shivashankarappa; ದಾವಣಗೆರೆ ದಕ್ಷಿಣ ಸಮಗ್ರ ಅಭಿವೃದ್ಧಿಗೆ ಬದ್ಧ: ಡಾ|| ಶಾಮನೂರು ಶಿವಶಂಕರಪ್ಪ

ದಾವಣಗೆರೆ, ಅ.21: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ದವಿರುವುದಾಗಿ ಶಾಸಕ ಡಾ|| ಶಾಮನೂರು ಶಿವಶಂಕರಪ್ಪನವರು (Shivashankarappa) ತಿಳಿಸಿದರು.

ದಾವಣಗೆರೆಯ ಹೊಸ ಖಬರಸ್ತಾನದಲ್ಲಿ ಕಾಂಪೌಂಡ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ದಾವಣಗೆರೆಯ ಹಳೇ ಮತ್ತು ಹೊಸ ಖಬರಸ್ತಾನಗಳ ಕಾಂಪೌಂಡ್, ಹೈಟೆಕ್ ಶೌಚಾಲಯ ಮತ್ತು ವಜೂಖಾನ ನಿರ್ಮಿಸಲಾಗುವುದು ಎಂದರು.

ಈಗಾಗಲೇ ಈ ಭಾಗದಲ್ಲಿ ಪಿ.ಯು.ಸಿ.ಕಾಲೇಜಿಗೆ ಶಿಫಾರಸ್ಸು ಮಾಡಲಾಗಿದ್ದು, ಶೀಘ್ರ ಮಂಜೂರಾತಿ ದೊರೆಯಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಪಿ.ಯು.ಸಿಯ ಕಲಾ ಮತ್ತು ವಾಣಿಜ್ಯ ವಿಭಾಗಗಳು ಆರಂಭಗೊಳ್ಳಲಿವೆ ಎಂದರು.

police; ದೇಶ ರಕ್ಷಣೆ, ಸಮಾಜ ಹಿತಕ್ಕಾಗಿ, ಜೀವ ಬಲಿದಾನ ಮಾಡಿದವರು ಮಹಾನ್ ವ್ಯಕ್ತಿಗಳು: ಡಾ. ವೆಂಕಟೇಶ್ ಎಂ.ವಿ.

ಇದೇ ವೇಳೆ ತಂಜೀ ಕಮಿಟಿಯ ಅಧ್ಯಕ್ಷರಾದ ದಾದುಸೇಠ್ ಅವರು ಈ ಭಾಗದಲ್ಲಿನ ಶಾಲೆ ಆವರಣವನ್ನು, ಕಾಂಪೌAಡ್ ಅಭಿವೃದ್ಧಿಗೊಳಿಸಿ ಕುಡಿವ ನೀರು ಮತ್ತು ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಬೇಕು ಹಾಗೂ ಎಸ್.ಎಸ್.ಎಂ.ನಗರದ ಎ ಬ್ಲಾಕ್ ಉದ್ಯಾನವನವನ್ನು ಹಾಗೂ ಬಾಷಾ ನಗರದ ಸಮುದಾಯ ಭವನವನ್ನು ಅಭಿವೃದ್ಧಿ ಪಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ತಂಜೀ ಕಮಿಟಿಯ ಮನವಿಗೆ ಸ್ಪಂದಿಸಿದ ಶಾಸಕರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಕಾರ್ಯರೂಪಕ್ಕೆ ತರಲಾಗುವುದು ಎಂದರು.

ph.d: ಶಾಮನೂರು ಶಿವಶಂಕರಪ್ಪನವರಿಗೆ ಗೌರವ ಡಾಕ್ಟರೇಟ್

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಕೆ.ಚಮನ್ ಸಾಬ್, ಜಾಕೀರ್ ಅಲಿ, ಶಫೀಖ್ ಪಂಡಿತ್ ಹಾಗೂ ತಂಜೀ ಕಮಿಟಿಯ ಸದಸ್ಯರುಗಳು, ಮುಸ್ಲಿಂ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!