price; ನವರಾತ್ರಿ ಹಬ್ಬದ ಪ್ರಯುಕ್ತ ಸರ್ವಿಸ್ ಸೆಂಟರ್ ಗಳಲ್ಲಿ ದರ ಏರಿಕೆ

ದಾವಣಗೆರೆ : price ನವರಾತ್ರಿ ಹಬ್ಬದ ಪ್ರಯುಕ್ತ ಎಲ್ಲಾ ವಾಹನಗಳನ್ನು ಶುಚಿಗೊಳಿಸುವುದು ವಾಡಿಕೆ. ಪ್ರತಿವರ್ಷ ಹತ್ತಿರದ ಜಿಲ್ಲೆಯ ಎಲ್ಲಾ ಭಾಗದ ಭದ್ರಾ ಕಾಲುವೆಗಳಿಗೆ ಕೊಂಡೊಯ್ಯುತ್ತಿದ್ದರು. ಆದರೆ ಈ ಭಾರಿ ನೀರಿಲ್ಲದೆ ಒಣಗಿದ್ದು, ಸಾರ್ವಜನಿಕರು ವಾಟರ್ ಸರ್ವಿಸ್ ಗಳಿಗೆ ಮುಗಿ ಬೀಳುತ್ತಿದ್ದಾರೆ.

ಸೋಮವಾರ ಆಯುದ್ದ ಪೂಜೆ ಇದ್ದು, ಮನೆಗಳಿಗಿಂತ ಹೆಚ್ಚಾಗಿ ವಾಟರ್ ಸರ್ವೀಸ್ ಸೆಂಟರ್ ಗಳಲ್ಲಿ ಹಬ್ಬದ ಸಡಗರ ಹೆಚ್ಚಾಗಿ ಕಂಡುಬರುತ್ತಿದೆ.

ಕಾರು, ಆಟೋ, ಬೈಕ್, ಎಸ್‌ಯುವಿ ಸೇರಿದಂತೆ ನಾಲ್ಕು ಚಕ್ರಗಳ ವಾಹನ ಹೊಂದಿರುವವರು ಅವುಗಳನ್ನು ಮನೆಯಲ್ಲಿ ತೊಳೆಯದೆ ಹತ್ತಿರದ ವಾಟರ್‌ ಸರ್ವಿಸ್‌ ಸ್ಟೇಷನ್‌ಗಳಿಗೆ ಕೊಂಡೊಯ್ಯುತ್ತಿದ್ದಾರೆ. ಈ ನಿಟ್ಟಿನಲ್ಲಿ ನಗರದಲ್ಲಿರುವ ಬಹುತೇಕ ಕಾರ್‌ ವಾಶ್‌ ಕೇಂದ್ರಗಳು ವಾಹನಗಳನ್ನು ಬರಮಾಡಿಕೊಳ್ಳಲು ಸಕಲ ಸೌಲಭ್ಯಗಳೊಂದಿಗೆ ಸನ್ನದ್ಧವಾಗಿವೆ.

ಶನಿವಾರ ಸಂಜೆಯಿಂದಲೇ ನಗರದ ಎಲ್ಲ ಸರ್ವಿಸ್‌ ಸ್ಟೇಷನ್‌ಗಳಲ್ಲಿ ವಾಹನಗಳನ್ನು ಶುಚಿಗೊಳಿಸುವ ನಿಟ್ಟಿನಲ್ಲಿ ಕ್ಯೂ ಕಂಡುಬಂದಿದ್ದು, ನೀರಿಲ್ಲದ ಕಾರಣದಿಂದಾಗಿ ಈ ಭಾರಿ ವಾಹನಗಳನ್ನು‌ ಶುಚಿ‌ ಮಾಡಲು ದರವು ಹೆಚ್ಚಾಗಿದೆ.

shivashankarappa; ದಾವಣಗೆರೆ ದಕ್ಷಿಣ ಸಮಗ್ರ ಅಭಿವೃದ್ಧಿಗೆ ಬದ್ಧ: ಡಾ|| ಶಾಮನೂರು ಶಿವಶಂಕರಪ್ಪ

ಕಾರು (150 ರಿಂದ 250 ರೂ.), ಎಸ್‌ಯುವಿ (250 ರಿಂದ 400 ರೂ.), ಬೈಕ್‌ (50 ರಿಂದ 100 ರೂ.) ಹಾಗೂ ಆಟೋ (100 ರಿಂದ 150 ರೂ.) ದರಗಳನ್ನು‌ನಿಗದಿಪಡಿಸಿದ್ದು, ವಾಹನಗಳು ಹೆಚ್ಚಾಗಿ ಬರುತ್ತಿರುವುದರಿಂದ ಎರಡು ದಿನದ ಮಟ್ಟಿಗೆ ಹೆಚ್ಚುವರಿ ಕೆಲಸದವರನ್ನು ನೇಮಿಸಿಕೊಂಡಿದ್ದಾರೆ.

ಇದರೊಂದಿಗೆ ಇತ್ತೀಚೆಗೆ ವಿದ್ಯುತ್ ಹೆಚ್ಚಾಗಿ ಕೈಗೊಡುತ್ತಿರುವುದರಿಂದ, ಮಾಲೀಕರು ಮುಂಚಿತವಾಗೇ ಜನರೇಟರ್, ಯುಪಿಎಸ್ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಚಿಕ್ಕಪುಟ್ಟ ಸೆಂಟರ್ ಗಳಲ್ಲಿ ವಿದ್ಯುತ್ ಕೈಗೊಡದಂತೆ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!