ಕನ್ನಡ ಕಟ್ಟುವ ಬೆಳೆಸುವ ಕಾರ್ಯ ಮನೆಯಿಂದಲೇ ಪ್ರಾರಂಭವಾಗಬೇಕು

ಕನ್ನಡ ಕಟ್ಟುವ ಬೆಳೆಸುವ ಕಾರ್ಯ ಮನೆಯಿಂದಲೇ ಪ್ರಾರಂಭವಾಗಬೇಕು

ದಾವಣಗೆರೆ : ಮಕ್ಕಳಿಗೆ ತಾಯರೇ ಮೊದಲ ಶಿಕ್ಷಕಿ ಬಾಲ್ಯ ವ್ಯವಸ್ಥೆಯಲ್ಲಿ ತಾಯಿ ಯಾವ ಭಾಷೆಯನ್ನು ಕಲಿಸುತ್ತಾಳೋ ಅದೇ ಭಾಷೆಯನ್ನೇ ಮಗು ತನ್ನ ಭಾಷೆಯಿಂದ ಭಾವಿಸುತ್ತದೆ.  ಅದರಂತೆ ಈ ನಾಡಿನ ತಾಯಂದಿರು ಆಂಗ್ಲ ಭಾಷೆಯ ವ್ಯಾಮೋಹದಿಂದ ಹೊರಬಂದು ಮಕ್ಕಳಿಗೆ ಕನ್ನಡ ಭಾಷೆ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವಂತೆ ಮಕ್ಕಳಿಗೆ ಪ್ರೇರಣೆಯ ನೀಡಬೇಕೆಂದು ಹಿರಿಯ ಕನ್ನಡ ಪರ ಹೋರಾಟಗಾರರಾದ ನಾಗೇಂದ್ರ ಬಂಡೆಕರ್ ಮನವಿ ಮಾಡಿದರು.

ಸುವರ್ಣ ಕರ್ನಾಟಕ ವೇದಿಕೆ ವೇದಿಕೆಯು ತಾಲೂಕಿನ ಗೋಣಿವಾಡದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮೀಣ ಮಾತಿಯರ ಕನ್ನಡ ಜಾಗೃತಿ ಸಮಾವೇಶದಲ್ಲಿ ಅವರು ಮಾತಾಡಿದರು.

ಪ್ರತಿ ಗ್ರಾಮಗಳಲ್ಲಿ ಇಂಗ್ಲಿಷ್ ಕಾನ್ವೆಂಟ್ ಶಾಲೆಗಳು ನಾಯಿಕೊಡೆಗಳಂತೆ ಉದ್ಭವವಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿಗೆ ಕುತ್ತು ಬಂದಿದೆ. ಈ ಕೆಟ್ಟ ಬೆಳವಣಿಗೆಗೆ ಕನ್ನಡ ಅನ್ನಭಾಷೆ ಅಲ್ಲ ಎಂದು ತಪ್ಪು ಕಲ್ಪನೆ ಪೋಷಕರಲ್ಲಿ ಇರುವುದರಿಂದಾಗಿ ಕನ್ನಡ ಶಾಲೆಗಳು ಸೊರಗುತ್ತಿವೆ. ಅದರಂತೆ ಗ್ರಾಮೀಣ ಮಾತೇಯರನ್ನು ಕನ್ನಡ ಭಾಷೆಯನ್ನು ಶಿಕ್ಷಣದ ಕಡೆ ಒಲವು ಮೂಡಿಸುವ ಇಂತಹ ಕಾರ್ಯಕ್ರಮಗಳನ್ನು ಪ್ರಸ್ತುತವೆಂದು ಬಂಡೇಕರ್ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರು ಮಂಜುನಾಥ್ ಕುರ್ಕಿ, ಕನ್ನಡ ನಾಡು-ನುಡಿಗಾಗಿ ಹೋರಾಟ ನಡೆಸುವ ಸಂಘಟನೆ ಅತ್ಯಗತ್ಯ ವೆನಿಸಿದರೆ ಹೋರಾಟದ ಮೂಲಕ ಕನ್ನಡ ಕಟ್ಟಬಹುದು. ಈ ರೀತಿ ಹೊಸ ಆಲೋಚನೆಗಳ ಮೂಲಕ ಮಾತೆಯರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕನ್ನಡ ಭಾಷೆಯನ್ನು ಕನ್ನಡ ಭಾಷೆ ಶಿಕ್ಷಣವನ್ನು ಉತ್ತೇಜಿಸುವ ಬೇಕಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಸಂತೋಷ್ ಕುಮಾರ್, ರಾಜ್ಯ ಉಪಾಧ್ಯಕ್ಷರಾದ ಹೆಚ್.ಪರಶುರಾಮ್, ನಮ್ಮ ಜೈ ಕರ್ನಾಟಕ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ, ಲಯನ್ಸ್ ವಾಸುದೇವ ರಾಯ್ಕರ್, ನಾಗರಾಜಪ್ಪ, ಮಂಜುನಾಥ ಎನ್.ಎಂ., ಅನಂತಲಕ್ಷ್ಮೀ, ಬಸವರಾಜ್, ಅಂಜಿನಪ್ಪ, ಹನುಮಂತಪ್ಪ, ಬಸವರಾಜಯ್ಯ, ರುದ್ರಸ್ವಾಮಿ, ಪುಟ್ಟ ಶಾಲೆಯ ಶಿಕ್ಷಕರು, ಪುಟ್ಟ ಮಕ್ಕಳು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!