ಐಎಎಸ್, ಐಪಿಎಸ್, ಅಧಿಕಾರಿಗಳಿಂದ ವಿಶ್ವ ಮಟ್ಟದಲ್ಲಿ ಭಾರತದ ಮಾನ ಹರಾಜು – ಪವನ್ ರೇವಣಕರ್

ಐಎಎಸ್, ಐಪಿಎಸ್, ಅಧಿಕಾರಿಗಳಿಂದ ವಿಶ್ವ ಮಟ್ಟ

ದಾವಣಗೆರೆ: ಭಾರತ ಸರ್ಕಾರದ ಉನ್ನತ ಮಟ್ಟದ ಸಿವಿಲ್ ಸರ್ವಿಸ್ ಅಧಿಕಾರಿಗಳು, ಇಷ್ಟು ಕೀಳಾಗಿ ಸಾರ್ವಜನಿಕವಾಗಿ ಬೈದು ಕೊಳ್ಳುತ್ತಿರುವುದರಿಂದ ವಿಶ್ವ ಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕುತ್ತಿರುವುದು ವಿಶಾಧನೀಯ.

ಶೀಲಂ ಪರಮ ಭೂಷಣಂ: ಚಾರಿತ್ರ್ಯವು ಅತ್ಯುನ್ನತ ಗುಣವಾಗಿದೆ.
Sheelam Param Bhushanam: Character is the highest virtue.

ಇದು LBSNAA: Lal Bahadur Shastri National Academy of Administration is a civil service training institute ನ ಪ್ರವೇಶ ದ್ವಾರದಲ್ಲಿ ಬರೆದಿರುವ ಧೇಯ.

ಒಬ್ಬ ಸಾಮಾನ್ಯ ವಿದ್ಯಾರ್ಥಿಗೆ ನಿನ್ನ ಜೀವನದ ಲಕ್ಷ್ಯವೇನು, ಎಂದು ಕೇಳಿದರೆ ಬಹುತೇಕರು ನಾನು DC ಆಗಬೇಕು, SP ಆಗಬೇಕು, IAS, IPS ಅಧಿಕಾರಿಯಾಗಬೇಕು ಎನ್ನುತ್ತಾರೆ. ಯಾರೂ ಸಹ ನಾನು Politician ಆಗಬೇಕು ಎನ್ನುವುದೇ ಇಲ್ಲಾ.

ಪ್ರತಿಯೊಬ್ಬ ಪೋಷಕರೂ ಸಹ ತಮ್ಮ ಮಕ್ಕಳು, IAS, IPS ಅಂತಹ ಉನ್ನತ ಸ್ಥಾನವನ್ನು ಅಲಂಕರಿಸಬೇಕು ಎಂದು ಬಯಸುತ್ತಾರೆ.

