subsidy; ಕಾರ್ಮಿಕ ಇಲಾಖೆಯ ವಿಳಂಬ ನೀತಿ ಅನುಸರಿಸಿ ಶಾಸಕರಿಗೆ ಮನವಿ
ದಾವಣಗೆರೆ, ಸೆ.01: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ, ಮದುವೆ, ನಿವೃತ್ತಿ ವೇತನ, ವೈದ್ಯಕೀಯ ಚಿಕಿತ್ಸೆ ಮತ್ತು ಅಂತಿಮ ಸಂಸ್ಕಾರ ಸೇರಿದಂತೆ ವಿವಿಧ ಸಹಾಯಧನಗಳನ್ನು (subsidy) ಬಿಡುಗಡೆ ಮಾಡುವಲ್ಲಿ ಕಾರ್ಮಿಕ ಇಲಾಖೆಯು ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ, ಸೂಕ್ತ ಕ್ರಮಕ್ಕಾಗಿ ಕಟ್ಟಡ ಕಾರ್ಮಿಕರ ಮುಖಂಡರ ನಿಯೋಗವು ದಾವಣಗೆರೆಯಲ್ಲಿ ಸಚಿವರು, ಶಾಸಕರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಆವರಗೆರೆ ಹೆಚ್.ಜಿ.ಉಮೇಶ್ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಅವರ ಗೃಹ ಕಚೇರಿ ಶಿವ ಪಾರ್ವತಿಯಲ್ಲಿ ಮನವಿ ಸಲ್ಲಿಸಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಈ ಕೂಡಲೇ ಸಹಾಯಧನಗಳನ್ನು ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಆಗ್ರಹಿಸಿದರು.
ganga kalyan yojana; ಗಂಗಾ ಕಲ್ಯಾಣ ಬೋರ್ ವೆಲ್; ಅರ್ಜಿ ಆಹ್ವಾನ
ಈ ವೇಳೆ ಮಾತನಾಡಿದ ಹೆಚ್.ಜಿ.ಉಮೇಶ್, ಹಿಂದಿನ ಬಿಜೆಪಿ ಸರ್ಕಾರವಿದ್ದಲ್ಲಿದ್ದ ಮಂತ್ರಿಗಳು ಕಾರ್ಮಿಕರಿಗೆ ಹಲವು ರೀತಿಯ ಕಿಟ್ಟುಗಳನ್ನು ನೀಡುವ ನೆಪದಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ದುರುಪಯೋಗ ಮಾಡಿದ್ದಾರೆ. ಇದು ಸಾಲದೆಂಬಂತೆ ಆರೋಗ್ಯ ತಪಾಸಣೆಯ ನೆಪದಲ್ಲಿ ಒಂದು ಜಿಲ್ಲೆಗೆ ೧೦ ಕೋಟಿ ರೂಗಳಂತೆ ಬಿಡುಗಡೆ ಮಾಡಿ ಅದರಲ್ಲಿ 40 ರಿಂದ 45ರಷ್ಟು ಕಮಿಷನ್ ಪಡೆದು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದರೆ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿರುವ ಕಾರ್ಮಿಕ ಮಂತ್ರಿಗಳು ಸಹ ಇಂದಿನ ಬಿಜೆಪಿ ಸರ್ಕಾರದ ರೀತಿಯನ್ನೇ ಅನುಸರಿಸುತ್ತಿದ್ದು, 31 ಜಿಲ್ಲೆಗಳಿಗೆ 310 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವ ಮೂಲಕ ಕಮಿಷನನ್ನು ಕಬಳಿಸಲು ಹುನ್ನಾರ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಲ್ಲದೆ ಕಳೆದ ಮೂರು ವರ್ಷಗಳಿಂದ ನೈಜ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನಿವೃತ್ತಿ ವೇತನ, ಮಕ್ಕಳ ಮದುವೆಗೆ ಸಹಾಯಧನ, ಆಸ್ಪತ್ರೆ ವೆಚ್ಚದಂತಹ ಯಾವುದೇ ಸಹಾಯಧನಗಳು ಬಿಡುಗಡೆಯಾಗುತ್ತಿಲ್ಲ. ಅಲ್ಲದೆ ಖಾಸಗಿ ಆರೋಗ್ಯ ಸಂಸ್ಥೆಗಳೊಂದಿಗೆ ಶಾಮಿಲಾಗಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡುವ ಹೊಂದಾಣಿಕೆಯ ಯೋಜನೆ ನಡೆಸಿದೆ. ಇದನ್ನು ಈ ಕೂಡಲೇ ತಡೆಯಬೇಕು ಎಂದು ಆಗ್ರಹಿಸಿದರು.
