ಉತ್ತಮ ಭವಿಷ್ಯಧ ಜನಸ್ನೇಹಿ ಬಜೆಟ್: ಬಿ ಎಂ ಸತೀಶ್

ಜನಸ್ನೇಹಿ ಬಜೆಟ್ ಬಿ ಎಂ ಸತೀಶ್

ಕೊಳೇನಹಳ್ಳಿ :ರೈತರಿಗೆ ಸಹಕಾರ ಸಂಘಗಳ ಮೂಲಕ ಕೊಡುವ ಶೂನ್ಯ ಬಡ್ಡಿ ದರ ಸಾಲ 3 ರಿಂದ 5 ಲಕ್ಷಕ್ಕೆ ಏರಿಕೆ, ಕಿರುಧಾನ್ಯ ಬೆಳೆಗಾರರಿಗೆ ಹೆಕ್ಟೇರ್ ಗೆ 10 ಸಾವಿರ ಪ್ರೋತ್ಸಾಹ ಧನ, ತೀರ್ಥಹಳ್ಳಿ ಕೃಷಿ ಸಂಶೋಧನಾ ಕೇಂದ್ರಕ್ಕೆ 10 ಕೋಟಿ, ನೆಟ್ಟೆರೋಗ ತಗುಲಿದ ತೊಗರಿ ಬೆಳೆಗೆ ಹೆಕ್ಟೇರ್ ಗೆ 10 ಸಾವಿರ ಪರಿಹಾರ ಧನ ಸೇರಿದಂತೆ ರೈತಪರ ಯೋಜನೆಗಳನ್ನು ಘೋಷಣೆ ಮಾಡಿ, ರೈತರಿಗೆ ಬಂಪರ್ ಗಿಫ್ಟ್ ನೀಡಲಾಗಿದೆ.
73 ಹೊಸ ಕರ್ನಾಟಕ ಪಬ್ಲಿಕ್ ಶಾಲೆ, 50 ಆದರ್ಶ ಶಾಲೆ, 3538 ಹೊಸ ಅಂಗನವಾಡಿ ಶಾಲೆ, 50 ಕನಕದಾಸ ವಸತಿ ಶಾಲೆಗಳ ಪ್ರಾರಂಭ, ಬೈಲಹೊಂಗಲ ತಾಲ್ಲೂಕಿನಲ್ಲಿ 217 ಕೋಟಿ ವೆಚ್ಚದಲ್ಲಿ ಸಂಗೋಳ್ಳಿ ರಾಯಣ್ಣ ಸೈನಿಕ ಶಾಲೆ ಮತ್ತು 9556 ಶಾಲಾ ಕೊಠಡಿಗಳ ನಿರ್ಮಾಣ ಸೇರಿದಂತೆ ಶಿಕ್ಷಣಕ್ಕೆ ಭರಪೂರ ಕೊಡುಗೆ ನೀಡಲಾಗಿದೆ.
ಒಟ್ಟಾರೆಯಾಗಿ ಎಲ್ಲಾ ವರ್ಗಗಳ ಹಿತಾಸಕ್ತಿಯ ಜನಪರ ಜನಸ್ನೇಹಿ ಮತ್ತು ರೈತಸ್ನೇಹಿ ಬಜೆಟ್. ಇದು ಉತ್ತಮ ಭವಿಷ್ಯದ ಭರವಸೆ ಮೂಡಿಸಿದ ಬಜೆಟ್.
ಬಿ ಎಂ ಸತೀಶ್,  ಕೊಳೇನಹಳ್ಳಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಸಂಚಾಲಕ ಮತ್ತು ಮಾಜಿ ಎಪಿಎಂಸಿ ಅಧ್ಯಕ್ಷ.

Leave a Reply

Your email address will not be published. Required fields are marked *

error: Content is protected !!