ಸರ್ವಸ್ನೇಹಿ, ಸರ್ವರ ಅಭಿವೃದ್ಧಿ ಬಜೆಟ್:

ಸರ್ವರ ಅಭಿವೃದ್ಧಿ ಬಜೆಟ್

ಬೆಂಗಳೂರು: ಮಾನ್ಯ ಮುಖ್ಯಮಂತ್ರಿಗಾಳದ ಶ್ರೀ ಬಸವರಾಜ ಎಸ್. ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರ ಇಂದು ಮಂಡಿಸಿದ 2023-24ನೇ ಸಾಲಿನ ಆಯವ್ಯಯ ರೈತರ, ಕೃಷಿ ಕಾರ್ಮಿಕರ, ದೀನ ದಲಿತರ, ಹಿಂದುಳಿದ ವರ್ಗದವರ ಹೀಗೆ ಎಲ್ಲಾ ವರ್ಗದವರ ಸರ್ವತೋಮುಖ ಅಭಿವೃದ್ಧಿಗಾಗಿ ಮಂಡಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.

ಕೃಷಿ ವಲಯವನ್ನು ಉತ್ತೇಜಿಸುವ ಸಲುವಾಗಿಯೇ, ಶೂನ್ಯ ಬಡ್ಡಿ ಕೃಷಿ ಸಾಲದ ಮಿತಿಯನ್ನು ರೂ.3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. 56 ಲಕ್ಷ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ರೂ.180 ಕೋಟಿ ವೆಚ್ಚದಲ್ಲಿ “ಜೀವನ್ ಜ್ಯೋತಿ ಯೋಜನೆಯನ್ನು” ಜಾರಿಗೊಳಿಸಲಾಗುತ್ತಿದೆ.
“ಸಹಸ್ರ ಸರೋವರ” ಕಾರ್ಯಕ್ರಮದಡಿ ರಾಜ್ಯದಲ್ಲಿ 1 ಸಾವಿರ ಸರೋವರಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು, ಇದು ಕೃಷಿ ವಲಯದ ನೀರಾವರಿ ಯೋಜನೆಗಳಿಗೆ ಅನುಕೂಲವಾಗುತ್ತದೆ.
ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ “ಭೂ ಸಿರಿ ಯೋಜನೆಯಡಿ” 10 ಸಾವಿರ ರೂಪಾಯಿಗಳ ಧನ ಸಹಾಯವನ್ನು ಒದಗಿಸಲಾಗುವುದು ಒಟ್ಟಾರೆಯಾಗಿ ಕೃಷಿ ಮತ್ತು ಅದಕ್ಕೆ ಪೂರಕ ಚಟುವಟಿಗಳ ವಲಯಕ್ಕೆ 2023-24ನೇ ಸಾಲಿನಲ್ಲಿ ಒಟ್ಟಾರೆಯಾಗಿ 39031 ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಲಾಗಿದೆ.
“ಅಮೃತ್ ಸ್ವಾಭಿಮಾನಿ ಕುರಿಗಾಹಿ ಯೋಜನೆ” ಅಡಿಯಲ್ಲಿ 20 ಸಾವಿರ ಫಲಾನುಭವಿಗಳಿಗೆ 355 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆ ಘಟಕಗಳನ್ನು ಸ್ಥಾಪಿಸುವ ಯೋಜನೆ ಜಾರಿಗೊಳಿಸಲಾಗುತ್ತಿದೆ.
ಕೇಂದ್ರ ಪುರಸ್ಕೃತ ಅಮೃತ್-2.0 ಯೋಜನೆ ಅಡಿಯಲ್ಲಿ ರಾಜ್ಯದ 287 ನಗರ ಪ್ರದೇಶಗಳಲ್ಲಿ ಒಟ್ಟಾರೆ 9230 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನೀರು ಸರಬರಾಜು, ಜಲಮೂಲಗಳ ಸಂರಕ್ಷಣೆ ಮತ್ತು ಪುನಶ್ಚೇತನಕ್ಕೆ ನೀಡಲಾಗಿದೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 2023-24ನೇ ಸಾಲಿನಲ್ಲಿ 185 ನಗರ ಮತ್ತು ಪಟ್ಟಣಗಳಲ್ಲಿ 6820 ಕೋಟಿ ರೂಪಾಯಿಗಳ ವೆಚ್ಚದಲ್ಲಿ 7.21 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗುವುದು.
ರಾಜ್ಯದ 5188 ಪೌರಕಾರ್ಮಿಕರಿಗೆ ಗೃಹ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು, ಇದರಲ್ಲಿ 3733 ಮನೆಗಳ ನಿರ್ಮಾಣ ಕಾರ್ಯ ಮುಗಿದಿದೆ.
“ಪೌರ ಆಸರೆ ಯೋಜನೆ” ಅಡಿಯಲ್ಲಿ 5000 ವಸತಿರಹಿತ ಪೌರ ನೌಕರರುಗಳಿಗೆ 300 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ.
ಸ್ಮಾರ್ಟ್ ಸಿಟಿ ಅಭಿಯಾನದಡಿಯಲ್ಲಿ ರಾಜ್ಯದ 7 ನಗರಗಳು ಆಯ್ಕೆಯಾಗಿದ್ದು, ಇದುವರೆಗೂ 5900 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, 4157 ಕೋಟಿ ರೂಪಾಯಿಗಳ ಮೊತ್ತದ 506 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ 3395 ಕೋಟಿ ರೂಪಾಯಿ ಮೊತ್ತದ 143 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು.
ಬೀದರ್ ಮತ್ತು ರಾಯಚೂರು ನಗರಸಭೆಗಳನ್ನು ಮಹಾನಗರ ಪಾಲಿಕೆಯನ್ನಾಗಿ ಉನ್ನತೀಕರಿಸುವ ಬಗ್ಗೆ ಮಾನದಂಡವನ್ನು ಪರಿಶೀಲಿಸಲಾಗುವುದು.

