ಉದ್ಯೋಗ ಆಕಾಂಕ್ಷಿಗಳ ಭರವಸೆಯ ಯುವ ವಿಜೇತ
ದಾವಣಗೆರೆ : ಸಾಮಾನ್ಯವಾಗಿ ಕಷ್ಟಗಳು ಎಲ್ಲರಿಗೂ ಬರುತ್ತವೆ ನಿರಂತರ ಅಧ್ಯಯನ ಮಾಡಿದರೆ ಯಶಸ್ಸು ಸಿಗುತ್ತದೆ ವಿನ್ನರ್ ಕರಿಯರ್ ಅಕಾಡೆಮಿಯ ಯುವ ವಿಜೇತ ತಂಡ ಪ್ರೇರಣೆಯಾಗಿ ಕೆಲಸ ಮಾಡಲಿ ಎಂದು ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ ಬಿ ರಿಷ್ಯಂತ ರವರು ಹೇಳಿದರು.
ಅವರು ಇಂದು ದಾವಣಗೆರೆ ನಗರದ ಕುವೆಂಪು ಕನ್ನಡ ಭವನದಲ್ಲಿ ವಿನ್ನರ್ಸ್ ಕೆರಿಯರ್ ಅಕಾಡೆಮಿ ವತಿಯಿಂದ ಆರಂಭವಾದ ಯುವ ವಿಜೇತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ವಿವಿದ ರೀತಿಯ ಸಮಸ್ಯೆಗಳಾದ ಹಣಕಾಸು ಕೌಟಿಂಬಿಕೆ ಕಲಹ ಸಾಮಾಜಿಕ ಸಮಸ್ಯೆಗಳು ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಗಳು ಬಂದೇ ಬರುತ್ತವೆ ಸಮಸ್ಯೆಗಳನ್ನು ನೆಪ ಮಾಡಿ ಕೊಂಡು ಜೀವನ ನಡೆಸದೆ ಅವುಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಬೇಕು ಎಂದು ಹೇಳಿದರು.
ಯುವ ವಿಜೇತ ಕಾರ್ಯಕ್ರಮವನ್ನು ಪರಿಚಯಿಸುತ್ತಾ ಮಾತನಾಡಿದ ಪ್ರಾಧ್ಯಾಪಕರಾದ ವೆಂಕಟೇಶ್ ಬಾಬು ರವರು ಮಧ್ಯ ಕರ್ನಾಟಕ ಭಾಗದಿಂದ ಹೆಚ್ಚು ಹೆಚ್ಚು ಯುವಕರು ಸರ್ಕಾರಿ ಉದ್ಯೋಗ ಪಡೆಯಬೇಕು ಅದಕ್ಕೆ ಬೇಕಾದ ಅರಿವು ಮೂಡಿಸಿ ಮಾರ್ಗದರ್ಶನ ನೀಡಿ ಸೂಕ್ತ ತರಬೇತಿಯೊಂದಿಗೆ ಯುವ ಸಬಲೀಕರಣ ಮಾಡುವ ಉದ್ದೇಶದಿಂದ ರೂಪಿತಗೊಂಡ ಸಮಾನ ಮನಸ್ಕರ ತಂಡವೇ ಯುವ ವಿಜೇತ.
ಯುವ ವಿಜೇತ ತಂಡವು ಪ್ರತಿ ವರ್ಷ ಈ ರೀತಿಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತದೆ. ಯುವ ಜನತೆಯ ಚಿತ್ತ ಸರ್ಕಾರಿ ಉದ್ಯೋಗದತ್ತ ಎಂಬ ಧ್ಯೇಯ ವಾಕ್ಯವನ್ನು ಸಾಕರಗೋಳ್ಳಿಸುವಲ್ಲಿ ಪ್ರಯತ್ನ ಪಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಿಕ್ಷಣ ತಜ್ಞರಾದ ಹೆಚ್‌ವಿ ವಾಮದೇವಪ್ಪನವರು ಸ್ಪರ್ಧಾತ್ಮಕ ಮನೋಭಾವದಿಂದ ಬುದ್ಧಿವಂತಿಕೆಯಿಂದ ಅಧ್ಯಯನ ಮಾಡಿದರೆ ನೀವು ನಿಮ್ಮ ಕನಸನ್ನು ಸಾಕಾರಗೊಳಿಸಬಹುದು ಎಂದು ಹೇಳಿದರು. ಯುವಕರು ಬರಿ ಉದ್ಯೋಗಗಳನ್ನು ಹುಡುಕದೆ ಉದ್ದಿಮೆದಾರರಾಗಿ ಉದ್ಯೋಗವನ್ನು ನೀಡುವಂತೆ ಬೆಳೆಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯದ ನುರಿತ ತರಬೇತಿದಾರರಾದ ಕೇಂದ್ರ ತೆರಿಗೆಗಳ ಉಪ ಆಯುಕ್ತರಾದ ಭೈರಪ್ಪನವರು ಸಾಧನ ಅಕಾಡೆಮಿಯ ಮಂಜುನಾಥ್ ರವರು
ವಿ ಕಿಂಗ್ಡಂ ಖ್ಯಾತಿಯ ವಿಶ್ವ ರಾಜರವರು ಹಾಗೂ ಮೆಂಟಲ್ ಎಬಿಲಿಟಿ ತರಬೇತಿದಾರರಾದ ಗುರುರಾಜ್ ಬುಲ್ ಬುಲೆ ರವರು ವಿವಿಧ ಪರೀಕ್ಷೆಗಳ ಹಾಗೂ ಆತ್ಮವಿಶ್ವಾಸ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಯುವಕರು ಉತ್ಸಾಹದಿಂದ ಪಾಲ್ಗೊಂಡು ಯುವ ವಿಜೇತವನ್ನು ಯುವ ಜಾತ್ರೆಯನ್ನಾಗಿಸಿ ಪ್ರಯೋಜನ ಪಡೆದುಕೊಂಡರು
ವಿನ್ನರ್ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಡಾ. ಶಿವರಾಜ ಕಬ್ಬೂರ ರವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಸ್ಪರ್ಧಾ ಅರಿವು ತಂಡ ವಿನ್ನರ್ಸ್ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಹಳೆಯ ವಿದ್ಯಾರ್ಥಿಗಳು ಅಧಿಕಾರಿ ವರ್ಗದವರು ಪ್ರಾಧ್ಯಾಪಕರುಗಳು ಭಾಗವಹಿಸಿದ್ದರು.