asp; ದಾವಣಗೆರೆ ಜಿಲ್ಲೆಯ ಅಡಿಷಲ್ ಎಸ್ ಪಿ ವಿಜಯಕುಮಾರ್ ಸಂತೋಷ್ ಅಧಿಕಾರ ಸ್ವೀಕಾರ
ದಾವಣಗೆರೆ: asp ದಾವಣಗೆರೆ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಶ್ರೀ ವಿಜಯಕುಮಾರ್ ಎಂ. ಸಂತೋಷ್, ಕೆ.ಎಸ್.ಪಿ.ಎಸ್ ರವರು ಶನಿವಾರ ಅಧಿಕಾರ ವಹಿಸಿಕೊಂಡರು.
ನಿಕಟಪೂರ್ವ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ರಾಮಗೊಂಡ ಬಿ.ಬಸರಗಿ ಕೆ.ಎಸ್.ಪಿ.ಎಸ್ ರವರು ಅಧಿಕಾರ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ರವರಾದ ಶ್ರೀ ಬಸವರಾಜ ಬಿ ಎಸ್., ಡಿಸಿಆರ್ ಬಿ ಡಿವೈಎಸ್ಪಿ ರವರಾದ ಶ್ರೀ ಬಿ ನಾಗಪ್ಪ ರವರು, FPB ಡಿವೈಎಸ್ಪಿ ರವರಾದ ಶ್ರೀ ರುದ್ರೇಶ್ ಎ ಕೆ ರವರುಗಳು ಸೇರಿದಂತೆ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿಜಯಕುಮಾರ್ ಸಂತೋಷ್ ಅವರು ಈ ಹಿಂದೆ ಹಾವೇರಿ ಜಿಲ್ಲಾಯ ಹೆಚ್ಚುವರಿ ಪೋಲಿಸ್ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಮುಂಬಡ್ತಿ ಪಡೆದು ದಾವಣಗೆರೆ ವಿಭಾಗದ ಗುಪ್ತಚ ಇಲಾಖೆಯ ಉಪನಿರ್ದೇಶಕರಾಗಿ ಕರ್ತವ್ಯ ನಿಋವಹಿಸಿದ್ದು.