devaraj urs; ಸಂವಿಧಾನ ವಿರೋಧಿಗಳ ಕೈಗೆ ಅಧಿಕಾರ ನೀಡಿ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ: ಮುಖ್ಯಮಂತ್ರಿ
ಕಾಂಗ್ರೆಸ್ ಸರ್ಕಾರಕ್ಕೆ ಕಟ್ಟಡ ಕಾರ್ಮಿಕರ ಮೇಲೆ ಒಂದು ವೇಳೆ ಕಾಳಜಿ ಇದ್ದರೆ ರಾಜ್ಯದಲ್ಲಿರುವ ಎಲ್ಲಾ ಜಿಲ್ಲಾ ಮತ್ತು ತಾಲೂಕ ಕೇಂದ್ರಗಳಲ್ಲಿನ ಇಎಸ್ ಐ ಆಸ್ಪತ್ರೆಗಳಲ್ಲಿ ಮಾತ್ರವಲ್ಲದೆ ಹೋಬಳಿ ಮಟ್ಟದಲ್ಲಿರುವ ಪಿಹೆಚ್ ಸಿಗಳನ್ನು ಹೊಂದಾಣಿಕೆ ಮಾಡಿಕೊಂಡು ನಗದುರಹಿತ ಚಿಕಿತ್ಸೆ ನೀಡಲು ಕಾರ್ಮಿಕ ಮಂತ್ರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಕಾರ್ಮಿಕ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಹಣದ ದುರುಪಯೋಗ ತಡೆಯಲು ಉನ್ನತದ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥ ರಾಜಕಾರಣಿಗಳು ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಲ್ಲದೆ ಸರ್ಕಾರಕ್ಕೆ ಮಸಿ ಬೆಳೆಯುವಂತ ಈ ಕಾರ್ಯಕ್ರಮವನ್ನು ಕೂಡಲೇ ತಡೆಹಿಡಿಯಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಮಾಹಿತಿಯ ಪ್ರಕಾರ 15 ರಿಂದ 20 ಲಕ್ಷ ಕಟ್ಟಡ ಕಾರ್ಮಿಕರು ಇದ್ದು, ಕಾರ್ಮಿಕ ಇಲಾಖೆಯ ಈಗಿನ ಮಾಹಿತಿ ಪ್ರಕಾರ ೪೮ ಲಕ್ಷ ಜನ ಕಟ್ಟಡ ಕಾರ್ಮಿಕರು ನೋಂದಣಿ ಆಗಿದ್ದಾರೆ. ಕಾರಣ ಈ ಕೂಡಲೇ ಬೋಗಸ್ ಕಾರ್ಡುದಾರರನ್ನು ತಡೆ ಹಿಡಿಯುವ ಜೊತೆಗೆ ನಕಲಿ ಗುರುತಿನ ಚೀಟಿ ನೀಡಿದ ಸಂಸ್ಥೆಗಳು, ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಆಗ್ರಹಿಸಿದರು.
ksrtc; ವರ್ಷದ ಕೊನೆಯಲ್ಲಿ ಸ್ಮಾರ್ಟ್ ಸಿಟಿ ಬಸ್ ನಿಲ್ದಾಣ; 13 ಸಾವಿರ ಜನ ಭರ್ತಿಗೆ ರಾಮಲಿಂಗಾರೆಡ್ಡಿ ನಿರ್ಧಾರ
ಕಟ್ಟಡ ಕಾರ್ಮಿಕರಿಗೆ ಅವಶ್ಯಕವೇ ಅಲ್ಲದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿಯಲ್ಲಿ ಇರುವ ಹಣವನ್ನು ಖಾಲಿ ಮಾಡಿ ಶಾಶ್ವತವಾಗಿ ಮಂಡಳಿಯನ್ನು ಮುಚ್ಚಲು ಹುನ್ನಾರ ನಡೆಸಲಾಗುತ್ತಿದೆ. ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಶೀಘ್ರದಲ್ಲೇ ಸಭೆ ಕರೆದು ಚರ್ಚಿಸಬೇಕು. ಈ ವಿಚಾರವಾಗಿ ವಿಳಂಬ ಮಾಡಿದರೆ ಕರ್ನಾಟಕ ರಾಜ್ಯದಂತ ಕಟ್ಟಡ ಕಾರ್ಮಿಕರು ಬೀದಿಗೆ ಇಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ವಿ. ಲಕ್ಷ್ಮಣ ಎಂ.ಹನುಮಂತಪ್ಪ, ಮುರುಗೇಶ್, ತಿಪ್ಪೇಶ್, ನೇತ್ರಾವತಿ, ಸುರೇಶ್, ಮುದಹದಡಿ ಸುರೇಶ್ ಇತರರು ಇದ್ದರು.