಲ್ಲಿ ಕರೆದೊಯ್ದು, ಕೊಠಡಿಯೊಂದರಲ್ಲಿ ಬಂಧಿಸಿ 10...

ದಾವಣಗೆರೆರಾಜ್ಯ / ಕರ್ನಾಟಕ

IGP: ದಾವಣಗೆರೆ ಪೂರ್ವ ವಲಯ ಐಜಿಪಿಯಾಗಿ ಎನ್. ಸತೀಶ್ ಕುಮಾರ್ ವರ್ಗಾವಣೆ

ದಾವಣಗೆರೆ: (IGP) ಕರ್ನಾಟಕ ಸರ್ಕಾರವು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಂಡಿದ್ದು, ಹಿರಿಯ ಐಪಿಎಸ್ ಅಧಿಕಾರಿ...

ಅಪರಾಧರಾಜಕೀಯರಾಜ್ಯ / ಕರ್ನಾಟಕ

ED: ಕರ್ನಾಟಕ ಸಚಿವ ಸತೀಶ್ ಜಾರಕಿಹೊಳಿ ಆಸ್ತಿಗಳ ಮೇಲೆ ಇ.ಡಿ ದಾಳಿ: ಇ ಡಿ ಮಹತ್ವದ ಮಾಹಿತಿ ಬಿಡುಗಡೆ

ಬೆಂಗಳೂರು: (ED) ಕರ್ನಾಟಕದ ಲೋಕೋಪಯೋಗಿ (PWD) ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರಿಗೆ ಸೇರಿದ...