ಮಾಡಳು ವಿರೂಪಾಕ್ಷಪ್ಪಗೆ ಅದ್ದೂರಿ ಸ್ವಾಗತ ಷಡ್ಯಂತ್ರದಿಂದ ದಾಳಿ ನಡೆದಿದೆ ಎಂದ ಶಾಸಕ
ದಾವಣಗೆರೆ: ಲಂಚ ಸ್ವೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಆರು ದಿನಗಳಿಂದ ತಲೆ ಮರೆಸಿಕೊಂಡಿದ್ದ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರು, ನ್ಯಾಯಾಲಯಲ್ಲಿ ಜಾಮೀನು ಸಿಗುತ್ತಲೇ ಚನ್ನಗಿರಿಯಲ್ಲಿನ ನಿವಾಸಕ್ಕೆ ತೆರೆದ ವಾಹನದಲ್ಲಿ ಆಗಮಿಸಿದ್ದಾರೆ.
ಈ ಸಂದರ್ಭದಲ್ಲಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಹೂವಿನ ಮಹಲೆ ಸುರಿಸಿ ವಿರೂಪಾಕ್ಷಪ್ಪ ಅವರಿಗೆ ಅದ್ಧೂರಿ ಸ್ವಾಗತ ಕೋರಿದರು.
ಈ ಮಧ್ಯೆ ಚನ್ನೇಶಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿರೂಪಾಕ್ಷಪ್ಪ, ತಮ್ಮ ಹಣವನ್ನು ಲೋಕಾಯುಕ್ತರು ತೆಗೆದುಕೊಂಡು ಹೋಗಿದ್ದಾರೆ. ಅದು ಭ್ರಷ್ಟಾಚಾರದ ಹಣವಲ್ಲ. ಅದನ್ನು ವಾಪಾಸ್ ಪಡೆಯುತ್ತೇನೆ ಎಂದು ಹೇಳಿದ್ದಾರೆ.
ಕಳೆದ ಚುನಾವಣೆ ಸಂದರ್ಭದಲ್ಲೂ ತೆರಿಗೆ ಇಲಾಖೆ ಅಧಾಕಾರಿಗಳು ರೇಡ್ ಮಾಡಿದ್ದರು. ಈ ಬಾರಿಯೂ ನನ್ನ ಮೇಲೆ ಷಡ್ಯಂತ್ರದಿಂದ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದರು.
ಕೆಎಸ್‌ಡಿಎಲ್ ಮೊದಲು 750 ಕೋಟಿ ರೂ. ವ ಹಿವಾಟು ನಡೆಸುತ್ತಿತ್ತು. ನಾನು ಅಧಿಕಾರ ವಹಿಸಿಕೊಂಡ ಮೇಲೆ 1350 ಕೋಟಿ ವಹಿವಾಟು ನಡೆಸುತ್ತಿದೆ. ಎರಡು ವರ್ಷದಲ್ಲಿ ಕೆಎಸ್ ಡಿಎಲ್ ಲಾಭದಲ್ಲಿ ತಂದಿದ್ದೇನೆ ಎಂದು ಹೇಳಿದರು.
ವಶಪಡಿಸಿಕೊಂಡಿರುವ ಹಣದ ಬಗ್ಗೆ ನಾನು ದಾಖಲೆಗಳನ್ನು ನೀಡುತ್ತೇನೆ. ಆ ಹಣ ವಾಪಾಸ್ ತರುತ್ತೇನೆ ಎಂದವರು ಹೇಳಿದರು.