ಏಕೆಂದರೆ, ಆ ಸ್ಥಾನಕ್ಕೆ ಇರುವ ಘನತೆ, ಆ ಸ್ಥಾನವನ್ನು ತಲುಪಲು ಒಬ್ಬ ಆಕಾಂಕ್ಷಿ ತಾನು ಜೀವನದಲ್ಲಿ ಪಡೆಬೇಕಾದ ಪರಿಶ್ರಮ, ಗಳಿಸಬೇಕಾದ ಅಪಾರ ಸಾಮಾಜಿಕ, ರಾಜಕೀಯ, ಆರ್ಥಿಕ, ವ್ಯವಹಾರಿಕ, ಭೌಗೋಳೀಕ, ರಾಜತಾಂತ್ರಿಕ, ಕಾನೂನು ಹೀಗೆ ಹತ್ತು ಹಲವು ಕ್ಷೇತ್ರದ ಪಾರಂಗತರ ಜ್ಞಾನ ಹೊಂದಿರಬೇಕು, ತನ್ನಲ್ಲಿ ಶಿಲ್ಪಸಿಕೊಳ್ಳಬೇಕಾದ ವ್ಯಕ್ತಿತ್ವ ವಿಕಸನ ಇದೊಂದು ಸಾಮಾನ್ಯರ ಕಾರ್ಯವಲ್ಲ.
ಆದರೆ, ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಸುದ್ದಿಯಾಗಿರುವ ರೂಪ IPS Vs ರೋಹಿಣಿ IAS ಪರಸ್ಪರ ಕೆಸರೆರೆಚಾಟ ಬೀದಿಗೆ ಬಂದಿದೆ.
ಒಬ್ಬ ಸಾಮಾನ್ಯ ಹೆಣ್ಣು ಮಕ್ಕಳು ನೀರಿಗಾಗಿ ಬೀದಿ ಜಗಳ ಮಾಡಿದ್ದ ನೋಡಿದ್ದೇವೆ.
So called ಸಿನೆಮಾ ತಾರೆಯರು ಅಸಭ್ಯವಾಗಿ ವರ್ತಿಸಿ, ಡ್ರಗ್ಸ್ ಸೇವನೆ ಮಾಡಿ ರಂಪಾಟ ಮಾಡಿದ್ದನ್ನ ನೋಡಿ ಸಮಾಜ ಹಸಯ್ಯ ಪಟ್ಟಿದೆ.
ಆದರೆ, ಭಾರತ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು, ಇಷ್ಟು ಕೀಳಾಗಿ ಸಾರ್ವಜನಿಕವಾಗಿ ಬೈದುಕೊಳ್ಳುತ್ತಿದ್ದಾರೆ ಎಂದರೆ, ಇದು ನಾಚಿಕೆಯ ಸಂಗತಿ, ಇದು ಇವರ ವ್ಯಯಕ್ತಿಕ ವಿಚಾರ ಇರಬಹುದು, ಆದರೆ, ಇವರು ಸಾಮಾನ್ಯ ಮಹಿಳೆಯರಲ್ಲಾ, ಭಾರತ ಸರ್ಕಾರದ ಪ್ರತಿನಿಧಿಸುವ ಉನ್ನತ ಮಟ್ಟದ ಅಧಿಕಾರಿಗಳು. ಇವರನ್ನ ತಯ್ಯಾರು ಮಾಡಲು UPSC ಕೋಟ್ಯಾಂತರ ರೂ. ಇವರ ತರಬೇತಿಗೆಂದು ವ್ಯಯ್ಯಿಸುತ್ತದೆ, ಭಾರತ ಹಾಗೂ ವಿಶ್ವಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ಇವರು ತರಬೇತಿ‌ ಪಡೆದಿರುತ್ತಾರೆ.


ಆದರೆ, ಇಂದು ಅದೆಲ್ಲದನ್ನು ಮಣ್ಣು ಪಾಲು ಮಾಡುತ್ತಾ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, UPSC ಸಂಸ್ಥೆ ಎಲ್ಲದಕ್ಕಿಂತ ಮುಖ್ಯವಾಗಿ ವಿಶ್ವದ ಮುಂದೆ ಭಾರತದ ಮಾನ ಹರಾಜು ಹಾಕುತ್ತಿರುವುದು ವಿಶಾಧನೀಯ. ಇವರು All India Services conduct rules ಗೂ ಸಹ ಇವರು ಬೆಲೆ ಕೊಡಲ್ಲ ಅನಿಸುತ್ತಿದೆ.?
ಇದು ಒಬ್ಬ ಸಾಮಾನ್ಯ ಪ್ರಜೆಯಾಗಿ ನನಗೆ ಕಾಡುತ್ತಿರುವ ಪ್ರಶ್ನೆ, ಮಾನ್ಯ Basavaraj Bommai ಮಾನ್ಯ Chief Minister of Karnataka ಮಾನ್ಯ Araga Jnanendra
ಪವನ್ ಉಲ್ಲಾಸ್ ರೇವಣಕರ್,ಯುವ ಸಂಕಲ್ಪ ಪ್ರತಿಷ್ಠಾನ,9731102542.

Leave a Reply

Your email address will not be published. Required fields are marked *

error: Content is protected !!