ಪವರ್ ಲಿಫ್ಟಿಂಗ್‌ನಲ್ಲಿ ದಾವಣಗೆರೆ ಚಿನ್ನ

ಪವರ್ ಲಿಫ್ಟಿಂಗ್‌ನಲ್ಲಿ ದಾವಣಗೆರೆ ಚಿನ್ನ

ದಾವಣಗೆರೆ: ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಮಾಸ್ಟರ್ ಪವರ್ ಲಿಫ್ಟಿಂಗ್ ಸ್ಪರ್ಧೆ ಹಾಗೂ  ರಾಷ್ಟ್ರೀಯ ಸ್ಪರ್ಧೆಯ ಆಯ್ಕೆಯಲ್ಲಿ ದಾವಣಗೆರೆ ನಗರದ ಶ್ರೀಬೀರೇಶ್ವರ ವ್ಯಾಯಾಮ ಶಾಲೆಯ ಕ್ರೀಡಾಪಟುಗಳಾದ ಅಕ್ರಂಭಾಷಾ, ಕೆ.ಜಿ.ಸುಂದರ್‌ರಾವ್, ಸೈಯದ್ ಖಾಸೀಂ, ವೆಂಕಟೇಶ್, ಕಾಂತರಾಜ್ ಇವರು ತಲಾ ತಮ್ಮ ಗುಂಪಿನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕಗಳನ್ನು ಗೆದ್ದು, ವಾರಣಾಸಿಯಲ್ಲಿ ನಡೆಯಲಿರುವ  ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿಜೇತ ಎಲ್ಲಾ ಕ್ರೀಡಾ ಪಟುಗಳಿಗೆ ಶ್ರೀಬೀರೇಶ್ವರ ವ್ಯಾಯಾಮ ಶಾಲೆಯ ಎಲ್ಲಾ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!