ಹೀಗೆ ನಗರಾಭಿವೃದ್ಧಿ ಇಲಾಖೆಗೆ ಒಟ್ಟಾರೆಯಾಗಿ 17938 ಕೋಟಿ ರೂಪಾಯಿಗಳನ್ನು ನೀಡಲಾಗಿದ್ದು, ಬೆಂಗಳೂರು ಮತ್ತು ಇತರ ನಗರಗಳಿಗೆ ತಾರತಮ್ಯ ರಹಿತವಾದ ಅಭಿವೃದ್ಧಿ ಕಾರ್ಯಗಳು ನಡೆಯಲು ಈ ಬಜೆಟ್ ನಲ್ಲಿ ಉತ್ತೇಜಿಸಲಾಗಿದೆ.
ಕೃಷಿ, ಆರೋಗ್ಯ, ಶಿಕ್ಷಣ, ಉದ್ಯೋಗ ಸೃಷ್ಠಿ, ಎಲ್ಲಾ ಸಮಾಜಗಳ ಅಭಿವೃದ್ಧಿಗೆ ಉತ್ತೇಜಿಸುವ ಉದ್ದೇಶದಿಂದ ಸಮಾನತೆಯ ಕಲ್ಪನೆಯನ್ನು ಇಟ್ಟುಕೊಂಡು ಅದನ್ನು ನೈಜವಾಗಿ ಅನುಷ್ಠಾನಕ್ಕೆ ತರಲು ಉದ್ದೇಶಿಸಿರುವ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ ರವರು 2023-24ನೇ ಸಾಲಿನ ಬಜೆಟ್ ಅನ್ನು ಮಂಡಿಸಿದ್ದಾರೆ.
ಎರಡನೇ ಬಾರಿಗೆ ಆಯವ್ಯಯವನ್ನು ಮಂಡಿಸಿರುವ ಶ್ರೀ ಬಸವರಾಜ ಎಸ್. ಬೊಮ್ಮಾಯಿ ರವರು ಸರ್ವೋದಯ ಮತ್ತು ಸರ್ವರ ಕ್ಷೇಮ ಮತ್ತು ಅಭಿವೃದ್ಧಿಯನ್ನು ದೃಷ್ಠಿಯಲ್ಲಿಟ್ಟುಕೊಂಡು, ಅದನ್ನು ಜಾರಿಗೊಳಿಸುವ ಉದ್ದೇಶದಿಂದಲೇ 2023-24ನೇ ಸಾಲಿನ ಆಯವ್ಯಯ ಮಹತ್ವವೆನಿಸಿದೆ

Leave a Reply

Your email address will not be published. Required fields are marked *

error: Content is protected !!